ಸ್ಲೋ ಆಗಿರುವ ಲ್ಯಾಪ್ ಟಾಪ್ ಅನ್ನು ಸೂಪರ್ ಫಾಸ್ಟ್ ಆಗಿ ಮಾಡುತ್ತದೆ ಈ ಐದು ಟಿಪ್ಸ್

How To Boost Laptop Speed : ಸ್ಲೋ ಆಗಿರುವ ಲ್ಯಾಪ್ ಟಾಪ್ ಸ್ಪೀಡ್ ಅನ್ನು ಮನೆಯಲ್ಲಿಯೇ ಕುಳಿತು ಸರಿ ಮಾಡಬಹುದು. ಅದಕ್ಕಾಗಿ ಈ ಕೆಳಗೆ ಹೇಳಲಾದ ಐದು ಟಿಪ್ಸ್ ಅನ್ನು ಅನುಸರಿಸಿ. 

Written by - Ranjitha R K | Last Updated : Nov 16, 2022, 11:35 AM IST
  • ಲ್ಯಾಪ್‌ಟಾಪ್ ಆಮೆ ಗತಿಯಲ್ಲಿ ಕಾರ್ಯನಿರ್ವಹಿಸುತ್ತಿದೆಯೇ?
  • ಅನಗತ್ಯವಾಗಿ ತೆರೆದಿರುವ ಟ್ಯಾಬ್‌ಗಳನ್ನು ಕ್ಲೋಸ್ ಮಾಡಿ
  • ನಿಮ್ಮ ಡಿವೈಸ್ ಅನ್ನು ರಿ ಸ್ಟಾರ್ಟ್ ಮಾಡಿ
ಸ್ಲೋ ಆಗಿರುವ ಲ್ಯಾಪ್ ಟಾಪ್ ಅನ್ನು ಸೂಪರ್ ಫಾಸ್ಟ್ ಆಗಿ ಮಾಡುತ್ತದೆ ಈ ಐದು ಟಿಪ್ಸ್  title=
Slow Laptop Fix tips

How To Boost Laptop Speed : ನಿಮ್ಮ ಲ್ಯಾಪ್‌ಟಾಪ್ ಆಮೆ ಗತಿಯಲ್ಲಿ ಕಾರ್ಯನಿರ್ವಹಿಸುತ್ತಿದೆಯೇ? ಲ್ಯಾಪ್‌ಟಾಪ್ ಸ್ಲೋ ಆದಾಗ ನಿಗದಿತ ಸಮಯಕ್ಕೆ ಕೆಲಸ ಪೂರ್ಣಗೊಳಿಸುವುದು ಸಾಧ್ಯವಾಗುವುದಿಲ್ಲ.  ಹೀಗಾದಾಗ ಸ್ಲೋ ಆಗಿರುವ ಲ್ಯಾಪ್ ಟಾಪ್ ಸ್ಪೀಡ್ ಅನ್ನು ಮನೆಯಲ್ಲಿಯೇ ಕುಳಿತು ಮತ್ತೆ ಸರಿ ಮಾಡಬಹುದು. ಅದಕ್ಕಾಗಿ ಈ ಕೆಳಗೆ ಹೇಳಲಾದ ಐದು ಟಿಪ್ಸ್ ಅನ್ನು ಅನುಸರಿಸಿ. 

ಅನಗತ್ಯವಾಗಿ ತೆರೆದಿರುವ ಟ್ಯಾಬ್‌ಗಳನ್ನು ಕ್ಲೋಸ್ ಮಾಡಿ :  
ಬ್ರೌಸ್ ಮಾಡುವಾಗ ಅಥವಾ ನಿರಂತರವಾಗಿ ಕೆಲಸ ಮಾಡುವಾಗ ಪ್ರತಿಯೊಬ್ಬರೂ, ಅನೇಕ ಟ್ಯಾಬ್ ಗಳನ್ನು ಓಪನ್ ಮಾಡಿಟ್ಟುಕೊಳ್ಳುತ್ತಾರೆ. ಆದರೆ, ಬ್ರೌಸರ್‌ನಲ್ಲಿ ಹೆಚ್ಚು ಟ್ಯಾಬ್‌ಗಳನ್ನು ತೆರೆದಿಟ್ಟರೆ, RAM ಅಥವಾ ಪ್ರೊಸೆಸರ್‌ ಮೇಲೆ ಒತ್ತಡ ಉಂಟಾಗುತ್ತದೆ. ಹೀಗಾದಾಗ ಡಿವೈಸ್ ನಿಧಾನವಾಗಿ ಕಾರ್ಯನಿರ್ವಹಿಸುತ್ತದೆ. 

