Covid-19 JN.1: ರಾಜ್ಯದಲ್ಲಿರುವ ಒಟ್ಟು 92 ಸಕ್ರಿಯ ಕೊರೊನಾ ಪ್ರಕರಣಗಳಲ್ಲಿ 80 ಬೆಂಗಳೂರು ನಗರದಲ್ಲಿವೆ. ಉಳಿದಂತೆ ಮೈಸೂರಿನಲ್ಲಿ 5, ಬಳ್ಳಾರಿಯಲ್ಲಿ 3, ರಾಮನಗರ ಹಾಗೂ ಮಂಡ್ಯದಲ್ಲಿ ತಲಾ 1 ಪ್ರಕರಣ ವರದಿಯಾಗಿದೆ. ಇವರಲ್ಲಿ 72 ಜನ ಮನೆಯಲ್ಲಿಯೇ ಪ್ರತ್ಯೇಕವಾಗಿದ್ದಾರೆ. 20 ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ. 7 ಜನ ಐಸಿಯುನಲ್ಲಿದ್ದು, ಇವರೆಲ್ಲರೂ ಇತರ ಸಮಸ್ಯೆಗಳಿಂದಲೂ ಬಳಲುತ್ತಿದ್ದಾರೆ.
RT-PCR kit for Monkeypox Test: ಮಂಕಿಪಾಕ್ಸ್ ವೈರಸ್ಗಾಗಿ ನೈಜ-ಸಮಯಾಧಾರಿತ ಪಿಸಿಆರ್ ಕಿಟ್ ಅನ್ನು ಅಭಿವೃದ್ಧಿಪಡಿಸಿರುವುದಾಗಿ ಡಯಾಗ್ನೋಸ್ಟಿಕ್ ಕಂಪನಿ Genes2Me ಹೇಳಿಕೊಂಡಿದೆ. POX-Q ಮಲ್ಟಿಪ್ಲೆಕ್ಸ್ನೊಂದಿಗೆ ಬರುವ ತನ್ನ ಈ RT-PCR ಕಿಟ್ ಹೆಚ್ಚಿನ ಆವರ್ತನ ದರದೊಂದಿಗೆ 50 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಫಲಿತಾಂಶಗಳನ್ನು ನೀಡುತ್ತದೆ ಎಂದು ಕಂಪನಿಯು ಹೇಳಿಕೊಂಡಿದೆ.
Fake Covid report: ದುಬೈಗೆ ಹೊರಟಿದ್ದ 40 ಪ್ರಯಾಣಿಕರು ಸಲ್ಲಿಸಿದ ಕ್ಷಿಪ್ರ RT-PCR ಪರೀಕ್ಷಾ ವರದಿಗಳಲ್ಲಿನ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದಾಗ, ಸಂಬಂಧಿಸಿದ ಪ್ರಯಾಣಿಕರಿಗೆ ಹೊಂದಿಕೆಯಾಗದ ಕಾರಣ ಮುಂಬೈ ವಿಮಾನ ನಿಲ್ದಾಣದಲ್ಲಿ ತಡೆಹಿಡಿಯಲಾಗಿದೆ.
COVID-19 ಸೋಂಕಿನ ಸೌಮ್ಯ ಮತ್ತು ಮಧ್ಯಮ ರೋಗಲಕ್ಷಣಗಳನ್ನು ಹೊಂದಿರುವ ಜನರು 14 ದಿನಗಳ ಕ್ವಾರೆಂಟೈನ್ ಅವಧಿಯ ನಂತರ ಅವರು ಕೋವಿಡ್ ಋಣಾತ್ಮಕವಾಗಿದ್ದಾರೆ ಎಂದು ಪರೀಕ್ಷಿಸಲು ಮರು ಪರೀಕ್ಷೆಗೆ ಒಳಗಾಗಬೇಕಾಗಿಲ್ಲ ಎಂದು ಹೇಳಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.