ನವದೆಹಲಿ : ಹೆಚ್ಚುತ್ತಿರುವ ಕರೋನಾ ವೈರಸ್ (Coronavirus) ಪ್ರಕರಣಗಳಿಂದ ತೊಂದರೆ ಅನುಭವಿಸಿದ್ದು ಮಕ್ಕಳು. ಮಕ್ಕಳ ಶಿಕ್ಷಣದ ಮೇಲೆ ಇದು ಅತಿಯಾಗಿ ಪರಿಣಾಮ ಬೀರಿದೆ. ಸೋಂಕಿನ ಭಯದಿಂದಾಗಿ, ಈಗ ಮಕ್ಕಳಿಗೆ ಆನ್‌ಲೈನ್ ತರಗತಿಗಳನ್ನೇ (Online class) ನಡೆಸಲಾಗುತ್ತಿದೆ. ಎಲ್ಲಿಯವರೆಗೆ ಆನ್‌ಲೈನ್ ತರಗತಿ ನಡೆಯಲಿದೆ ಎನ್ನುವುದಕ್ಕೂ ಉತ್ತರ ಇಲ್ಲ. ಆನ್‌ಲೈನ್ ತರಗತಿ ನಡೆಯಬೇಕಾದರೆ ಮಕ್ಕಳು ಮೊಬೈಲ್ ಅಥವಾ ಲ್ಯಾಪ್‌ಟಾಪ್ (Laptop) ಅನ್ನೇ ಬಳಸಬೇಕು. ಮಕ್ಕಳನ್ನು ಮೊಬೈಲ್ ಮುಂದೆ ಹೆಚ್ಚು ಹೊತ್ತು ಕೂರಿಸಿ ಕ್ಲಾಸ್ ನಡೆಸುವುದು ಕಷ್ಟ ಸಾಧ್ಯ. ಈ ಹಿನ್ನೆಲೆಯಲ್ಲಿ ಮಕ್ಕಳ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ಕಂಪ್ಯೂಟರ್ ತಯಾರಕ ಕಂಪನಿ ಎಚ್‌ಪಿ (Hp) ಅಗ್ಗದ ಲ್ಯಾಪ್‌ಟಾಪ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಪುಟ್ಟ ಮಕ್ಕಳ ಬಳಕ್ಗೆ ಇದು ಅತ್ಯಂತ ಸೂಕ್ತ ಎಂದು ಕಂಪನಿ ಹೇಳಿದೆ.
ಮಕ್ಕಳಿಗಾಗಿ ಬಂದಿದೆ ಅಗ್ಗದ ಲ್ಯಾಪ್‌ಟಾಪ್ :
HP ಇತ್ತೀಚೆಗೆ ಹೊಸ HP Chromebook 11a ಲ್ಯಾಪ್‌ಟಾಪ್ (laptop) ಅನ್ನು ಬಿಡುಗಡೆ ಮಾಡಿದೆ. ಎರಡನೇಯಿಂದ ಏಳನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗಾಗಿಯೇ ಈ ಹೊಸ ಲ್ಯಾಪ್‌ಟಾಪ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ಲ್ಯಾಪ್‌ಟಾಪ್ ಮಕ್ಕಳ ಆನ್‌ಲೈನ್ ತರಗತಿಗೆ (Online class) ಅತ್ಯಂತ ಸೂಕ್ತವಾದ ಗ್ಯಾಜೆಟ್ ಆಗಿದೆ ಎಂದು ಕಂಪನಿ ಹೇಳಿದೆ.
ಇದನ್ನೂ ಓದಿ : Facebook CEO Mark Zuckerberg ಫೋನ್ ನಂಬರ್ ಮಾಹಿತಿ ಸೋರಿಕೆ, Signal App ಬಳಸುತ್ತಾರಂತೆ !
HP Chromebook 11a ವೈಶಿಷ್ಟ್ಯಗಳು:
ಈ ಲ್ಯಾಪ್‌ಟಾಪ್ ಅನ್ನು ಶಾಲಾ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಹೊಸ ಲ್ಯಾಪ್‌ಟಾಪ್‌ನಲ್ಲಿ MediaTek MT8183 Octa-Core ಪ್ರೊಸೆಸರ್ ಇದೆ. ಈ ಲ್ಯಾಪ್‌ಟಾಪ್ 11.6 ಇಂಚಿನ ಸ್ಕ್ರೀನ್ ಅನ್ನು ಹೊಂದಿದೆ. ಮಕ್ಕಳ ಬಳಕೆಗೆ ಅನುಕೂಲವಾಗುವಂತೆ Voice-enabled Google Assistant ಅನ್ನು ಕೂಡಾ ನೀಡಲಾಗಿದೆ.
ಉತ್ತಮ ಮೆಮೊರಿ ಹೊಂದಿದೆ :
ಈ ಹೊಸ HP Chromebook 11a ಲ್ಯಾಪ್‌ಟಾಪ್ 4GB RAM ಮತ್ತು 64GB ಸ್ಟೋರೇಜ್ ಅನ್ನು ಹೊಂದಿದೆ. ಇದನ್ನು 256 GB ವರೆಗೆ ವಿಸ್ತರಿಸಬಹುದು. ಇದರೊಂದಿಗೆ Google One ನಿಂದ ಹೆಚ್ಚುವರಿ 100 GB ಕ್ಲೌಡ್ ಸ್ಟೋರೇಜ್ ಕೂಡಾ ಸಿಗಲಿದೆ.
ಇದನ್ನೂ ಓದಿ : ಈ Prepaid planಗಳಲ್ಲಿ ಸಿಗಲಿದೆ ಪ್ರತಿದಿನ 3 GB Data
ಹೊಸ HP Chromebook 11a 37 WHr WHr Li-Ion polymer ಬ್ಯಾಟರಿಯನ್ನು ಹೊಂದಿದೆ. ಪೂರ್ಣ ಚಾರ್ಜ್ ಮಾಡಿದ ನಂತರ, ಈ ಲ್ಯಾಪ್‌ಟಾಪ್ 16 ಗಂಟೆಗಳ ಕಾಲ ನಿರಂತರವಾಗಿ ಕೆಲಸ ಮಾಡುತ್ತದೆ. ಲ್ಯಾಪ್‌ಟಾಪ್‌ಗೆ (Laptop) USB Type-A ಮತ್ತು Type-C ಒದಗಿಸಲಾಗಿದೆ. ವಿಶೇಷ MicroSD slot ಸಹ ಇದರಲ್ಲಿ ಲಭ್ಯವಿದೆ.
ಈ ಹೊಸ ಲ್ಯಾಪ್‌ಟಾಪ್‌ನ ಬೆಲೆ ಎಷ್ಟಿರಲಿದೆ ?
ಮಾಹಿತಿಯ ಪ್ರಕಾರ, ಕಂಪನಿಯು ಈ ಹೊಸ ಎಚ್‌ಪಿ ಕ್ರೋಮ್‌ಬುಕ್ 11 ಎ ಯ ಬೆಲೆ 21,999 ರೂ. ಎನ್ನಲಾಗಿದೆ. ಈ ಹೊಸ ಲ್ಯಾಪ್‌ಟಾಪ್ ಅನ್ನು ಇ-ಕಾಮರ್ಸ್ ಸೈಟ್‌ಗಳಿಂದ ಖರೀದಿಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.