ನವದೆಹಲಿ: ನೀವು ಸರ್ಕಾರಿ ಟೆಲಿಕಾಂ ಕಂಪನಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ನ ಗ್ರಾಹಕರಾಗಿದ್ದರೆ, ನಿಮಗೆ ಒಳ್ಳೆಯ ಸುದ್ದಿ ಬಂದಿದೆ. ಸರ್ಕಾರಿ ಟೆಲಿಕಾಂ ಕಂಪನಿ ಬಿಎಸ್‌ಎನ್‌ಎಲ್ (BSNL) ತನ್ನ ಗ್ರಾಹಕರಿಗೆ ಉತ್ತಮ ಉಡುಗೊರೆಯನ್ನು ನೀಡಲಿದ್ದು ಖಾಸಗಿ ಟೆಲಿಕಾಂ ಕಂಪನಿಗಳಂತೆ ಬಿಎಸ್ಎನ್ಎಲ್ ಬಳಕೆದಾರರು ಕೂಡ ಈಗ ಸೂಪರ್ ಫಾಸ್ಟ್ ಇಂಟರ್ನೆಟ್ನ (Super Fast Internet) ಪ್ರಯೋಜನವನ್ನು ಪಡೆಯಬಹುದಾಗಿದೆ.
ಶೀಘ್ರದಲ್ಲೇ ಪ್ರಾರಂಭವಾಗಲಿದೆ ಹೈಬ್ರಿಡ್ 4 ಜಿ ಸೇವೆ:
ಟೆಲಿಕಾಂಟಾಕ್ (Telecomtalk) ಪ್ರಕಾರ, ಈಗ ಬಿಎಸ್ಎನ್ಎಲ್ ಗ್ರಾಹಕರಿಗೆ ಸೂಪರ್ ಫಾಸ್ಟ್ 4 ಜಿ ಸೇವೆಯೂ ಸಿಗಲಿದೆ. ದೇಶಾದ್ಯಂತ ಹೈಬ್ರಿಡ್ 4 ಜಿ ಸೇವೆಯನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರ (Central Government) ಬಿಎಸ್‌ಎನ್‌ಎಲ್‌ಗೆ ಹಸಿರು ಸಂಕೇತ ನೀಡಿದೆ. ಸರ್ಕಾರಿ ಟೆಲಿಕಾಂ ಕಂಪನಿ ಈ ಹೊಸ ಸೇವೆಗಾಗಿ ಶೀಘ್ರದಲ್ಲೇ ಟೆಂಡರ್ ಅನ್ನು ಕರೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಬಿಎಸ್‌ಎನ್‌ಎಲ್ ಗ್ರಾಹಕರಿಗೆ ಸೂಪರ್ ಫಾಸ್ಟ್ ಇಂಟರ್ನೆಟ್:
ಮಾಹಿತಿಯ ಪ್ರಕಾರ, ಇದೀಗ ಬಿಎಸ್ಎನ್ಎಲ್ (BSNL) ದೇಶದ ಹೆಚ್ಚಿನ ಪ್ರದೇಶಗಳಲ್ಲಿ ತನ್ನ 3 ಜಿ ಸೇವೆಗಳನ್ನು ಮಾತ್ರ ನೀಡುತ್ತಿದೆ. ಕೇಂದ್ರ ಸರ್ಕಾರದ ಅನುಮೋದನೆಯ ನಂತರ, ಈಗ ಬಿಎಸ್‌ಎನ್‌ಎಲ್ ಬಳಕೆದಾರರಿಗೆ 4 ಜಿ ಸೇವೆಯೂ ಲಭ್ಯವಾಗಲಿದೆ. ಇದರಿಂದ ಮುಂದಿನ ದಿನಗಳಲ್ಲಿ ಬಿಎಸ್‌ಎನ್‌ಎಲ್ ಗ್ರಾಹಕರಿಗೆ ಉತ್ತಮ ವೇಗದ ಇಂಟರ್ನೆಟ್ ಸೌಲಭ್ಯ ಲಭ್ಯವಾಗಲಿದೆ.
