5G Network ಕನಸು ಶೀಘ್ರದಲ್ಲಿಯೇ ನನಸಾಗಲಿದೆ, ಅಂತಿಮ ಹಂತಕ್ಕೆ ತಲುಪಿದ ಸಿದ್ಧತೆಗಳು

5G Rollout In India - 5G ನೆಟ್ವರ್ಕ್ ತಯಾರಿಯ ಸಿದ್ಧತೆಗಳು ಇದೀಗ ತನ್ನ ಅಂತಿಮ ಹಂತಕ್ಕೆ ತಲುಪಿವೆ. ಇದರ ಲಾಭ ದೇಶದ 13 ನಗರಗಳಿಗೆ ಸಿಗಲಿದೆ.

Written by - Nitin Tabib | Last Updated : Feb 11, 2022, 09:31 PM IST
  • 5G ನೆಟ್ವರ್ಕ್ ಆರಂಭಕ್ಕೆ ಸಿದ್ಧತೆಗಳು ಅಂತಿಮ ಹಂತಕ್ಕೆ ತಲುಪಿವೆ.
  • ಶೀಘ್ರದಲ್ಲಿಯೇ ದೇಶದ 13 ನಗರಗಳಲ್ಲಿ ಈ ಸೇವೆ ಆರಂಭಗೊಳ್ಳಲಿದೆ.
  • ಯಾವ 13 ನಗರಗಳಿಗೆ ಈ ಸೇವೆ ಮೊದಲು ಸಿಗಲಿದೆ ತಿಳಿದುಕೊಳ್ಳೋಣ ಬನ್ನಿ
5G Network ಕನಸು ಶೀಘ್ರದಲ್ಲಿಯೇ ನನಸಾಗಲಿದೆ, ಅಂತಿಮ ಹಂತಕ್ಕೆ ತಲುಪಿದ ಸಿದ್ಧತೆಗಳು title=
5G Rollout In India

ನವದೆಹಲಿ: 5G Rollout In India - ದೇಶದಲ್ಲಿ 5G ನೆಟ್‌ವರ್ಕ್ (5G Network Service) ಅಭಿವೃದ್ಧಿಯ ಅಂತಿಮ ಹಂತದಲ್ಲಿದೆ. ಇಂಟರ್ನೆಟ್‌ನ ವೇಗವನ್ನು ಪೂರ್ಣವಾಗಿ ಮಾಡಲು 5G ತಯಾರಿ ಮಾತ್ರವಲ್ಲ, ಆದರೆ ನಿಮ್ಮ ಮೊಬೈಲ್ ಮತ್ತು ಲ್ಯಾಪ್‌ಟಾಪ್ 6G (6G Network)ನೆಟ್‌ವರ್ಕ್‌ನಿಂದ ಸೂಪರ್ ಸ್ಪೀಡ್‌ನಲ್ಲಿ ರನ್ ಆಗುವ ದಿನ ದೂರವಿಲ್ಲ. 

ವಾಸ್ತವದಲ್ಲಿ ವಿಶ್ವದ ಅನೇಕ ದೇಶಗಳಲ್ಲಿ 5G ನೆಟ್ವರ್ಕ್ ಅನ್ನು ಪ್ರಾರಂಭಿಸಲಾಗಿದೆ. ಇವುಗಳಲ್ಲಿ ಚೀನಾ, ಅಮೆರಿಕ, ಇಟಲಿ ಮತ್ತು ದಕ್ಷಿಣ ಕೊರಿಯಾ ಶಾಮೀಲಾಗಿವೆ. 349 US ನಗರಗಳಲ್ಲಿ 5G ಸೇವೆ ಲಭ್ಯವಿದೆ. ಇಟಲಿಯ 35ಕ್ಕೂ ಹೆಚ್ಚು ನಗರಗಳ ಜನರು ಇದರ ಲಾಭ ಪಡೆಯುತ್ತಿದ್ದಾರೆ.

