ನವದೆಹಲಿ : ಇತ್ತೀಚಿನ ದಿನಗಳಲ್ಲಿ, ರಿಚಾರ್ಜ್‌ಗಾಗಿ ಪ್ರಮುಖ ಟೆಲಿಕಾಂ ಆಪರೇಟರ್‌ಗಳ ನಡುವೆ ಭೀಕರ ಪೈಪೋಟಿ ನಡೆಯುತ್ತಿದೆ. ರಿಲಯನ್ಸ್ ಜಿಯೋ, ವಿಐ ಅಥವಾ ಏರ್ಟೆಲ್ ಈ ಎಲ್ಲಾ ಕಂಪನಿಗಳು ಒಂದಕ್ಕಿಂತ ಹೆಚ್ಚು ರೀಚಾರ್ಜ್ ಪ್ಲಾನ್ ಗಳನ್ನು ತಮ್ಮ ಗ್ರಾಹಕರಿಗೆ ನೀಡುತ್ತಿವೆ. ಅಂತಹ ಒಂದು ಅದ್ಭುತವಾದ ಪ್ಲಾನ್ ಮೂಲಕ ಜಿಯೋ ಎಲ್ಲಾ ಕಂಪನಿಗಳಿಗೆ ಠಕ್ಕರ್ ನೀಡಲು ಬಂದಿದೆ. ಈ ಪ್ಲಾನ್ ನಲ್ಲಿ ಏನಿದೆ? ಇಲ್ಲಿದೆ ನೋಡಿ..
ಜಿಯೋ 39 ರೂ. ಪ್ಲಾನ್
ಈ ಯೋಜನೆ ಜಿಯೋ ಫೋನ್(Jio Phone) ಬಳಸುವ ಗ್ರಾಹಕರಿಗೆ ಮಾತ್ರ. 14 ದಿನಗಳ ವ್ಯಾಲಿಡಿಟಿಯ ಈ ಯೋಜನೆಯಲ್ಲಿ, ಜಿಯೋ ತನ್ನ ಗ್ರಾಹಕರಿಗೆ ಪ್ರತಿದಿನ 100MB ಇಂಟರ್ನೆಟ್ ಅನ್ನು ನೀಡುತ್ತಿದೆ, ಇದು ಒಂದು ದಿನ ಮಾತ್ರ ವ್ಯಾಲಿಡಿಟಿ ಹೊಂದಿರುತ್ತದೆ. ಇದರರ್ಥ ಈ ರೀಚಾರ್ಜ್ ಯೋಜನೆಯನ್ನು ಆನಂದಿಸುತ್ತಿರುವ ಗ್ರಾಹಕರು 1.4GB ಡೇಟಾವನ್ನು 14 ದಿನಗಳವರೆಗೆ ಪಡೆಯುತ್ತಾರೆ. ಅಲ್ಲದೆ, ಗ್ರಾಹಕರು ಈ ಯೋಜನೆಯೊಂದಿಗೆ ಲೆಕ್ಕವಿಲ್ಲದಷ್ಟು ಫೋನ್ ಕರೆಗಳನ್ನು ಮಾಡಲು ಸಾಧ್ಯವಾಗುತ್ತದೆ. ಇದು ಮಾತ್ರವಲ್ಲ, ಇದರಲ್ಲಿ ಗ್ರಾಹಕರು ಎಲ್ಲಾ ಜಿಯೋ ಆಪ್‌ಗಳ ಉಚಿತ ಚಂದಾದಾರಿಕೆಯನ್ನು ಸಹ ಪಡೆಯಬಹುದು. ಈ ಯೋಜನೆಯಲ್ಲಿ ಉಚಿತ SMS ಸೌಲಭ್ಯ ಇದೆ.
ಇದನ್ನೂ ಓದಿ : Xiaomi ಬಿಡುಗಡೆ ಮಾಡಿದೆ ಮೊಬೈಲ್ ಫೋನ್ ಗಿಂತಲೂ ಸ್ಲಿಮ್ ಆಗಿರುವ ಟಿವಿ
ಇತರ ಕಂಪನಿಗಳ ಅಗ್ಗದ ಯೋಜನೆಗಳು
ನೀವು ಇತರ ಕಂಪನಿಗಳನ್ನು ನೋಡಿದರೆ, ವೊಡಾಫೋನ್-ಐಡಿಯಾ(Vodafone Idea) 49 ರೂಪಾಯಿಗಳ ಯೋಜನೆಯನ್ನು ನೀಡುತ್ತಿದೆ, ಇದು 28 ದಿನಗಳವರೆಗೆ ವ್ಯಾಲಿಡಿಟಿ ಹೊಂದಿದೆ. ಇದರಲ್ಲಿ, ವಿಐ 100 ಎಂಬಿ ಡೇಟಾ ಮತ್ತು 38 ರೂ.ಗಳ ಟಾಕ್ ಟೈಮ್ ನೀಡುತ್ತಿದೆ ಮತ್ತು ಗ್ರಾಹಕರು ಇದನ್ನು ತಮ್ಮ ಆಪ್ ನಿಂದ ರೀಚಾರ್ಜ್ ಮಾಡಿದರೆ, ಅವರು 200 ಎಂಬಿ ಹೆಚ್ಚುವರಿ ಡೇಟಾವನ್ನು ಪಡೆಯುತ್ತಾರೆ.
ಏರ್‌ಟೆಲ್(Airtel)ನ 49 ರೂ. ಗಳ ಪ್ಲಾನ್ ಜಾರಿಗೆ ತಂದಿದೆ. ಇದರಲ್ಲಿ 38.52 ರೂ. ಟಾಕ್ ಟೈಮ್ ಮತ್ತು 100MB ಡೇಟಾವನ್ನು ನೀಡುತ್ತದೆ. ಇದರ ವ್ಯಾಲಿಡಿಟಿ ಕೂಡ 28 ದಿನಗಳು ಹೊಂದಿದೆ.
ಇದನ್ನೂ ಓದಿ : ISRO: ಭೂಮಿಯ ಮೇಲ್ವಿಚಾರಣೆ ಉಪಗ್ರಹ EOS-03ರ ಮಿಷನ್ ವಿಫಲ, ಉಡಾವಣೆಯ ನಂತರ ಏನಾಯ್ತು ಗೊತ್ತಾ?
BSNL ತನ್ನ ಗ್ರಾಹಕರಿಗೆ 49 ರೂ.ಗಳ ಪ್ಲಾನ್ ಅನ್ನು ಸಹ ನೀಡುತ್ತದೆ. ಈ ಪ್ಲಾನ್(Recharge) 24 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಗ್ರಾಹಕರಿಗೆ ಒಟ್ಟು 2GB ಡೇಟಾ, 100 ನಿಮಿಷಗಳ ವಾಯ್ಸ್ ಕಾಲಿಂಗ್ ಮತ್ತು 100 SMS ಗಳನ್ನು ನೀಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