Trending News: ಅತಿ ಹೆಚ್ಚು ಭಾರತೀಯರು ಬಳಸುವ ಪಾಸ್ವರ್ಡ್ ಯಾವುದು ಗೊತ್ತಾ? ಹೊಸ ಸಂಶೋಧನೆ ಹೇಳಿದ್ದೇನು?

Most Common Password Used In India: ಭಾರತದಲ್ಲಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್‌ಗಳ ಕೀವರ್ಡ್‌ಗಳ ಕುರಿತು ಸಂಶೋಧನೆಯೊಂದು ಹೊರಬಿದ್ದಿದೆ.

Written by - Nitin Tabib | Last Updated : Nov 16, 2022, 05:43 PM IST
  • ಇಂಟರ್ನೆಟ್ ಯುಗದಲ್ಲಿ ಪಾಸ್‌ವರ್ಡ್ ಒಂದು ಪ್ರಮುಖ ಮತ್ತು ಗೌಪ್ಯ ವಿಷಯವಾಗಿದೆ.
  • ಯಾವುದೇ ಲಾಕ್ ಅನ್ನು ತೆರೆಯಲು ಕೀಲಿ ಹೇಗೆ ಬೇಕೋ,
  • ಅದೇ ರೀತಿಯಲ್ಲಿ ಇಂಟರ್ನೆಟ್ ಜಗತ್ತಿನ ಎಲ್ಲಾ ಡೇಟಾವನ್ನು ಪ್ರವೇಶಿಸಲು ಪಾಸ್ವರ್ಡ್ ಅಗತ್ಯವಿದೆ.
Trending News: ಅತಿ ಹೆಚ್ಚು ಭಾರತೀಯರು ಬಳಸುವ ಪಾಸ್ವರ್ಡ್ ಯಾವುದು ಗೊತ್ತಾ? ಹೊಸ ಸಂಶೋಧನೆ ಹೇಳಿದ್ದೇನು? title=
Common Used Password

Common Used Password: ಇಂಟರ್ನೆಟ್ ಯುಗದಲ್ಲಿ ಪಾಸ್‌ವರ್ಡ್ ಒಂದು ಪ್ರಮುಖ ಮತ್ತು ಗೌಪ್ಯ ವಿಷಯವಾಗಿದೆ. ಯಾವುದೇ ಲಾಕ್ ಅನ್ನು ತೆರೆಯಲು ಕೀಲಿ ಹೇಗೆ ಬೇಕೋ, ಅದೇ ರೀತಿಯಲ್ಲಿ ಇಂಟರ್ನೆಟ್ ಪ್ರಪಂಚದ ಎಲ್ಲಾ ಡೇಟಾವನ್ನು ಪ್ರವೇಶಿಸಲು ಪಾಸ್ವರ್ಡ್ ಅಗತ್ಯವಿದೆ. ಪಾಸ್ವರ್ಡ್ ಪ್ರಬಲವಾಗಿರಬೇಕು ಎಂದು ಯಾವಾಗಲೂ ಸಲಹೆ ನೀಡಲಾಗುತ್ತದೆ. ಅದಕ್ಕಾಗಿಯೇ ಪಾಸ್ವರ್ಡ್ ರಚಿಸುವಾಗ ಎಲ್ಲಾ ವಿಶೇಷ ಕೀವರ್ಡ್ಗಳನ್ನು ಬಳಸಲಾಗುತ್ತದೆ. ಆದರೆ ಭಾರತದಲ್ಲಿ ಬಳಕೆದಾರರು ತಮ್ಮ ಪಾಸ್‌ವರ್ಡ್ ಅನ್ನು ಸಾಧ್ಯವಾದಷ್ಟು ಸುಲಭಗೊಳಿಸಲು ಬಯಸುತ್ತಾರೆ ಎಂದು ತಿಳಿದರೆ ನಿಮಗೂ ಕೂಡ ಆಶ್ಚರ್ಯವಾಗುತ್ತದೆ.

ಭಾರತೀಯರು ಹೆಚ್ಚಾಗಿ ಸಾಮಾನ್ಯ ಪಾಸ್‌ವರ್ಡ್ ಬಳಸುತ್ತಾರೆ. ಈ ಸಾಮಾನ್ಯ ಪಾಸ್‌ವರ್ಡ್ 'passward' ಆಗಿದೆ, ಇದನ್ನು ಜನರು ಯಾವುದೇ ರೀತಿಯ ವಿವೇಚನೆಯಿಲ್ಲದೆ ಬಳಸುತ್ತಾರೆ. ಎರಡನೇ ಅತಿ ಹೆಚ್ಚು ಬಳಸಲಾಗುವ ಪಾಸ್‌ವರ್ಡ್ ಎಂದರೆ ಅದು '123456'. ಇಂತಹ ಪಾಸ್ ವರ್ಡ್ ಗಳನ್ನು ಸುಲಭವಾಗಿ ಹ್ಯಾಕ್ ಮಾಡಬಹುದು. ಆದಾಗ್ಯೂ, ಡೇಟಾ ಸೋರಿಕೆಯ ಪ್ರಕರಣಗಳು ಭಾರತದಲ್ಲಿ ಅತಿ ಹೆಚ್ಚು ಇಲ್ಲ. ಇಂತಹ ಹೆಚ್ಚಿನ ಪ್ರಕರಣಗಳು ಫ್ರಾನ್ಸ್ ಮತ್ತು ಯುಕೆಯಲ್ಲಿ ಮುನ್ನೆಲೆಗೆ ಬಂದಿವೆ.

ಇದನ್ನೂ ಓದಿ-48 ಸಾವಿರ ಮೌಲ್ಯದ Oppo ಸ್ಮಾರ್ಟ್‌ಫೋನ್ ಕೇವಲ 17,500 ರೂ.ಗೆ ಲಭ್ಯ

ಭಾರತದಲ್ಲಿ ಬಳಕೆಯಾಗುವ ಅತ್ಯಂತ ಸಾಮಾನ್ಯ ಪಾಸ್ವರ್ಡ್ ಗಳ ಪಟ್ಟಿ ಇಲ್ಲಿದೆ
passward
123456
12345678
Bigbasket
123456789
pass@123
1234567890
anmol123
abcd1234
googledummy

ಇದನ್ನೂ ಓದಿ-ಸ್ಲೋ ಆಗಿರುವ ಲ್ಯಾಪ್ ಟಾಪ್ ಅನ್ನು ಸೂಪರ್ ಫಾಸ್ಟ್ ಆಗಿ ಮಾಡುತ್ತದೆ ಈ ಐದು ಟಿಪ್ಸ್

ಹೆಚ್ಚಿನ ಬಳಕೆದಾರರು ಅತ್ಯಂತ ಸರಳವಾದ ಪಾಸ್‌ವರ್ಡ್ ಗಳನ್ನು ಬಳಸುತ್ತಾರೆ ಎಂದು NordPass ಸಂಶೋಧನೆ ಹೇಳುತ್ತದೆ. ಇದರಿಂದ ಬಳಕೆದಾರರು ಸುಲಭವಾಗಿ ಅವುಗಳನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಈ ರೀತಿ ಮಾಡುವುದರಿಂದ, ಅವರು ತಮ್ಮ ಡೇಟಾಗೆ ಹ್ಯಾಕರ್‌ಗಳ ಪ್ರವೇಶ ಮತ್ತಷ್ಟು ಸುಲಭಗೊಳಿಸುತ್ತಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News