Instagram ಸರ್ವರ್ ಡೌನ್ : ಪರದಾಡಿದ ಕೋಟ್ಯಂತರ ಬಳಕೆದಾರರು 

ಇದರಿಂದ ಬಳಕೆದಾರರು ಫೋಟೋ, ವಿಡಿಯೋ, ಸ್ಟೋರಿ ಅಪ್ ಲೋಡ್ ಮಾಡಲು ಪರದಾಡಿದ್ದಾರೆ. ಬಳಕೆದಾರರು ಅಪ್ಲಿಕೇಶನ್ ನಿರಂತರವಾಗಿ ಕ್ರ್ಯಾಶ್ ಆಗುತ್ತಿದೆ ಎಂದು ವರದಿ ಮಾಡಿದ್ದಾರೆ.

Written by - Channabasava A Kashinakunti | Last Updated : Sep 22, 2022, 11:39 PM IST
  • ಜನಪ್ರಿಯ ಸೋಶಿಯಲ್ ಮೀಡಿಯಾ ಅಪ್ಲಿಕೇಶನ್ ಇನ್ಸ್ಟಾಗ್ರಾಮ್
  • ಇನ್ಸ್ಟಾಗ್ರಾಮ್ ಇಂದು ವಿಶ್ವದ ವಿವಿಧ ಭಾಗಗಳಲ್ಲಿ ಸರ್ವರ್ ಡೌನ್
  • ಪರದಾಡಿದ ಬಳಕೆದಾರರು
Instagram ಸರ್ವರ್ ಡೌನ್ : ಪರದಾಡಿದ ಕೋಟ್ಯಂತರ ಬಳಕೆದಾರರು  title=

ನವದೆಹಲಿ : ಜನಪ್ರಿಯ ಸೋಶಿಯಲ್ ಮೀಡಿಯಾ ಅಪ್ಲಿಕೇಶನ್ ಇನ್ಸ್ಟಾಗ್ರಾಮ್ ಇಂದು ವಿಶ್ವದ ವಿವಿಧ ಭಾಗಗಳಲ್ಲಿ ಸರ್ವರ್ ಡೌನ್ ಆಗಿದೆ. ಇದರಿಂದ ಬಳಕೆದಾರರು ಫೋಟೋ, ವಿಡಿಯೋ, ಸ್ಟೋರಿ ಅಪ್ ಲೋಡ್ ಮಾಡಲು ಪರದಾಡಿದ್ದಾರೆ. ಬಳಕೆದಾರರು ಅಪ್ಲಿಕೇಶನ್ ನಿರಂತರವಾಗಿ ಕ್ರ್ಯಾಶ್ ಆಗುತ್ತಿದೆ ಎಂದು ವರದಿ ಮಾಡಿದ್ದಾರೆ.

ಅಲ್ಲದೆ, Reddit ನಲ್ಲಿ , ಅವರಿಗೆ ಯಾವುದೇ ಪೋಸ್ಟ್‌ಗಳನ್ನು ನೋಡಲು ಸಾಧ್ಯವಾಗುತ್ತಿಲ್ಲ ಮತ್ತು DownDetector ಸುಮಾರು 12:30PM ET (9:30AM PT) ರಿಂದ ಸೇವೆಯ ಕುರಿತು 20,000 ವರದಿಗಳನ್ನು ಸಲ್ಲಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ : ಏರ್‌ಟೆಲ್ ಬಳಕೆದಾರರಿಗೆ ಗುಡ್ ನ್ಯೂಸ್! ಈ ಲಿಂಕ್ ಕ್ಲಿಕ್ ಮಾಡಿದರೆ ಉಚಿತವಾಗಿ ಸಿಗಲಿದೆ 5GB ಡೇಟಾ

ಎಲ್ಲ ಕಡೆ ಈ ಸಮಸ್ಯೆ ಉಂಟಾಗಿಲ್ಲ ಕೆಲವು ವರ್ಜ್ ಬಳಕೆದಾರರಿಗೆ ಮಾತ್ರ ಹೀಗಾಗಿದೆ, ಕೆಲವು ಕಡೆ ಸಂಪೂರ್ಣವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ವಿಶೇಷವಾಗಿ ಇನ್ ಸ್ಟಾ ಸ್ಟೋರಿಸ್ ವೀಕ್ಷಿಸಲು ಪ್ರಯತ್ನಿಸುವಾಗ. ಅಪ್ಲಿಕೇಶನ್ ಅನ್ನು ರೀ ಸ್ಟಾರ್ಟ್ ಸಮಸ್ಯೆ ಕಂಡು ಬಂದಿದೆ.

ಈ ಬಗ್ಗೆ ಕಂಪನಿ ಯಾವುದು ಉತ್ತರ ನೀಡಿಲ್ಲ. ಆದ್ರೆ, ಬಳಕೆದಾರರು ಮಾತ್ರ ಸಮಸ್ಯೆ ಎದುರಿಸುತ್ತಿದ್ದಾರೆ.

ಈ ಸಮಸ್ಯೆ ಬಗ್ಗೆ ಗೊಂದಲ ಮತ್ತು ನಿರಾಶೆಗೊಂಡ ಕೆಲವು ಬಳಕೆದಾರರು ಟ್ವಿಟರ್‌ನಲ್ಲಿ '#InstagramDown' ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ತಮ್ಮ ಕೋಪವನ್ನು ಹಂಚಿಕೊಂಡಿದ್ದಾರೆ. ಕೆಲವು ಬಳಕೆದಾರರು ಮಿಮ್ಸ್ ಮತ್ತು GIF ಗಳನ್ನು ಪೋಸ್ಟ್ ಮಾಡಿ, ತಮ್ಮ ಸಮಸ್ಯೆಯನ್ನು ವ್ಯಕ್ತ ಪಡಿಸಿದ್ದಾರೆ. 

ಇದನ್ನೂ ಓದಿ : Flipkart Big Billion Days 2022 Sale: ಟಾಪ್ ಬ್ರಾಂಡ್ ಫೋನ್‌ಗಳ ಮೇಲೆ ಭಾರೀ ರಿಯಾಯಿತಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News