Weekend Curfew: ದೆಹಲಿಯಲ್ಲಿ ವಾರಾಂತ್ಯದ ಕರ್ಫ್ಯೂ

Weekend Curfew: ದೆಹಲಿ ಸೇರಿದಂತೆ ಇಡೀ ದೇಶದಲ್ಲಿ ವೇಗವಾಗಿ ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣಗಳ ಮಧ್ಯೆ ರಾಷ್ಟ್ರ ರಾಜಧಾನಿಯಲ್ಲಿ ಸೋಂಕಿನ ವೇಗವನ್ನು ತಡೆಯಲು ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇಂದು ನಡೆದ ಡಿಡಿಎಂಎ ಮಹತ್ವದ ಸಭೆಯಲ್ಲಿ ಇಲ್ಲಿ ವೀಕೆಂಡ್ ಕರ್ಫ್ಯೂ ಹೇರಲು ನಿರ್ಧರಿಸಲಾಗಿದೆ.

Written by - Yashaswini V | Last Updated : Jan 4, 2022, 02:11 PM IST
  • ದೆಹಲಿ ಮುಖ್ಯಮಂತ್ರಿಗೂ ಕರೋನಾ
  • ದೆಹಲಿಯಲ್ಲಿ ವಾರಾಂತ್ಯದ ಕರ್ಫ್ಯೂ
  • ಡಿಡಿಎಂಎ ಮಹತ್ವದ ನಿರ್ಧಾರ
Weekend Curfew: ದೆಹಲಿಯಲ್ಲಿ ವಾರಾಂತ್ಯದ ಕರ್ಫ್ಯೂ  title=
Weekend Curfew In Delhi

Weekend Curfew: ದೇಶಾದ್ಯಂತ ವೇಗವಾಗಿ ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣಗಳ ನಡುವೆ, ದೆಹಲಿಯಲ್ಲಿ ಸೋಂಕಿನ ವೇಗವನ್ನು ತಡೆಯಲು ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ವೇಗವಾಗಿ ಹೆಚ್ಚುತ್ತಿರುವ ಪ್ರಕರಣಗಳನ್ನು ನಿಯಂತ್ರಿಸಲು ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಸೋಂಕಿನ ಅನಿಯಂತ್ರಿತ ವೇಗಕ್ಕೆ ಸಂಬಂಧಿಸಿದಂತೆ ಇಂದು ನಡೆದ ಡಿಡಿಎಂಎ ಸಭೆಯಲ್ಲಿ, ದೆಹಲಿಯಲ್ಲಿ ಮತ್ತೊಮ್ಮೆ ವಾರಾಂತ್ಯ ಕರ್ಫ್ಯೂ ವಿಧಿಸಲು ನಿರ್ಧರಿಸಲಾಗಿದೆ.

ಸರ್ಕಾರಿ ಕಚೇರಿಗಳಲ್ಲಿ ಶೇ 50ರಷ್ಟು ಸಾಮರ್ಥ್ಯದಲ್ಲಿ ಕೆಲಸ:
ಕರೋನಾವೈರಸ್ ಹೊಸ ರೂಪಾಂತರ ಓಮಿಕ್ರಾನ್  (Omicron)  ಶರವೇಗದಲ್ಲಿ ಹರಡುತ್ತಿರುವ ಹಿನ್ನಲೆಯಲ್ಲಿ ಅದನ್ನು ನಿಯಂತ್ರಿಸಲು ಖಾಸಗಿ ಮತ್ತು ಸರ್ಕಾರಿ ಕಚೇರಿಗಳಲ್ಲಿ ಶೇ 50ರಷ್ಟು ಸಾಮರ್ಥ್ಯದಲ್ಲಿ ಕೆಲಸ ಮಾಡುವಂತೆ ಸೂಚಿಸಲಾಗಿದೆ. ಅದೇ ರೀತಿ ಕೋವಿಡ್-19 ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ದೆಹಲಿಯಲ್ಲಿ ಅಗತ್ಯ ಸೇವೆಗಳನ್ನು ಮುಂದುವರಿಸಲಾಗುವುದು ಎಂದು ಹೇಳಲಾಗಿದೆ. ಇನ್ನು ದೆಹಲಿಯಲ್ಲಿ ವೀಕೆಂಡ್ ಕರ್ಫ್ಯೂಗೆ (Weekend Curfew) ಸಂಬಂಧಿಸಿದಂತೆ ಶೀಘ್ರದಲ್ಲೇ ಅಧಿಕೃತ ಆದೇಶ ಮತ್ತು ಅಧಿಸೂಚನೆಯನ್ನು ಹೊರಡಿಸಲಾಗುವುದು ಎಂದು ತಿಳಿದುಬಂದಿದೆ.

