ನವದೆಹಲಿ: ಗೌಪ್ಯತೆ ದೃಷ್ಟಿಯಿಂದ ಈಗ ಅನೇಕ ಜನರು ವಾಟ್ಸಪ್ ನ್ನು ತೊರೆದು ಪರ್ಯಾಯ ಆಪ್ ಗಳತ್ತ ಮುಖ ಮಾಡಿದ್ದಾರೆ.
ಹೌದು,ವಾಟ್ಸಾಪ್ (WhatsApp) ಇತ್ತೀಚೆಗೆ ಗೌಪ್ಯತೆ ನೀತಿಯಲ್ಲಿ ತನ್ನ ಪರಿಷ್ಕರಣೆಯನ್ನು ಪ್ರಕಟಿಸಿದ ನಂತರ ಭಾರತದಲ್ಲಿ ವ್ಯಾಪಕ ಪ್ರಮಾಣದಲ್ಲಿ ಜನರು ಪರ್ಯಾಯ ಆಪ್ ಗಳತ್ತ ಮುಖ ಮಾಡುತ್ತಿದ್ದಾರೆ. ಅದರಲ್ಲಿ ಕೆಲವರು ಸಿಗ್ನಲ್ (Signal) ಹಾಗೂ ಟೆಲಿಗ್ರಾಂ (Telegram) ನಂತಹ ಆಪ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳುತ್ತಿದ್ದಾರೆ.ಇದರ ಮಧ್ಯದಲ್ಲಿಯೇ ಈಗ ಭಾರತದ ಮೂಲದ ಆಪ್ ವೊಂದು ಸಾಕಷ್ಟು ಸದ್ದು ಮಾಡುತ್ತಿದೆ. Arattai app ಎನ್ನುವ ತಮಿಳುನಾಡು ಮೂಲದ Arattai app ನ್ನು ಜೊಹೊ ಅಭಿವೃದ್ದಿಪಡಿಸಿದೆ.
ಇದನ್ನೂ ಓದಿ: WhatsApp Privacy Policy Row : Signal ಹೊಡೆತಕ್ಕೆ ಬೆದರಿ ವಾಟ್ಸಪ್ ಹೇಳಿದ್ದೇನು ಗೊತ್ತಾ?
ಜೊಹೊ ಅವರ Arattai app ಎಂದರೇನು?
ಭಾರತೀಯ ಬಹುರಾಷ್ಟ್ರೀಯ ಕಂಪನಿಯಾಗಿರುವ ಜೊಹೊ ಕಾರ್ಪೊರೇಷನ್ ಚೆನ್ನೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಇದನ್ನು ಶ್ರೀಧರ್ ವೆಂಬು ಎನ್ನುವವರು ಸ್ಥಾಪಿಸಿದ್ದಾರೆ. ತಮ್ಮ ಇತ್ತೀಚಿನ ಟ್ವೀಟ್ನಲ್ಲಿ, ಶ್ರೀಧರ್ ವೆಂಬು ಅವರು ಅಪ್ಲಿಕೇಶನ್ಗಾಗಿ ಟ್ರಯಲ್ ಬಿಡುಗಡೆಯನ್ನು ಘೋಷಿಸಿದ್ದಾರೆ.ಈಗಾಗಲೇ ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿದೆ, ಅರಟ್ಟೈನ್ನು 10,000 ಕ್ಕೂ ಹೆಚ್ಚು ಜನರು ಇನ್ಸ್ಟಾಲ್ ಮಾಡಿಕೊಂಡಿದ್ದಾರೆ. ಈಗ ಇದು ಗೂಗಲ್ ಪ್ಲೇ ಸ್ಟೋರ್ ನಲ್ಲಿ 4.6 ರೇಟಿಂಗ್ಗಳನ್ನು ಹೊಂದಿದೆ.
Our Arattai team asked me to not talk about our instant messaging app yet but since it is already being talked about 😂, I guess I can talk too.
This is a friends-and-family trial release. We will do a formal launch in a few weeks. We have a lot more in store. Stay tuned!
