WhatsApp Scam Messages: WhatsApp ಭಾರತದ ಜನಪ್ರಿಯ ತ್ವರಿತ ಸಂದೇಶ ಆಪ್ ಆಗಿದೆ, ಕೋಟ್ಯಾಂತರ ಜನರು ಇದನ್ನು ಬಳಸುತ್ತಿದ್ದಾರೆ. ಈ ವೇದಿಕೆಯ ಮೂಲಕ, ಬಳಕೆದಾರರು ಟೆಕ್ಸ್ಟ್, ಆಡಿಯೋ ಮತ್ತು ವೀಡಿಯೊ ಕರೆಗಳನ್ನು ಮಾಡುವ ಮೂಲಕ ದೂರದಲ್ಲಿರುವ ತಮ್ಮ ಹತ್ತಿರದ ಮತ್ತು ಆತ್ಮೀಯರೊಂದಿಗೆ ಸಂಪರ್ಕ ಸಾಧಿಸಲು ಅವಕಾಶವನ್ನು ಪಡೆಯುತ್ತಾರೆ. ಆದರೆ. ಪ್ರಸ್ತುತ ಭಾರತ ಡಿಜಿಟಲ್ ಯುಗದಲ್ಲಿ ಮುನ್ನುಗ್ಗುತ್ತಿದ್ದು, ಡಿಜಿಟಲ್ ಹಗರಣಗಳು ಮತ್ತು ವಂಚನೆಗಳು ಸಹ ವೇಗವಾಗಿ ಹೆಚ್ಚುತ್ತಿವೆ. ಇದೀಗ ವಾಟ್ಸಾಪ್ ಮೂಲಕ ಮೋಸಗಾರರು ಅಮಾಯಕರನ್ನು ಬೇಟೆಯಾಡಲು ಆರಂಭಿಸಿದ್ದಾರೆ. ವಾಟ್ಸಾಪ್‌ನಲ್ಲಿ ನಕಲಿ ಕರೆಗಳ ಮೂಲಕ ಮಾತ್ರವಲ್ಲ, ವಂಚಕರು ನಕಲಿ ಸಂದೇಶಗಳ ಮೂಲಕವೂ ನಿಮ್ಮನ್ನು ವಂಚಿಸಬಹುದು. ಹೌದು, ವಾಟ್ಸ್ ಆಪ್ ನಲ್ಲಿ 4 ಪ್ರಮುಖ ರೀತಿಯ ಸಂದೇಶಗಳಿವೆ, ಅವುಗಳ ಮೂಲಕ ಸ್ಕ್ಯಾಮರ್‌ಗಳು ಜನರನ್ನು ವಂಚಿಸಲು ಪ್ರಯತ್ನಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ವಾಟ್ಸ್ ಆಪ್ ನಲ್ಲಿ ಬರುವ 4 ಸಂದೇಶಗಳ ಮೇಲೆ ಕ್ಲಿಕ್ ಮಾಡುವ ಮೊದಲು ಸಾಕಷ್ಟು ಯೋಚಿಸಿ.
ಬಹುಮಾನ ಗೆದ್ದ ಕುರಿತಾದ ಸಂದೇಶ
ವಾಟ್ಸ್ ಆಪ್ ನಲ್ಲಿ ಬಹುತೇಕ ಜನರು "ನೀವು ಬಹುಮಾನವನ್ನು ಗೆದ್ದಿರುವಿರಿ!" ಎಂಬ ನಕಲಿ ಸಂದೇಶಕ್ಕೆ ಗುರಿಯಾಗುತ್ತಿದ್ದಾರೆ. ಇಂತಹ ಸಂದೇಶಗಳಲ್ಲಿ, ಬಳಕೆದಾರರಿಗೆ ಅವರು ಲಕ್ಷಾಂತರ ರೂಪಾಯಿ ಬಹುಮಾನ ಗೆದ್ದಿರುವ ಕುರಿತು ಮಾಹಿತಿ ಇರುತ್ತದೆ. ಬಳಿಕ ಆ ಮೊತ್ತವನ್ನು ಕ್ಲೈಮ್ ಮಾಡಲು ಕೆಳಗೆ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ ಎಂದು ಸೂಚಿಸಲಾಗಿರುತ್ತದೆ. ಇಂತಹ ಸಂದೇಶಗಳು ಹಗರಣಗಳ ಭಾಗವಾಗಿವೆ.
