2 ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಗೆ ಸಿಗುತ್ತದೆ ಈ ಕೂಲರ್! ವಿದ್ಯುತ್ ಬಳಕೆ ಕೂಡಾ ಕಡಿಮೆ!

Air Cooler Under 2000 : ಇದೀಗ 2000 ರೂಪಾಯಿಗಿಂತ ಕಡಿಮೆ ಬೆಲೆಯ ಏರ್ ಕೂಲರ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇವುಗಳು ಕಡಿಮೆ ವಿದ್ಯುತ್ ಬಳಸುವುದರ ಜೊತೆಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಕೂಲಿಂಗ್ ಅನ್ನು ಒದಗಿಸುತ್ತವೆ.

Written by - Ranjitha R K | Last Updated : Apr 9, 2024, 04:14 PM IST
  • ಬೇಸಿಗೆಯಲ್ಲಿ ಫ್ಯಾನ್, ಕೂಲರ್ ಅಗತ್ಯ ಬಹಳವಾಗಿ ಇರುತ್ತದೆ.
  • ಹೆಚ್ಚುತ್ತಿರುವ ಶಾಖದಿಂದಾಗಿ ಕೂಲರ್ ಎಸಿ ಅಗತ್ಯ ಎನ್ನುವಂತಾಗಿದೆ
  • 2000 ರೂಪಾಯಿಗಿಂತ ಕಡಿಮೆ ಬೆಲೆಯ ಏರ್ ಕೂಲರ್‌ಗಳು ಮಾರುಕಟ್ಟೆಯಲ್ಲಿ ಲಭ್ಯ
2 ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಗೆ ಸಿಗುತ್ತದೆ ಈ ಕೂಲರ್! ವಿದ್ಯುತ್ ಬಳಕೆ ಕೂಡಾ ಕಡಿಮೆ! title=

Air Cooler Under 2000 : ಬೇಸಿಗೆಯಲ್ಲಿ ಫ್ಯಾನ್, ಕೂಲರ್ ಅಗತ್ಯ ಬಹಳವಾಗಿ ಇರುತ್ತದೆ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಶಾಖದಿಂದಾಗಿ ಕೂಲರ್  ಎಸಿ ಅಗತ್ಯ ಎನ್ನುವಂತಾಗಿದೆ.ಆದರೆ,ಅವುಗಳ ಬೆಲೆ ಅಧಿಕವಾಗಿರುವುದರಿಂದ ಎಲ್ಲರಿಗೂ ಅದನ್ನು ಖರೀದಿಸುವುದು ಸಾಧ್ಯವಾಗುವುದಿಲ್ಲ.ಅಲ್ಲದೆ ಇದು ಅಧಿಕ ವಿದ್ಯುತ್ ಬಳಸುವ ಕಾರಣ ಇದರ ಬಳಕೆ ಕೂಡಾ ಕಷ್ಟವಾಗುತ್ತದೆ. ಆದರೆ ಇದೀಗ 2000 ರೂಪಾಯಿಗಿಂತ ಕಡಿಮೆ ಬೆಲೆಯ ಏರ್ ಕೂಲರ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.ಇವುಗಳು ಕಡಿಮೆ ವಿದ್ಯುತ್ ಬಳಸುವುದರ ಜೊತೆಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಕೂಲಿಂಗ್ ಅನ್ನು ಒದಗಿಸುತ್ತವೆ.

ಪೋರ್ಟಬಲ್ ಎಸಿ ಮಿನಿ ಕೂಲರ್ ಫ್ಯಾನ್: 
ಈ ಕೂಲರ್ ಗಾತ್ರದಲ್ಲಿ ಚಿಕ್ಕದಾಗಿದ್ದು, ಕಡಿಮೆ ವಿದ್ಯುತ್ ಅನ್ನು ಬಳಸುತ್ತದೆ.ಇದು ನೀರಿನ ಟ್ಯಾಂಕ್ ಅನ್ನು ಹೊಂದಿದ್ದು, ಗಾಳಿಯನ್ನು ತಂಪಾಗಿಸುತ್ತದೆ.ರಾತ್ರಿ ವೇಳೆ ತಂಪಾದ ಗಾಳಿ ನೀಡುವುದರಿಂದ ಉತ್ತಮ ನಿದ್ದೆಗೆ ತೊಂದರೆಯಾಗುವುದಿಲ್ಲ. ಹಗಲಿನಲ್ಲಿಯೂ ಬಿಸಿಲ ವಾತಾವರಣದಿಂದ ತಂಪಾಗಿಸುತ್ತದೆ.ಹಳೆಯ ಎಸಿಗೆ ಹೋಲಿಸಿದರೆ ಇದು 90% ರಷ್ಟು ವಿದ್ಯುತ್ ಅನ್ನು ಉಳಿಸುತ್ತದೆ. ಇದರ ಬೆಲೆ 1499 ರೂ.