ಇದನ್ನೂ ಓದಿ :  Flipkart ಕೂಲ್ ಆಫರ್! ಅರ್ಧ ಬೆಲೆಯಲ್ಲಿ ಲಭ್ಯವಾಗಲಿದೆ ನಥಿಂಗ್ ಫೋನ್ (1)

ನಿಮ್ಮ ಡಿವೈಸ್ ಅನ್ನು ರಿ ಸ್ಟಾರ್ಟ್ ಮಾಡಿ : 
ಲ್ಯಾಪ್‌ಟಾಪ್‌ ಅನ್ನು ರಿ ಸ್ಟಾರ್ಟ್ ಮಾಡುವುದು ಸುಲಭವಾದ ಮಾರ್ಗವಾಗಿದೆ. ಲ್ಯಾಪ್‌ಟಾಪ್ ಅನ್ನು ರಿ ಸ್ಟಾರ್ಟ್ ಮಾಡುವುದರಿಂದ ಕ್ಯಾಚೆ ಮೆಮೊರಿ ಕ್ಲಿಯರ್ ಆಗುತ್ತದೆ.  ಡಿವೈಸ್ ಅಪ್ಡೇಟ್ ಮಾಡುವ ಸಂದೇಶ ಬಂದಾಗ, ಲ್ಯಾಪ್‌ಟಾಪ್‌ ಅಪ್ಡೇಟ್ ಮಾಡುವುದನ್ನು ಮರೆಯಬೇಡಿ. ಅಪ್ಡೇಟ್ ಮಾಡದೇ ಹೋದರೆ  ಸಿಸ್ಟಮ್  ನಿಧಾನವಾಗಳು ಆರಂಭಿಸುತ್ತದೆ. 

ಬಳಕೆಯಾಗದ ಕಾರ್ಯಕ್ರಮಗಳನ್ನು ಅನ್ ಇನ್ಸ್ಟಾಲ್ ಮಾಡಿ :  
ಲ್ಯಾಪ್‌ಟಾಪ್‌ನಲ್ಲಿ ಡೌನ್‌ಲೋಡ್ ಮಾಡಿಟ್ಟುಕೊಂಡು ಬಳಸದ ಕೆಲವು ಪ್ರೋಗ್ರಾಂಗಳನ್ನು  ಅನ್ ಇನ್ಸ್ಟಾಲ್ ಮಾಡಿ.  ಬಳಸದ appಗಳನ್ನು ಅನ್ ಇನ್ಸ್ಟಾಲ್ ಮಾಡುವುದು, ಸಿಸ್ಟಮ್ ಸ್ಪೀಡ್ ಹೆಚ್ಚು ಮಾಡುವ ಸರಳ ವಿಧಾನವಾಗಿದೆ.  

ಇದನ್ನೂ ಓದಿ : Car Brake Fail: ಚಲಿಸುತ್ತಿರುವ ಕಾರ್ ನಲ್ಲಿ ಆಕಸ್ಮಿಕವಾಗಿ ಬ್ರೇಕ್ ಫೇಲ್ ಆದ್ರೆ ಏನ್ಮಾಡ್ಬೇಕು?

ಆರಂಭಿಕ ಅಪ್ಲಿಕೇಶನ್‌ಗಳು :
ಲ್ಯಾಪ್‌ಟಾಪ್‌ನಲ್ಲಿ ಕೆಲವೊಂದು ಅಪ್ಲಿಕೇಶನ್‌ಗಳು ಸ್ವಯಂಚಾಲಿತವಾಗಿ ತೆರೆಯುತ್ತದೆ. Ctrl+Shift+Esc ಅನ್ನು ಒತ್ತುವ ಮೂಲಕ ಟಾಸ್ಕ್ ಮ್ಯಾನೇಜರ್‌ಗೆ ಹೋಗಿ, ವೈಡ್ ವ್ಯೂಗೆ ಹೋಗಿ ಮತ್ತು 'ಸ್ಟಾರ್ಟ್ಅಪ್' ಟ್ಯಾಬ್‌ಗೆ ನ್ಯಾವಿಗೇಟ್ ಮಾಡಿ ಮತ್ತು ಅವುಗಳನ್ನು ಆಫ್ ಮಾಡಿ. ಹೀಗೆ ಮಾಡಿದರೆ ಸ್ಲೋ ಆಗಿರುವ ಲ್ಯಾಪ್‌ಟಾಪ್‌ ಸ್ಪೀಡ್ ಹೆಚ್ಚಾಗಿದೆ. 

 ಬ್ಯಾಕ್ ಗ್ರೌಂಡ್ ಪ್ರೊಗ್ರಾಮ್ ಗಳ ಬಗ್ಗೆ ಗಮನ ಹರಿಸಿ : 
 ಬ್ಯಾಕ್ ಗ್ರೌಂಡ್ ನಲ್ಲಿರುವ ಪ್ರೊಗ್ರಾಮ್ ಗಳು ಕೂಡಾ ಸಿಸ್ಟಮ್ ಅನ್ನು ನಿಧಾನಗೊಳಿಸುತ್ತದೆ.  ಹೀಗಾಗಿ Ctrl+Shift+Esc ಅನ್ನು ಒಟ್ಟಿಗೆ ಒತ್ತಿ, ಟಾಸ್ಕ್ ಮ್ಯಾನೇಜರ್‌ಗೆ ಹೋಗಿ ಚಾಲನೆಯಲ್ಲಿರುವ ಅನಗತ್ಯ ಪ್ರೋಗ್ರಾಂಗಳನ್ನು ಪರಿಶೀಲಿಸಿ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News