ದೆಹಲಿಯಲ್ಲಿ ಕರೋನಾ ಆತಂಕಕಾರಿ ಪರಿಸ್ಥಿತಿಯ ನಡುವೆ, ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಪತ್ರಿಕಾಗೋಷ್ಠಿ ನಡೆಸುವ ಮೂಲಕ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ದೆಹಲಿ ಸೇರಿದಂತೆ ಇಡೀ ದೇಶದಲ್ಲಿ ಓಮಿಕ್ರಾನ್ ಗ್ರಾಫ್ ನಿರಂತರವಾಗಿ ಹೆಚ್ಚುತ್ತಿದೆ. ಓಮಿಕ್ರಾನ್ (Omicron) ಹೆಚ್ಚು ಹಾನಿ ಮಾಡದಿದ್ದರೂ, ಸದ್ಯಕ್ಕೆ ಇಡೀ ವಿಶ್ವದಲ್ಲಿ ಅದೇ ಟ್ರೆಂಡ್ ಅನ್ನು ದೆಹಲಿಯಲ್ಲೂ ತೋರಿಸುತ್ತಿದೆ. ದೆಹಲಿಯ ಆಸ್ಪತ್ರೆಯಲ್ಲಿ ಓಮಿಕ್ರಾನ್ ಸೋಂಕಿತ 350 ಮಂದಿ ದಾಖಲಾಗಿದ್ದಾರೆ. ಇದರಲ್ಲಿ 124 ಸೋಂಕಿತರು ಆಮ್ಲಜನಕ ಬೆಂಬಲದಲ್ಲಿದ್ದಾರೆ. 7 ಮಂದಿ ವೆಂಟಿಲೇಟರ್‌ನಲ್ಲಿ  ಇದ್ದಾರೆ ಎಂದು ಮಾಹಿತಿ ನೀಡಿದರು. ಈ ವೇಳೆ ನಾವೆಲ್ಲರೂ ಕೋವಿಡ್‌ನಿಂದ ದೂರವಿರುವುದು ಅಗತ್ಯ ಎಂದು ಉಪಮುಖ್ಯಮಂತ್ರಿ ಹೇಳಿದರು. 

ಇದನ್ನೂ ಓದಿ- Omicron: ಓಮಿಕ್ರಾನ್ ನಿಮ್ಮ ಶತ್ರುವಲ್ಲ! ಕರೋನಾವನ್ನು ತೊಡೆದುಹಾಕಲು ನೈಸರ್ಗಿಕ ಲಸಿಕೆ!

ಇಂದಿನಿಂದ ಡಿಡಿಎಂಎ ನಿರ್ಧಾರ:
>> ಶನಿವಾರ ಮತ್ತು ಭಾನುವಾರ ದೆಹಲಿಯಲ್ಲಿ ಕರ್ಫ್ಯೂ (Weekend Curfew) ಇರುತ್ತದೆ.
>> ದಿಲ್ಲಿಯ ಸರ್ಕಾರಿ ಕಚೇರಿಗಳಲ್ಲಿ 50% ಉದ್ಯೋಗಿಗಳೊಂದಿಗೆ ಕರ್ತವ್ಯ ನಿರ್ವಹಿಸಲು ಸೂಚನೆ 
>> ಅಗತ್ಯ ಸೇವೆಗಳ ಕಚೇರಿಗಳು ತೆರೆದಿರುತ್ತವೆ.
>> ಖಾಸಗಿ ಕಚೇರಿಗಳು 50 ಪ್ರತಿಶತ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತವೆ. ಉಳಿದವರು ಮನೆಯಿಂದ ಅಥವಾ ಆನ್‌ಲೈನ್‌ನಲ್ಲಿ ಕೆಲಸ ಮಾಡುತ್ತಾರೆ.

AIIMS ರಜಾ ರದ್ದು:
ಹೆಚ್ಚುತ್ತಿರುವ ಕರೋನಾ (Coronavirus) ಪ್ರಕರಣಗಳ ದೃಷ್ಟಿಯಿಂದ, ದೆಹಲಿ ಏಮ್ಸ್ ತನ್ನ ಚಳಿಗಾಲದ ರಜೆಗಳನ್ನು ಅಂದರೆ ಉಳಿದ ರಜಾದಿನಗಳನ್ನು (ಜನವರಿ 5 ರಿಂದ 10 ರವರೆಗೆ) ರದ್ದುಗೊಳಿಸಿದೆ. ರಜೆಯಲ್ಲಿರುವ ಸಿಬ್ಬಂದಿಗೆ ಆದಷ್ಟು ಬೇಗ ಕರ್ತವ್ಯಕ್ಕೆ ಮರಳುವಂತೆ ಏಮ್ಸ್ (AIIMS) ಹೇಳಿದೆ. ವಾಸ್ತವವಾಗಿ ಇಲ್ಲಿ ಈಗ ಧನಾತ್ಮಕತೆಯ ದರವು 6.46% ತಲುಪಿದೆ. ಆದಾಗ್ಯೂ, ಈ ಸಮಯದಲ್ಲಿ 1509 ರೋಗಿಗಳು ಸಹ ಗುಣಮುಖರಾಗಿದ್ದಾರೆ.

