Flipkart End of Season Sale: ಸ್ಮಾರ್ಟ್ ಟಿವಿಗಳ ಮೇಲೆ ಭರ್ಜರಿ ಆಫರ್

Flipkart End of Season Sale: ನಾಳೆಯಿಂದ ಫ್ಲಿಪ್‌ಕಾರ್ಟ್ ಎಂಡ್ ಆಫ್ ಸೀಸನ್ ಸೇಲ್ ಆರಂಭವಾಗಲಿದೆ. ಅತ್ಯಂತ ದುಬಾರಿ ಸ್ಮಾರ್ಟ್ ಟಿವಿಗಳನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು. Samsung, Mi, THOMSON, Kodak, Westinghouse ಸೇರಿದಂತೆ ಹಲವು ಬ್ರಾಂಡ್‌ಗಳ ಸ್ಮಾರ್ಟ್ ಟಿವಿಗಳ ಮೇಲೆ ಭಾರೀ ರಿಯಾಯಿತಿ ಲಭ್ಯವಾಗಲಿದೆ.

Written by - Yashaswini V | Last Updated : Jun 10, 2022, 02:11 PM IST
  • ನಾಳೆಯಿಂದ ಫ್ಲಿಪ್‌ಕಾರ್ಟ್ ಎಂಡ್ ಆಫ್ ಸೀಸನ್ ಸೇಲ್ ಆರಂಭ
  • ಅತ್ಯಂತ ದುಬಾರಿ ಸ್ಮಾರ್ಟ್ ಟಿವಿಗಳನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಖರೀದಿ
  • ಹಲವು ಬ್ರಾಂಡ್‌ಗಳ ಸ್ಮಾರ್ಟ್ ಟಿವಿಗಳ ಮೇಲೆ ಭಾರೀ ಡಿಸ್ಕೌಂಟ್
Flipkart End of Season Sale: ಸ್ಮಾರ್ಟ್ ಟಿವಿಗಳ ಮೇಲೆ ಭರ್ಜರಿ ಆಫರ್  title=
Flipkart End of Season Sale 2022

ಫ್ಲಿಪ್‌ಕಾರ್ಟ್ ಎಂಡ್ ಆಫ್ ಸೀಸನ್ ಸೇಲ್ : ಫ್ಲಿಪ್‌ಕಾರ್ಟ್ನಲ್ಲ ಸೀಸನ್ ಎಂಡ್ ಮಾರಾಟ ಆರಂಭವಾಗಲಿದೆ. ಈ ಸೇಲ್ ನಾಳೆಯಿಂದ ಅಂದರೆ ಜೂನ್ 11 ರಿಂದ ಆರಂಭವಾಗಲಿದ್ದು, ಜೂನ್ 17 ರವರೆಗೆ ನಡೆಯಲಿದೆ. ಈ ಸೇಲ್‌ನಲ್ಲಿ ನೀವು ಸ್ಮಾರ್ಟ್ ಟಿವಿಗಳು, ವಾಷಿಂಗ್ ಮೆಷಿನ್‌ಗಳು ಮತ್ತು ಏರ್ ಕಂಡಿಷನರ್‌ಗಳ ಮೇಲೆ ಭಾರಿ ರಿಯಾಯಿತಿಗಳನ್ನು ಪಡೆಯಬಹುದಾಗಿದೆ.  ನೀವು ಸ್ಮಾರ್ಟ್ ಟಿವಿಯನ್ನು ಖರೀದಿಸಲು ಯೋಜಿಸುತ್ತಿದ್ದರೆ ಮತ್ತು ಬಜೆಟ್ ಕಡಿಮೆಯಿದ್ದರೆ ಈ ಸೇಲ್ ನಿಮಗೆ ಉಪಯುಕ್ತವಾಗಬಹುದು. ಈ ೇಲ್‌ನಲ್ಲಿ ನೀವು ಅತ್ಯಂತ ದುಬಾರಿ ಸ್ಮಾರ್ಟ್ ಟಿವಿಗಳನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು. Samsung, Mi, THOMSON, Kodak, Westinghouse ಸೇರಿದಂತೆ ಹಲವು ಬ್ರಾಂಡ್‌ಗಳ ಸ್ಮಾರ್ಟ್ ಟಿವಿಗಳ ಮೇಲೆ ಭಾರೀ ರಿಯಾಯಿತಿಯನ್ನು ನೀಡಲಾಗುತ್ತಿದೆ. ಯಾವ ಸ್ಮಾರ್ಟ್ ಟಿವಿ ಮೇಲೆ ಎಷ್ಟು ರಿಯಾಯಿತಿ ಪಡೆಯಬಹುದು ತಿಳಿಯಿರಿ...

