Ratan Tata ಕಂಪನಿಯಲ್ಲಿ30 ಸಾವಿರ ಹುದ್ದೆಗಳು ಖಾಲಿ ! ನಿರುದ್ಯೋಗಿಗಳಿಗೆ ಇಲ್ಲಿದೆ ಅವಕಾಶ

ಚಿಪ್ ತಯಾರಿಕಾ ಕಾರ್ಖಾನೆಯನ್ನು ಸ್ಥಾಪಿಸಲು ಟಾಟಾ ಗ್ರೂಪ್ ಅಸ್ಸಾಂ ಸರ್ಕಾರದೊಂದಿಗೆ 60 ವರ್ಷಗಳ ಗುತ್ತಿಗೆ ಒಪ್ಪಂದವನ್ನು ಮಾಡಿಕೊಂಡಿದೆ.  

Written by - Ranjitha R K | Last Updated : Jul 17, 2024, 01:25 PM IST
  • ಚಿಪ್ ತಯಾರಿಕಾ ಕಾರ್ಖಾನೆಯನ್ನು ಸ್ಥಾಪಿಸಲು ಒಪ್ಪಂದ
  • 27,000 ಕೋಟಿ ಹೂಡಿಕೆ
  • 2025ರ ಮಧ್ಯದ ವೇಳೆಗೆ ಕಾರ್ಯನಿರ್ವಹಿಸಲಿದೆ ಕಂಪನಿ
Ratan Tata ಕಂಪನಿಯಲ್ಲಿ30 ಸಾವಿರ  ಹುದ್ದೆಗಳು ಖಾಲಿ ! ನಿರುದ್ಯೋಗಿಗಳಿಗೆ ಇಲ್ಲಿದೆ ಅವಕಾಶ title=

Ratan Tata  Company : ಮೊರಿಗಾಂವ್ ಜಿಲ್ಲೆಯ ಜಾಗಿರೋಡ್‌ನಲ್ಲಿ ಚಿಪ್ ತಯಾರಿಕಾ ಕಾರ್ಖಾನೆಯನ್ನು ಸ್ಥಾಪಿಸಲು ಟಾಟಾ ಗ್ರೂಪ್ ಅಸ್ಸಾಂ ಸರ್ಕಾರದೊಂದಿಗೆ 60 ವರ್ಷಗಳ ಗುತ್ತಿಗೆ ಒಪ್ಪಂದವನ್ನು ಮಾಡಿಕೊಂಡಿದೆ.ಟಾಟಾ ಗ್ರೂಪ್ ಮಂಡಳಿಯ ಸದಸ್ಯ ರಂಜನ್ ಬಂಡೋಪಾಧ್ಯಾಯ ಮತ್ತು ಅಸ್ಸಾಂ ಕೈಗಾರಿಕಾ ಅಭಿವೃದ್ಧಿ ನಿಗಮ (ಎಐಡಿಸಿ) ಮ್ಯಾನೇಜರ್ (ತಾಂತ್ರಿಕ) ಮತ್ತು ಪ್ರಾಜೆಕ್ಟ್ ಇನ್‌ಚಾರ್ಜ್ ಧೀರಜ್ ಪೆಗು ಅವರು ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ಒಪ್ಪಂದವನ್ನು ಅಂತಿಮಗೊಳಿಸಿದರು.ಈ ಒಪ್ಪಂದದ ಸಂದರ್ಭದಲ್ಲಿ ಜಿಲ್ಲಾಧಿಕಾರಿ (ಡಿಸಿ) ದೇವಶಿಶ್ ಶರ್ಮಾ ಕೂಡಾ  ಉಪಸ್ಥಿತರಿದ್ದರು. 