ಇದನ್ನೂ ಓದಿ : WhatsApp: ಶೀಘ್ರದಲ್ಲೇ ಬಳಕೆದಾರರಿಗೆ ಸಿಗಲಿದೆ ಗಿಫ್ಟ್, ಸುಲಭವಾಗಲಿದೆ ಫೋಟೋ ಲೈಬ್ರರಿ ಪ್ರವೇಶ

NTMY ಪೋರ್ಟಬಲ್ ಏರ್ ಕಂಡಿಷನರ್ ಫ್ಯಾನ್ : 
NTMY ಪೋರ್ಟಬಲ್ ಏರ್ ಕಂಡೀಷನರ್ ಫ್ಯಾನ್ ಕೂಡಾ ಬೇಸಿಗೆಯಲ್ಲಿ ತಂಪು ಗಾಳಿ ಪಡೆಯಲು ಉತ್ತಮ ಆಯ್ಕೆ. ಇದರಲ್ಲಿ ಮೂರು ವಿಧದ  ಸ್ಪೀಡ್ ಅನ್ನು ಸೆಟ್ ಮಾಡಬಹುದಾಗಿದೆ. ಟೈಮರ್ ಸೆಟ್ಟಿಂಗ್ ಮೂಲಕ ಅಗತ್ಯಕ್ಕೆ ಅನುಗುಣವಾಗಿ ಸುಲಭವಾಗಿ ಕಾರ್ಯನಿರ್ವಹಿಸುತ್ತವೆ. ಇದು ಯುಎಸ್‌ಬಿಯಲ್ಲಿ ಕಾರ್ಯನಿರ್ವಹಿಸುವುದರಿಂದ ಕಡಿಮೆ ವಿದ್ಯುತ್ ಅನ್ನು ಬಳಸುತ್ತದೆ.ಇದನ್ನು ಎಲ್ಲಿಗೆ ಬೇಕಾದರೂ ತೆಗೆದುಕೊಂಡು ಹೋಗಬಹುದು.ಇದರ ಬೆಲೆ 1499 ರೂ.

ಕಾಮ್‌ಸಾಫ್ ಮಿನಿ ಪೋರ್ಟಬಲ್ ಏರ್ ಕೂಲರ್ ಫ್ಯಾನ್ (ComSaf Mini Portable Air Cooler Fan) :
ಕಾಮ್‌ಸಾಫ್ ಮಿನಿ ಪೋರ್ಟಬಲ್ ಏರ್ ಕೂಲರ್ ಫ್ಯಾನ್ ಕೂಡಾ ಗಾತ್ರದಲ್ಲಿ ಬಹಳ ಪುಟ್ಟದಾಗಿದೆ.ಇದರ ನೀರಿನ ಟ್ಯಾಂಕ್ ಒಮ್ಮೆ ತುಂಬಿದರೆ 10 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆ.ಇದನ್ನು ಕೂಡಾ ಮೂರು ರೀತಿಯ ಸ್ಪೀಡ್ ಗಳಲ್ಲಿ ಹೊಂದಿಸಬಹುದು. ಇದರ ಬೆಲೆ 1999 ರೂ.

NTMY ಪೋರ್ಟಬಲ್ ಏರ್ ಕಂಡಿಷನರ್ ಫ್ಯಾನ್ :
NTMY ಪೋರ್ಟಬಲ್ ಏರ್ ಕೂಲರ್ ಫ್ಯಾನ್ ಕೂಡಾ ಬೇಸಿಗೆಯಲ್ಲಿ ಅದ್ಭುತ ಆಯ್ಕೆ.ಇದು ಬೇಸಿಗೆಯಲ್ಲಿ ತಂಪಾದ ಗಾಳಿಯನ್ನು ನೀಡುವುದರ ಜೊತೆಗೆ, ಚಳಿಗಾಲದಲ್ಲಿ  ಹ್ಯುಮಿಡಿಫೈಯರ್ ಆಗಿಯೂ ಕಾರ್ಯನಿರ್ವಹಿಸುತ್ತದೆ.ಇದನ್ನು ಮೂರು ರೀತಿಯ ಸ್ಪೀಡ್ ಗಳಲ್ಲಿ ಸೆಟ್ ಮಾಡಬಹುದಾಗಿದ್ದು, ಟೈಮರ್ ಅನ್ನು ಕೂಡಾ ನೀಡಲಾಗಿದೆ.ಇದರ ಬೆಲೆ 1799 ರೂ.

ಇದನ್ನೂ ಓದಿ : WhatsApp Alert: ಈ 4 ಸಂದೇಶಗಳ ಮೇಲೆ ಮರೆತೂ ಕ್ಲಿಕ್ಕಿಸಬೇಡಿ, ಭಾರಿ ಪಶ್ಚಾತಾಪ ಪಡಬೇಕಾದೀತು!

ಇನ್ಫಿನಿಜಿ ಮಿನಿ ಪೋರ್ಟಬಲ್ ಏರ್ ಕೂಲರ್ ಫ್ಯಾನ್  : 
SAMISKO Infinizy Mini Portable Air Cooler Fanನಲ್ಲಿ ಸಣ್ಣದಾಗಿದ್ದು, ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸಲು ಸಹಕಾರಿಯಾಗಿದೆ.ಇದರಲ್ಲಿ ವಿಶೇಷ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ನೀರಿನ ಟ್ಯಾಂಕ್ ಒಮ್ಮೆ ತುಂಬಿದ ನಂತರ 10 ಗಂಟೆಗಳ ಕಾಲ ನಡೆಯುತ್ತದೆ. ಇದರ ಬೆಲೆ 1411 ರೂ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News