ಫ್ಲಿಪ್‌ಕಾರ್ಟ್ ಎಂಡ್ ಆಫ್ ಸೀಸನ್ ಸೇಲ್ ಸಮಯದಲ್ಲಿ ಕೊಡಾಕ್ ಟಿವಿಗಳು:
ಫ್ಲಿಪ್‌ಕಾರ್ಟ್ ಎಂಡ್ ಆಫ್ ಸೀಸನ್ ಸೇಲ್‌ನಲ್ಲಿ ಕೊಡಾಕ್ ಟಿವಿ ತನ್ನ ಅತಿದೊಡ್ಡ ಮಾರಾಟವನ್ನು ಘೋಷಿಸಲು ಸಿದ್ಧವಾಗಿದೆ. ಬ್ರ್ಯಾಂಡ್ ತನ್ನ ಅಧಿಕೃತ Android Kodak CA PRO ಮತ್ತು 7XPRO ಸರಣಿಯಲ್ಲಿ ಅತಿ ದೊಡ್ಡ ಡೀಲ್‌ಗಳನ್ನು ನೀಡುತ್ತಿದೆ, ಇವುಗಳ ಬೆಲೆ ರೂ.6,999. ಸೇಲ್‌ನಲ್ಲಿ ನೀವು ಕಂಪನಿಯ 43-ಇಂಚಿನ ಮತ್ತು 50-ಇಂಚಿನ ಮಾದರಿಗಳ ಮೇಲೆ ಈ ಡಿಸ್ಕೌಂಟ್ ಕಾಣಬಹುದು.  ಮಾರಾಟದ ಸಮಯದಲ್ಲಿ ಹೈಲೈಟ್ ಮಾಡೆಲ್‌ಗಳು 43-ಇಂಚಿನ ಮತ್ತು 50-ಇಂಚಿನ ಟಿವಿಗಳಾಗಿವೆ. 32 ಇಂಚಿನ ಮಾದರಿ 11,499 ರೂ., 43 ಇಂಚಿನ ಬೆಲೆ 24,999 ರೂ., 50 ಇಂಚಿನ ಬೆಲೆ 27,999 ರೂ. ಆಗಿದೆ.

ಇದನ್ನೂ ಓದಿ- ಬೆರಳಿಗಿಂತಲೂ ಚಿಕ್ಕದಾಗಿರುವ ಮೊಬೈಲ್ ಫೋನ್- ಇಲ್ಲಿದೆ ಇದರ ಬೆಲೆ, ವೈಶಿಷ್ಟ್ಯ!

ಟಿವಿಯು ಬಹುತೇಕ ಬೆಜೆಲ್-ಕಡಿಮೆ ವಿನ್ಯಾಸವನ್ನು ಹೊಂದಿದೆ ಮತ್ತು ಗೂಗಲ್ ಪ್ಲೇ ಸ್ಟೋರ್ ನೊಂದಿಗೆ ಬರುತ್ತದೆ, ಇದು 6000 ಕ್ಕೂ ಹೆಚ್ಚು ಅಪ್ಲಿಕೇಶನ್‌ಗಳು ಮತ್ತು 500,000 ಟಿವಿ ಕಾರ್ಯಕ್ರಮಗಳ ಜೊತೆಗೆ ಪ್ರೈಮ್ ವಿಡಿಯೋ, ಹಾಟ್ ಸ್ಟಾರ್, ಜೀ5, ಸೋನಿ  ಲಿವ್ ಮತ್ತು ಗೂಗಲ್ ಪ್ಲೇ ಸ್ಟೋರ್  ನಂತಹ ಆಯ್ಕೆಗಳನ್ನು ಹೊಂದಿದೆ. ರಿಮೋಟ್ ಕಂಟ್ರೋಲ್‌ನಲ್ಲಿ ಪ್ರೈಮ್, ಯೂಟ್ಯೂಬ್ ಮತ್ತು ಸೋನಿ ಲಿವ್‌ಗಾಗಿ ಮೀಸಲಾದ ಶಾರ್ಟ್‌ಕಟ್ ಕೀಗಳು ಸಹ ಇವೆ ಎನ್ನಲಾಗಿದೆ.

ಇದನ್ನೂ ಓದಿ- Smartphone: ಒಂದೇ ಫೋನ್‌ನಲ್ಲಿ 2-2 WhatsApp-Instagram ಬಳಸಲು ಸುಲಭ ಮಾರ್ಗ

ಫ್ಲಿಪ್‌ಕಾರ್ಟ್ ಎಂಡ್ ಆಫ್ ಸೀಸನ್ ಸೇಲ್ ಸಮಯದಲ್ಲಿ ಥಾಮ್ಸನ್ ಟಿವಿಗಳು
ಥಾಮ್ಸನ್ ಅವರ ಸ್ಮಾರ್ಟ್ ಟಿವಿಗಳು ಮಾರಾಟದಲ್ಲಿ ಇವೆ. ಈ ಸೇಲ್‌ನಲ್ಲಿಯೂ ಥಾಮ್ಸನ್‌ನ ಸ್ಮಾರ್ಟ್ ಟಿವಿಯಲ್ಲಿ ಉತ್ತಮ ರಿಯಾಯಿತಿಗಳು ಲಭ್ಯವಿವೆ. 32 ಇಂಚಿನ ಸ್ಮಾರ್ಟ್ ಟಿವಿ ಬೆಲೆ ರೂ. 10,999, 40 ಇಂಚಿನ ರೂ. 17,999, 43 ಇಂಚಿನ ರೂ. 21,999, 50 ಇಂಚಿನ ರೂ. 28,999 ಮತ್ತು 55 ಇಂಚಿನ ರೂ. 34,999 ಆಗಿದೆ. 

ಇದಲ್ಲದೆ ಈ ಸೇಲ್‌ನಲ್ಲಿ ಎಸಿ ಮೇಲೂ ಭಾರೀ ಡಿಸ್ಕೌಂಟ್ ಲಭ್ಯವಾಗಲಿದೆ. ಇಲ್ಲಿ 1 ಟನ್ 3 ಸ್ಟಾರ್ ಸ್ಪ್ಲಿಟ್ ಎಸಿಯ ಆಫರ್ ಬೆಲೆ ರೂ. 24999, 1.5 ಟನ್ 5 ಸ್ಟಾರ್ ಸ್ಪ್ಲಿಟ್ ಎಸಿ ಬೆಲೆ ರೂ. 31999, 1.5 ಟನ್ 3 ಸ್ಟಾರ್ ಸ್ಪ್ಲಿಟ್ ಎಸಿ 29,999 ರೂ.ಗಳಿಗೆ ಲಭ್ಯವಾಗಲಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News