27,000 ಕೋಟಿ ಹೂಡಿಕೆ :
27,000 ಕೋಟಿ ಬಂಡವಾಳದಲ್ಲಿ ಹಿಂದೂಸ್ತಾನ್ ಪೇಪರ್ ಕಾರ್ಪೊರೇಷನ್ ಲಿಮಿಟೆಡ್‌ನ ಹಳೆಯ ಕಾರ್ಖಾನೆಯ ಸ್ಥಳದಲ್ಲಿ ಈ ಕಾರ್ಖಾನೆಯನ್ನು ನಿರ್ಮಿಸಲಾಗುವುದು.ಈ ಕಾರ್ಖಾನೆಯ ಮೊದಲ ಹಂತವು 2025ರ ಮಧ್ಯದ ವೇಳೆಗೆ ಕಾರ್ಯನಿರ್ವಹಿಸಲಿದ್ದು, 30,000 ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ : ಅತಿ ಹೆಚ್ಚು ಮೈಲೇಜ್ ನೀಡುವ ಬೈಕ್ ಗಳು ಇವು ! ಒಮ್ಮೆ ಟ್ಯಾಂಕ್ ತುಂಬಿಸಿದರೆ ತಿಂಗಳು ಪೂರ್ತಿ ಓಡಾಡಬಹುದು !

ಈ ಹೊಸ ಕಾರ್ಖಾನೆಯು ಪ್ರಪಂಚದಾದ್ಯಂತ AI,ಕೈಗಾರಿಕಾ ಮತ್ತು ಸಾಮಾನ್ಯ ಗ್ರಾಹಕ ಬಳಕೆಗಾಗಿ ಎಲೆಕ್ಟ್ರಾನಿಕ್ಸ್‌ಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುತ್ತದೆ ಎಂದು ಟಾಟಾ ಗ್ರೂಪ್ ಹೇಳಿದೆ.ವೈರ್ ಬಾಂಡಿಂಗ್, ಫ್ಲಿಪ್ ಚಿಪ್ ಮತ್ತು ಇಂಟಿಗ್ರೇಟೆಡ್ ಸಿಸ್ಟಮ್ಸ್ ಪ್ಯಾಕೇಜಿಂಗ್ (ISP) ಎಂಬ ಮೂರು ಪ್ರಮುಖ ತಂತ್ರಜ್ಞಾನಗಳನ್ನು ಆಧರಿಸಿ ಟಾಟಾ ಈ ಕಾರ್ಖಾನೆಯನ್ನು ನಿರ್ಮಿಸುತ್ತದೆ.ಭವಿಷ್ಯದಲ್ಲಿ ಹೆಚ್ಚು ಸುಧಾರಿತ ಪ್ಯಾಕೇಜಿಂಗ್ ತಂತ್ರಜ್ಞಾನವನ್ನು ಪರಿಚಯಿಸುವ ಯೋಜನೆ ಇದೆ.

ಸಿಎಂ ಹಿಮಂತ ಬಿಸ್ವ ಶರ್ಮಾ ಹೇಳಿದ್ದೇನು? :
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮಾತನಾಡಿ, ಟಾಟಾ ಗ್ರೂಪ್‌ನ ಸಹಯೋಗದೊಂದಿಗೆ ಕಾರ್ಖಾನೆಯೊಳಗೆ ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ನಿರ್ಮಿಸಲು ನಿರ್ಧರಿಸಿದ್ದೇವೆ.ಈ ಕೇಂದ್ರವು ಈಶಾನ್ಯದ ಯುವಕರಿಗೆ AI, ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ತರಬೇತಿಯನ್ನು ನೀಡುತ್ತದೆ ಇದರಿಂದ ಅವರು ಜಾಗಿರೋಡ್ ಘಟಕದಲ್ಲಿ ಉದ್ಯೋಗ ಪಡೆಯಲು ಸಹಾಯ ಮಾಡಬಹುದು.

ಇದನ್ನೂ ಓದಿ : 75 ಇಂಚಿನ Smart TV ಬಿಡುಗಡೆ ಮಾಡಿದ Thomson!ಬೆಲೆ ಕೇವಲ ಇಷ್ಟು !

ಅಸ್ಸಾಂನ 1,500 ಯುವಕರು, ಹೆಚ್ಚಾಗಿ ಮಹಿಳೆಯರು ಬೆಂಗಳೂರು ಮತ್ತು ಸುತ್ತಮುತ್ತಲಿನ ಟಾಟಾ ಕಾರ್ಖಾನೆಗಳಲ್ಲಿ ಈಗಾಗಲೇ ತರಬೇತಿ ಪಡೆಯುತ್ತಿದ್ದಾರೆ ಎಂಬುದು ಗಮನಾರ್ಹ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News