Rohit Sharma: ಟಿ20 ವಿಶ್ವಕಪ್ 2024ರ ಗೆಲುವಿನ ನಂತರ ಭಾರತ ತಂಡದ ಕ್ಯಾಪ್ಟನ್ ಮಣ್ಣು ತಿನ್ನುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ರೋಹಿತ್ ಶರ್ಮಾ ಈ ನಡುವಳಿಕೆಯ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
T20 World Cup 2024: ಆಸ್ಟ್ರೇಲಿಯಾದ ಮಾಧ್ಯಮಗಳು ಮತ್ತೊಮ್ಮೆ ಟೀಂ ಇಂಡಿಯಾದ ವಿರೋಧವಾಗಿ ಲೇಖನ ಬರೆಯುವ ಮೂಲಕ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. 2024 ರ ಟಿ20 ವಿಶ್ವಕಪ್ನಲ್ಲಿ ಭಾರತದ ಗೆಲುವು ಸಾಧಿಸುತ್ತದೆ ಎನ್ನುವ ಬಗ್ಗೆ ಅನುಮಾನ ಇತ್ತು, ಈ ಕುರಿತು ಅಂದಾಜು ಮಾಡಿದ್ದ ಆಸಿಸ್ ಮಾಧ್ಯಮಗಳು ಆಸಿಸ್ ತಂಡ ಸೋಲುತ್ತಿದ್ದಂತೆ ಭಾರತ ತಂಡದ ವಿರೋಧವಾಗಿ ಲೇಖನಗಳನ್ನು ಬರೆಯಲು ಆರಂಭಿಸಿದ್ದಾರೆ.
Virat Kohli: ಟೀಂ ಇಂಡಿಯಾ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ T20 ವಿಶ್ವಕಪ್ 2024 ಚಾಂಪಿಯನ್ ಆಯಿತು. ಆ ಅದ್ಭುತ ಕ್ಷಣಗಳಲ್ಲಿ ಟೀಂ ಇಂಡಿಯಾ ಆಟಗಾರರ ಜೊತೆಗೆ ಇಡೀ ಭಾರತವೇ ಭಾವುಕವಾಗಿತ್ತು. ಆ ಸಂತೋಷದ ಕಣ್ಣೀರು ಕಡಿಮೆಯಾದ ನಂತರ, ಭಾರತಕ್ಕೆ ಟಿ 20 ವಿಶ್ವಕಪ್ ವಿಜಯೋತ್ಸವ ಆಚರಿಸುವ ಸಮಯ ಬಂತು.. ಆಗ ಟೀಂ ಇಂಡಿಯಾ ಆಟಗಾರರ ಜೊತೆ ವಿರಾಟ್ ಕೊಹ್ಲಿ ಮೈದಾನದಲ್ಲಿ ಪ್ರೇಕ್ಷಕರಂತೆ ಕುಣಿದು ಕುಪ್ಪಳಿಸಿದರು.
Narendra Modi: ಶನಿವಾರ ರಾತ್ರಿ ಬಾರ್ಬಡೋಸ್ನಲ್ಲಿ ನಡೆದ ಟಿ20 ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಬೆಳಗ್ಗೆ ಅಭಿನಂದಿಸಿದ್ದಾರೆ. ರೋಹಿತ್ ಶರ್ಮಾ ಅವರ ಅತ್ಯುತ್ತಮ ನಾಯಕತ್ವವನ್ನು ಶ್ಲಾಘಿಸಿದ ಪ್ರಧಾನಿ ಮೋದಿ ಟಿ 20 ಕ್ರಿಕೆಟ್ನಲ್ಲಿ ಟೀಂ ಇಂಡಿಯಾ ಆಟವನ್ನು ಶ್ಲಾಘಿಸಿದ್ದಾರೆ.
T20 World Cup 2024:ಶನಿವಾರ, ಜೂನ್ 29 ರಂದು ನಡೆದ ಟಿ20 ವಿಶ್ವಕಪ್ 2024ರ ಫೈನಲ್ ಪಂದ್ಯದಲ್ಲಿ ಭಾರತ ತಂಡ ಎದುರಾಳಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ರೋಚಕ ಜಯ ಸಾಧಿಸಿದೆ, ಈ ಮೂಲಕ ಟಿ20 ಕಪ್ ತನ್ನದಾಗಿಸಿಕೊಂಡಿದೆ. ಇದರ ಬೆನ್ನಲ್ಲೆ ವಿರಾಟ್ ಕೋಹ್ಲಿ ತಮ್ಮ ಅಂತಾರಾಷ್ಟರೀಯ ಟಿ20 ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ವಿರಾಟ್ ತಮ್ಮ ವಿದಾಯ ಘೋಷಿಸುತ್ತಿದ್ದ ಬೆನ್ನಲ್ಲೆ ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಕೂಡ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.