Hotel Room MMS: ಇತ್ತೀಚಿಗೆ ಹೋಟೆಲ್ ರೂಮ್ ಗಳಿಗೆ ಭೇಟಿ ನೀಡುವವರಲ್ಲಿ ಎಂಎಂಎಸ್ ಭಯ ಹೆಚ್ಚಾಗುತ್ತಿದೆ. ಏಕೆಂದರೆ ಹೋಟೆಲ್ ರೂಮ್ ಗಳಲ್ಲಿ ಕ್ಯಾಮರಾ ಅಡಗಿಸಿಟ್ಟು, ಎಂಎಂಎಸ್ ತಯಾರಿಸಿ ವೈರಲ್ ಮಾಡಲಾಗುತ್ತದೆ. ಇಂತಹ ಘಟನೆ ನಿಮ್ಮ ಜೊತೆಗೆ ನಡೆಯಬಾರದು ಎಂಬುದನ್ನು ಗಮನದಲ್ಲಿಟ್ಟುಕೊಂಡು ಇಂದು ನಾವು ನಿಮಗೆ ಕೆಲ ಸಲಹೆಗಳನ್ನು ನೀಡುತ್ತಿದ್ದೇವೆ. ಈ ಸಲಹೆಗಳು ನಿಮ್ಮನ್ನು ಹಿಡನ್ ಕ್ಯಾಮಾರಾ ಕಣ್ಣುಗಳಿಂದ ರಕ್ಷಿಸುತ್ತವೆ.
ಇತ್ತೀಚೆಗಷ್ಟೆ ರಾಜ್ಯದಲ್ಲಿ 545 ಪೊಲೀಸ್ ಸಬ್ ಇನ್ಸ್ಪೆಕ್ಟರ್ಗಳ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮ ರಾಜ್ಯ ಮಾತ್ರವಲ್ಲ, ರಾಷ್ಟ್ರಮಟ್ಟದಲ್ಲೂ ದೊಡ್ಡಮಟ್ಟದ ಸದ್ದು ಮಾಡಿತ್ತು. ಈ ಪ್ರಕರಣ ಇನ್ನೂ ತನಿಖಾ ಹಂತದಲ್ಲಿ ಇರುವಾಗಲೇ ಮತ್ತೊಂದು ಇಲಾಖೆಯೊಂದರ ಪರೀಕ್ಷೆಯಲ್ಲಿ ಅಕ್ರಮದ ವಾಸನೆ ಬರುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಗೋಕಾಕ್ ಮೂಲದ ಕಿಂಗ್ಪಿನ್ ಕಲಬುರಗಿಗೆ ಬಂದು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದು, ಕಲಬುರಗಿ ಪೊಲೀಸರಿಗೆ ಪ್ರಕರಣ ತಲೆನೋವಾಗಿ ಪರಿಣಮಿಸಿದೆ.
Online Scam Fake Facebook Mails Alert: ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಅಂತರ್ಜಾಲದ ಬಳಕೆಯಿಂದ ಆನ್ಲೈನ್ ವಂಚನೆ ಪ್ರಕರಣಗಳೂ ಕೂಡ ಹೆಚ್ಚುತ್ತಿವೆ. ಇತ್ತೀಚಿಗೆ ಪ್ರಕಟಗೊಂಡ ವರದಿಯೊಂದರ ಪ್ರಕಾರ Gmail ಮತ್ತು Hotmail ಬಳಕೆದಾರರಿಗೆ ಅಪಾಯಕಾರಿ ಮೇಲ್ ವೊಂದು ಬರುತ್ತಿದೆ ಎಂದು ಹೇಳಲಾಗಿದೆ. ಈ ಮೇಲ್ ತುಂಬಾ ಅಪಾಯಕಾರಿಯಾಗಿದೆ ಎನ್ನಲಾಗಿದೆ.
WhatsApp Fraud - ವಾಟ್ಸ್ ಆಪ್ ಎಷ್ಟು ಜನಪ್ರಿಯವಾಗಿದೆಯೋ ಅಷ್ಟೇ ಅಪಾಯಕಾರಿ ಕೂಡ ಆಗಿದೆ. ನಿತ್ಯ ಸಾಕಷ್ಟು ಸೈಬರ್ ಹಗರಣಗಳು ನಡೆಯುತ್ತಿದ್ದು, ಇದು ಬಳಕೆದಾರರಿಗೆ ಸಾಕಷ್ಟು ಹಾನಿ ಉಂಟುಮಾಡುತ್ತಿದೆ. ಇಂತಹ ಒಂದು ಹಗರಣ ಎಂದರೆ ಅದು ವೆರಿಫಿಕೆಶನ್ ಕೋಡ್ ಹಗರಣ. ಏನಿದು ಪರಿಶೀಲನೆ ಹಗರಣ ಎಂಬುದನ್ನು ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.
TikTok ಹೆಸರಿನಡಿ ಖದೀಮರು ಮಾಲ್ವೇಯರ್ ಗಳನ್ನು ಕಳುಹಿಸುತ್ತಿದ್ದಾರೆ. ಮಾಲ್ವೇಯರ್ ನಿಮ್ಮ ಕಂಪ್ಯೂಟರ್ ಗೆ ಹಾನಿ ತಲುಪಿಸುವ ಉದ್ದೇಶದಿಂದ ತಯಾರಿಸಲಾಗಿರುವ ಒಂದು ರೀತಿಯ ಸಾಫ್ಟ್ ವೇರ್ ಆಗಿದೆ. ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಕದಿಯಲು ಹ್ಯಾಕರ್ ಗಳು ಇದನ್ನು ಬಳಸುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.