ಇದನ್ನೂ ಓದಿ-ಇ-ರೂಪಿ ವೋಚರ್‌ಗಳ ಮಿತಿಯನ್ನು 10,000 ರೂ.ನಿಂದ 1 ಲಕ್ಷಕ್ಕೆ ಹೆಚ್ಚಿಸಲು ಆರ್‌ಬಿಐ ಪ್ರಸ್ತಾಪ

5G ವೇಗ (5G Speed)
ಭಾರತದಲ್ಲಿಯೂ, ಈ ವರ್ಷದ ಅಂತ್ಯದ ವೇಳೆಗೆ, 13 ಮೆಟ್ರೋ ನಗರಗಳು  ಮೊದಲ ಬಾರಿಗೆ 5G ಸೇವೆಗಳನ್ನು ಅನುಭವಿಸಲಿವೆ. ಇವುಗಳಲ್ಲಿ ದೆಹಲಿ, ಮುಂಬೈ, ಪುಣೆ, ಕೋಲ್ಕತ್ತಾ, ಚೆನ್ನೈ, ಲಕ್ನೋ, ಚಂಡೀಗಢ, ಗುರುಗ್ರಾಮ್, ಬೆಂಗಳೂರು, ಹೈದರಾಬಾದ್, ಅಹಮದಾಬಾದ್, ಗಾಂಧಿನಗರ ಮತ್ತು ಜಾಮ್‌ನಗರ ಶಾಮೀಲಾಗಿವೆ. ಈ ನಗರಗಳ ನಂತರ, ಇತರ ನಗರಗಳು ಮತ್ತು ಹಳ್ಳಿಗಳನ್ನು 5G  ಶೀಘ್ರದಲ್ಲಿಯೇ ತಲುಪಲಿದೆ. 

ಇದನ್ನೂ ಓದಿ-'Cryptocurrency ಕಾನೂನುಬಾಹೀರವಲ್ಲ'

5G ಸೇವೆಗಳ ರೋಲ್‌ಔಟ್‌ಗೆ ಅನುಕೂಲವಾಗುವಂತೆ ಸ್ಪೆಕ್ಟ್ರಮ್ ಅನ್ನು ಮುಂಬರುವ ತಿಂಗಳುಗಳಲ್ಲಿ ಹರಾಜು ಮಾಡಲಾಗುವುದು ಮತ್ತು ನಂತರ ನೀವು ಪಡೆಯುವ ಇಂಟರ್ನೆಟ್ ವೇಗವು ಕನಿಷ್ಠ 10 ಪಟ್ಟು ವೇಗವಾಗಿರಲಿದೆ. ಅಷ್ಟೇ ಅಲ್ಲ, ಇದು ವೇಗವನ್ನು 100 ಪಟ್ಟು ವೇಗವಾಗಿ ಹೆಚ್ಚಿಸಬಹುದು. ನೀವು ಡೌನ್‌ಲೋಡ್ ಮೂಲಕ  ಚಲನಚಿತ್ರವನ್ನು ವಿಕ್ಷೀಸುತ್ತಿದ್ದರೆ, ಕೇವಲ 10 ಸೆಕೆಂಡುಗಳಲ್ಲಿ ಸಂಪೂರ್ಣ ಚಲನಚಿತ್ರ ಡೌನ್‌ಲೋಡ್ ಮಾಡಬಹುದು. ಪ್ರಸ್ತುತ, ಎರಡು ಗಂಟೆಗಳ ಚಲನಚಿತ್ರವನ್ನು ಡೌನ್‌ಲೋಡ್ ಮಾಡಲು ಸುಮಾರು 7 ನಿಮಿಷಗಳನ್ನು ಸಮಯಾವಕಾಶ ಬೇಕಾಗುತ್ತದೆ. ಈ ವೇಗವು ಸ್ಥಳ ಮತ್ತು ಸಾಧನವನ್ನು ಅವಲಂಬಿಸಿರುತ್ತದೆ.  5G ನೆಟ್‌ವರ್ಕ್  ಇಷ್ಟೊಂದು ವೇಗವಾಗಿರಬೇಕಾದರೆ 6G ನೆಟ್ವರ್ಕ್ (6G Speed) ಯಾವ ಕಮಾಲ್ ಮಾಡಲಿದೆ ನೀವೇ ಊಹಿಸಬಹುದು.  6G ನೆಟ್‌ವರ್ಕ್ 5G ನೆಟ್‌ವರ್ಕ್‌ನ ಗರಿಷ್ಠ ವೇಗಕ್ಕಿಂತ 100 ಪಟ್ಟು ವೇಗವಾಗಿರಲಿದೆ.

ಇದನ್ನೂ ಓದಿ-10 Rupee Coin: 10 ರೂಪಾಯಿಯ ಯಾವ ನಾಣ್ಯ ಮಾನ್ಯವಾಗಿದೆ? ಗೊಂದಲ ನಿವಾರಿಸಿದ ಸರ್ಕಾರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News