— Sridhar Vembu (@svembu) January 10, 2021
ಇದನ್ನೂ ಓದಿ: ಟೆಕ್ ಜಗತ್ತಿನಲ್ಲಿ ಮಹಾಸಂಕ್ರಾಂತಿ; 50 ಕೋಟಿ ಬಳಕೆದಾರರು WhatsAppನಿಂದ Telegramಗೆ ವಲಸೆ
Arattai vs WhatsApp
Arattai ಇನ್ನೂ ಅದರ ನಿರ್ಮಾಣದ ನಂತರದ ಹಂತದಲ್ಲಿರುವುದರಿಂದ, ಔಪಚಾರಿಕ ಹೋಲಿಕೆ ಇದು ಇನ್ನು ಸೂಕ್ತ ಸಮಯವಲ್ಲ, ಸಧ್ಯ ಇದು end-to-end encrypt ಆಯ್ಕೆಯನ್ನು ಹೊಂದಿಲ್ಲ,ಆದರೆ ಆಪ್ ಗೆ ಚಾಲನೆ ನೀಡುವ ಸಂದರ್ಭದಲ್ಲಿ ಈ ವೈಶಿಷ್ಟ್ಯವನ್ನು ಪರಿಚಯಿಸಲಾಗುತ್ತದೆ ಎಂದು ತಿಳಿದುಬಂದಿದೆ. ಪೂರ್ವಾನುಮತಿ ಇಲ್ಲದೆ ಯಾವುದೇ ಬಳಕೆದಾರರ ಮಾಹಿತಿಯನ್ನು ಅವರು ಬಹಿರಂಗಪಡಿಸುವುದಿಲ್ಲ ಎಂದು ಅರಟ್ಟೈ ಸ್ಪಷ್ಟವಾಗಿ ಘೋಷಿಸಿದೆ. ಆದಾಗ್ಯೂ, ಸೇವೆಯನ್ನು ಸಲ್ಲಿಸುವಲ್ಲಿ ಸಹಾಯಕ್ಕಾಗಿ ಮಾತ್ರ ಅವರು ಕೆಲವು ಬಳಕೆದಾರ ಡೇಟಾವನ್ನು ಹಂಚಿಕೊಳ್ಳಬೇಕಾಗಬಹುದು.
ಇದನ್ನೂ ಓದಿ: Whatsapp ಬಳಕೆದಾರರೇ ಎಚ್ಚರ..! google searchನಲ್ಲಿ ಲೀಕ್ ಆಗಿದೆ ವಾಟ್ಸ್ಆ್ಯಪ್ ಗ್ರೂಪ್ ಲಿಂಕ್
'ಅಂತಹ ಹಂಚಿಕೆ ತಿಳಿಯಬೇಕಾದ ಆಧಾರದ ಮೇಲೆ ಮತ್ತು ಸೂಕ್ತವಾದ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳನ್ನು ನಿರ್ವಹಿಸುವವರೊಂದಿಗೆ ಮಾತ್ರ ಸಂಭವಿಸುತ್ತದೆ. (I) ಅನ್ವಯವಾಗುವ ಕಾನೂನುಗಳನ್ನು ಅನುಸರಿಸಲು, (ii) ನಮ್ಮ ಬಳಕೆದಾರರು, ಉದ್ಯೋಗಿಗಳು ಮತ್ತು ಸಾರ್ವಜನಿಕರ ಹಕ್ಕುಗಳು ಮತ್ತು ಸುರಕ್ಷತೆಯನ್ನು ರಕ್ಷಿಸಲು ಮತ್ತು (iii) ವಂಚನೆಯನ್ನು ತಡೆಗಟ್ಟಲು ನಾವು ಸರ್ಕಾರಿ ಸಂಸ್ಥೆಗಳು ಮತ್ತು ಇತರ ಮೂರನೇ ವ್ಯಕ್ತಿಗಳೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳಬಹುದು. ಎಂದು Arattai ಗೌಪ್ಯತೆ ನೀತಿಯಲ್ಲಿ ಉಲ್ಲೇಖಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.