ಸೋಮವಾರ, 4099 ಹೊಸ ಪ್ರಕರಣಗಳು ದಾಖಲಾಗಿದ್ದು, ಇದು ಸುಮಾರು 7 ತಿಂಗಳಲ್ಲಿ ಅತಿ ಹೆಚ್ಚು ಕರೋನಾ ಪ್ರಕರಣವಾಗಿದೆ. ಈ ಹಿಂದೆ ಮೇ 18 ರಂದು 4482 ಕೋವಿಡ್ ಪ್ರಕರಣಗಳು ವರದಿಯಾಗಿದ್ದವು. 

ಇದನ್ನೂ ಓದಿ-  Arvind Kejriwal: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ಗೆ ಕರೋನಾ ದೃಢ

ದೆಹಲಿಯ ಕರೋನಾ ಬುಲೆಟಿನ್:
ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ (Coronavirus) ಸೋಂಕು ವೇಗವಾಗಿ ಹರಡುತ್ತಿದೆ. ಸಫ್ದರ್‌ಜಂಗ್ ಆಸ್ಪತ್ರೆ, ಲೇಡಿ ಹಾರ್ಡಿಂಜ್ ವೈದ್ಯಕೀಯ ಕಾಲೇಜು, ಆರ್‌ಎಂಎಲ್, ಏಮ್ಸ್ ಮತ್ತು ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜುಗಳಲ್ಲಿ ಸುಮಾರು 59 ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ಸೋಂಕಿನ ಹಿಡಿತಕ್ಕೆ ಒಳಗಾಗಿದ್ದಾರೆ. ಸೋಮವಾರ 4099 ಹೊಸ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಇಂದು ನಡೆದ ಡಿಡಿಎಂಎ ಸಭೆಯಲ್ಲಿ ಈ ಹೊಸ ನಿಷೇಧ ಹೇರಲು ನಿರ್ಧರಿಸಲಾಗಿದೆ. 

ದೆಹಲಿ ಮುಖ್ಯಮಂತ್ರಿಗೂ ಕರೋನಾ:
ಓಮಿಕ್ರಾನ್‌ನ ಹೇಳಿಕೆಗಳು ಸೌಮ್ಯವಾಗಿದ್ದರೂ, ದೆಹಲಿಯಲ್ಲಿ (Delhi) ಕೊರೊನಾ ಹರಡುವ ವೇಗವು ನಿಧಾನವಾಗಿ ಆತಂಕಕಾರಿಯಾಗುತ್ತಿದೆ. ಈ ಸಂಬಂಧ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರಿಗೂ ಕೊರೊನಾ ಸೋಂಕು ದೃಢಪಟ್ಟಿದೆ. ದೆಹಲಿ ಮುಖ್ಯಮಂತ್ರಿಗಳು ಮಾತ್ರವಲ್ಲದೆ, ಬಿಜೆಪಿ ಸಂಸದ ಮನೋಜ್ ತಿವಾರಿ, ಮಾಜಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ಅವರಿಗೂ ಕೂಡ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ದೆಹಲಿಯ ಆರೋಗ್ಯ ಸಚಿವರು ಹೇಳುವುದೇನು?
ಕರೋನಾ ವೈರಸ್‌ನ ರೂಪಾಂತರವಾದ ಓಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆ, ದೆಹಲಿ ಸರ್ಕಾರದ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರು ದೆಹಲಿಯಲ್ಲಿ ಕರೋನಾ ಪ್ರಕರಣಗಳ ಸಂಖ್ಯೆ ಒಂದು ವಾರದಲ್ಲಿ ಗರಿಷ್ಠ ಮಟ್ಟವನ್ನು ತಲುಪಲಿದೆ ಎಂದು ಹೇಳಿದ್ದಾರೆ. ಇತ್ತೀಚಿನ ಜೀನೋಮ್ ಸೀಕ್ವೆನ್ಸಿಂಗ್ ವರದಿಯ ಪ್ರಕಾರ, ದೆಹಲಿಯಲ್ಲಿ ಪರೀಕ್ಷಿಸಲಾದ 81 ಪ್ರತಿಶತದಷ್ಟು ಕರೋನಾ ಮಾದರಿಗಳಲ್ಲಿ ಓಮಿಕ್ರಾನ್ ಪತ್ತೆಯಾಗಿದೆ, ಆದರೆ ಎರಡನೇ ರೂಪಾಂತರದ ಡೆಲ್ಟಾದ 8.5 ಪ್ರತಿಶತ ಪ್ರಕರಣಗಳು ಮಾತ್ರ ವರದಿಯಾಗಿವೆ. ಇದು ಓಮಿಕ್ರಾನ್ ಗಿಂತ ಹೆಚ್ಚು ಅಪಾಯಕಾರಿ ವೈರಸ್ ಎಂದು ಅವರು ಹೇಳಿದರು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News