ಉದ್ಯೋಗ ಸಿಕ್ಕ ಮಾಹಿತಿ
ನಿರುದ್ಯೋಗವನ್ನು ವಂಚಕರು ವಂಚನೆಗಾಗಿ ಬಳಸುವ ಹೊಸ ಅಸ್ತ್ರವನ್ನಾಗಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಕೆಲ ವಂಚಕರು ವಾಟ್ಸ್ ಆಪ್ ನಲ್ಲಿ ನಕಲಿ ಉದ್ಯೋಗ ಅಧಿಸೂಚನೆ ಸಂದೇಶಗಳನ್ನು ಕಳುಹಿಸುತ್ತಾರೆ. ಇಂತಹ ಸಂದೇಶಗಳಲ್ಲಿ, ಫಾರ್ಮ್ ಅನ್ನು ಭರ್ತಿ ಮಾಡುವ ನೆಪದಲ್ಲಿ ಬಳಕೆದಾರರಿಗೆ ನಕಲಿ ಲಿಂಕ್‌ಗಳನ್ನು ಕಳುಹಿಸಲಾಗುತ್ತದೆ, ಅದರಲ್ಲಿ ಬಳಕೆದಾರರು ತಮ್ಮ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಬಹುದು. ಅನೇಕ ಕಂಪನಿಗಳು ವಾಟ್ಸ್ ಆಪ್ ಮೂಲಕ ಉದ್ಯೋಗದ ಆಫರ್ ಗಳನ್ನು ಕಳುಹಿಸುವುದಿಲ್ಲ ಎಂಬುದನ್ನು ಯಾವಾಗಲೂ ನೆನಪಿನಲ್ಲಿಡಿ. ಇದಕ್ಕಾಗಿ, ಕಂಪನಿಯ ಹ್ಯೂಮನ್ ರಿಸೋರ್ಸ್ ಅಧಿಕಾರಿ ನಿಮಗೆ ವೈಯಕ್ತಿಕವಾಗಿ ಕರೆ ಮಾಡುತ್ತಾನೆ.
ಇದನ್ನೂ ಓದಿ-Weather Update: ಭೀಕರ ಉಷ್ಣತೆಯ ಜೊತೆಗೆ ಹೀಟ್ ವೇವ್ ಅಟ್ಯಾಕ್, ದೇಶದ ಈ ಸ್ಥಳಗಳಲ್ಲಿ IMD ಯ ಆರೇಂಜ್ ಅಲರ್ಟ್ ಜಾರಿ!
ಬ್ಯಾಂಕ್ ಎಚ್ಚರಿಕೆ
ವಾಟ್ಸ್ ಆಪ್ ನಲ್ಲಿ ಮೂರನೇ ರೀತಿಯ ನಕಲಿ ಸಂದೇಶ ಎಂದರೆ ಅದುವೇ ಬ್ಯಾಂಕ್ ಅಲರ್ಟ್. ಇಂತಹ ಸಂದೇಶಗಳಲ್ಲಿ, ನಕಲಿ ಲಿಂಕ್ ಮೂಲಕ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಬಳಕೆದಾರರನ್ನು ಕೋರಲಾಗುತ್ತದೆ. ಇಂತಹ ವಂಚನೆಗಳ ಏಕೈಕ ಉದ್ದೇಶ ನಿಮ್ಮ ಹಣವನ್ನು ಕದಿಯುವುದು ಆಗಿರುತ್ತದೆ.
ಇದನ್ನೂ ಓದಿ-ಶೀಘ್ರದಲ್ಲೇ WhatsApp ನಿಂದ ಜಬರ್ದಸ್ತ ವೈಶಿಷ್ಟ್ಯ ಬಿಡುಗಡೆ! ವಿಡಿಯೋ ನೋಡುತ್ತಾ ಕೂಡ ಈ ಕೆಲಸ ಮಾಡಬಹುದು
ಡೇಲಿವರಿ ಪ್ರಾಬ್ಲಮ್ ಅಧಿಸೂಚನೆ
ಇದಲ್ಲದೆ, ವಾಟ್ಸಾಪ್‌ನಲ್ಲಿ ಇಂತಹ ಸಂದೇಶಗಳೂ ಕೂಡ ಬರುತ್ತಿದ್ದು, ಅವುಗಳಲ್ಲಿ ಬಳಕೆದಾರರಿಗೆ ಅವರು ಹೊಂದಿರದ ಡೇಲಿವರಿ ವೈಫಲ್ಯದ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಇಂತಹ ಸಂದೇಶಗಳು ವಂಚನೆಯ ಮಾರ್ಗಗಳಾಗಿವೆ ಎಂಬುದನ್ನು ನೆನಪಿನಲ್ಲಿಡಿ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