Russian crude oil importing : ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ದೊಡ್ಡ ಬದಲಾವಣೆಗಳು ಸಂಭವಿಸುವ ಸಾಧ್ಯತೆ ಇದೆ. ಇದಕ್ಕೆ ಪ್ರಮುಖ ಕಾರಣವಾಗಿ ರಷ್ಯಾದಿಂದ ತೈಲ ಖರೀದಿಯಲ್ಲಿ ಉಂಟಾದ ಬದಲಾವಣೆಗಳನ್ನು ಹೇಳಬಹುದು.
ಇತ್ತೀಚಿನ ದಿನಗಳಲ್ಲಿ ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವ ಭಾರತ, ಅದನ್ನು ಸಂಸ್ಕರಿಸಿ, ಇಂಧನವನ್ನಾಗಿಸಿ, ಐರೋಪ್ಯ ಒಕ್ಕೂಟಕ್ಕೆ ಪೂರೈಸುತ್ತಿದೆ. ಈ ಮೂಲಕ ಪಾಶ್ಚಾತ್ಯ ರಾಷ್ಟ್ರಗಳು ತಮ್ಮ ಇತ್ತೀಚಿನ ನೀತಿಯಂತೆ ಈ ಇಂಧನದ ಮೂಲ ರಾಷ್ಟ್ರವಾದ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳದಂತೆಯೂ ಆಗುತ್ತಿದೆ.
ಅನೇಕ ಪಾಶ್ಚಿಮಾತ್ಯ ದೇಶಗಳು ರಷ್ಯಾದಿಂದ ಕಚ್ಚಾ ತೈಲವನ್ನು ರಫ್ತು ಮಾಡದಂತೆ ಭಾರತ ಸೇರಿದಂತೆ ಇತರ ದೇಶಗಳಿಗೆ ಒತ್ತಡ ಹೇರಲು ಪ್ರಯತ್ನಿಸುತ್ತಿವೆ. ಇದು ಉಕ್ರೇನ್‌ನೊಂದಿಗಿನ ಯುದ್ಧಕ್ಕೆ ರಷ್ಯಾ ಹಣವನ್ನು ನೀಡುತ್ತದೆ ಎಂಬುವುದು ಆ ದೇಶಗಳ ನಂಬಿಕೆಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.