ಇದನ್ನೂ ಓದಿ - Recharge Plan:ಕೇವಲ ರೂ.108ಕ್ಕೆ 60 ದಿನಗಳವರೆಗೆ ಅನಿಯಮಿತ ಕಾಲಿಂಗ್, ನಿತ್ಯ 1 GB ಡೇಟಾ ಉಚಿತ!
ಮನರಂಜನೆ ಮತ್ತು ಸರ್ಫಿಂಗ್ ವೇಗವಾಗಿರುತ್ತದೆ:
ಮೊಬೈಲ್ ತಂತ್ರಜ್ಞಾನದಲ್ಲಿ 4 ಜಿ ಸೇವೆಯನ್ನು ಸ್ವೀಕರಿಸಿದ ತಕ್ಷಣ, ಇಂಟರ್ನೆಟ್ ವೇಗವು ಹೆಚ್ಚಾಗುತ್ತದೆ. ಹೊಸ ಸೇವೆ ಪ್ರಾರಂಭವಾದ ಬಳಿಕ ಬಿಎಸ್‌ಎನ್‌ಎಲ್ ಗ್ರಾಹಕರು ಮೊಬೈಲ್‌ನಲ್ಲಿ ಮನರಂಜನೆಯನ್ನು ಆನಂದಿಸಲು ಅಧಿಕ ಸಮಯ ಕಾಯುವ ತೊಂದರೆ ಇರುವುದಿಲ್ಲ. ಬಳಕೆದಾರರಿಗೆ ಆನ್‌ಲೈನ್ ಚಲನಚಿತ್ರಗಳನ್ನು ಮತ್ತು ಸರ್ಫಿಂಗ್ ವೇಗವಾಗಿ ಲಭ್ಯವಾಗಲಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಭಾರತೀಯ ಮಾರಾಟಗಾರರಿಗೆ ಆದ್ಯತೆ:
ವರದಿಯ ಪ್ರಕಾರ, ಬಿಎಸ್‌ಎನ್‌ಎಲ್ ದೇಶಾದ್ಯಂತ ಹೈಬ್ರಿಡ್ 4 ಜಿ ಸೇವೆಯನ್ನು ಜಾರಿಗೆ ತರಲು ಭಾರತೀಯ ಮಾರಾಟಗಾರರಿಗೆ ಮಾತ್ರ ಆದ್ಯತೆ ನೀಡಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದೆ. ಮಾಹಿತಿಯ ಪ್ರಕಾರ, ಭಾರತೀಯ ಮಾರಾಟಗಾರರು ಮಾತ್ರ ಮೊದಲ ಹಂತದಲ್ಲಿ 50,000 ಸೈಟ್‌ಗಳಲ್ಲಿ ಕೆಲಸ ಮಾಡುತ್ತಾರೆ. ಇದಲ್ಲದೆ, ಅಂತರರಾಷ್ಟ್ರೀಯ ಮಾರಾಟಗಾರರಾದ ಎರಿಕ್ಸನ್, ನೋಕಿಯಾ ಮತ್ತು ಇತರ ಕಂಪನಿಗಳಿಗೆ ಎರಡನೇ ಹಂತದಲ್ಲಿ 50,000 ಸೈಟ್‌ಗಳಲ್ಲಿ ಕೆಲಸ ಮಾಡುವ ಅವಕಾಶ ಸಿಗಲಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ - BSNL offers : 47 ರೂ ರೀಚಾರ್ಜ್ ಪ್ಲಾನ್ ನಲ್ಲಿ ಸಿಗಲಿದೆ unlimited calls, 14GB data
ಭಾರತದ ಖಾಸಗಿ ಟೆಲಿಕಾಂ ಕಂಪನಿಗಳು ಕಳೆದ 4 ವರ್ಷಗಳಿಂದ ತಮ್ಮ 4 ಜಿ ಸೇವೆಗಳನ್ನು ಒದಗಿಸುತ್ತಿರುವುದು ಗಮನಾರ್ಹ. ಇತ್ತೀಚೆಗೆ, ಸರ್ಕಾರಿ ಟೆಲಿಕಾಂ ಕಂಪನಿಯೂ ಈ ಓಟಕ್ಕೆ ಸೇರಿಕೊಂಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.