ಬೆಂಗಳೂರು : ಗೂಗಲ್ ಅತ್ಯಂತ ಜನಪ್ರಿಯ ಸರ್ಚ್ ಇಂಜಿನ್ ಆಗಿದೆ. ಯಾವುದೇ ವಿಚಾರದ ಬಗ್ಗೆ ಏನೇ ಸಂದೇಹವಿದ್ದರೂ, ಅಥವಾ ಯಾವುದೇ ವಿಚರಾದ ಬಗ್ಗೆ ಹೆಚ್ಚಿನ ಮಾಹಿತಿ ಬೇಕು ಎಂದಿದ್ದರೆ ಅದಕ್ಕೆ ಉತ್ತರವನ್ನು ಕಂಡುಕೊಳ್ಳಲು ಗೂಗಲ್ ಬಳಸಲಾಗುತ್ತದೆ. ಆದರೆ, ನಮ್ಮ ಮನಸ್ಸಿಗೆ ಬಂದ ಎಲ್ಲಾ ವಿಚಾರಗಳನ್ನು ಗೂಗಲ್ ನಲ್ಲಿ ಹುಡುಕುವಂತಿಲ್ಲ. ಕೆಲವೊಂದು ವಿಚಾರಗಳನ್ನು ಗೂಗಲ್ ನಲ್ಲಿ ಸರ್ಚ್ ಮಾಡುವುದು ಕಾನೂನುಬಾಹಿರ. ಇಂಥಹ ವಿಷಯಗಳನ್ನು ಗೂಗಲ್ ನಲ್ಲಿ ಸರ್ಚ್ ಮಾಡಿದರೆ ಜೈಲು ಪಾಲಾಗುವ ಅಪಾಯವೂ ಎದುರಾಗುತ್ತದೆ.
ಈ ವಿಷಯಗಳ ಬಗ್ಗೆ ಗೂಗಲ್ ನಲ್ಲಿ ಸರ್ಚ್ ಮಾಡಲೇ ಬೇಡಿ :
ಬಾಂಬ್ ತಯಾರಿಸುವುದು ಹೇಗೆ ? :
ಅನೇಕ ಬಾರಿ ಜನರು ಯಾವುದೇ ಅರ್ಥವಿಲ್ಲದ, ಅಗತ್ಯವಿಲ್ಲದ ವಿಷಯಗಳ ಬಗ್ಗೆ ಹುಡುಕುತ್ತಿರುತ್ತಾರೆ. ಕೇವಲ ಕುತೂಹಲಕ್ಕಾಗಿ ಈ ಹುಡುಕಾಟ ನಡೆಸಬಹುದು. ಆದರೆ, ಈ ಸರ್ಚ್ ಅವರನ್ನು ಜೈಲಿನ ಅತಿಥಿಯಾಗಿಸಬಹುದು. ಅಂಥಹ ಸರ್ಚ್ ಗಳಲ್ಲಿ ಒಂದು ಬಾಂಬುಗಳನ್ನು ಹೇಗೆ ತಯಾರಿಸಬೇಕು ಎನ್ನುವುದು. ಕುತೂಹಲದ ಉದ್ದೇಶದಿಂದಲೂ ಈ ರೀತಿಯ ಸರ್ಚ್ ಮಾಡಲು ಹೋಗಬೇಡಿ. ಸೈಬರ್ ಸೆಲ್ ಈ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿರುತ್ತದೆ. ಭದ್ರತಾ ಏಜೆನ್ಸಿಗಳು ನಿಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು. ನೀವು ಜೈಲಿಗೆ ಹೋಗಬೇಕಾಗಬಹುದು.
ಇದನ್ನೂ ಓದಿ : ಎಲ್ಲೆಡೆ ಕೆಲಸದಿಂದ ವಜಾ ಮಾಡುತ್ತಿದ್ದರೆ ಟಾಟಾ ಗ್ರೂಪ್‌ನ ಈ ಕಂಪನಿ ಮಾಡಿರುವ ಘೋಷಣೆ ಏನು ಗೊತ್ತಾ ?
ಖಾಸಗಿ ಫೋಟೋ ಮತ್ತು ವೀಡಿಯೊ ಲೀಕ್ :
ಸಾಮಾಜಿಕ ಮಾಧ್ಯಮ ಅಥವಾ ಗೂಗಲ್‌ನಲ್ಲಿ ಖಾಸಗಿ ಫೋಟೋಗಳು ಅಥವಾ ವೀಡಿಯೊಗಳನ್ನು ಲೀಕ್ ಮಾಡುವುದು ಸಹ ಗಂಭೀರ ಅಪರಾಧ. ಈ ಕೃತ್ಯಕ್ಕಾಗಿ ಕೂಡಾ ನೀವು ಜೈಲು ಸೇರಬಹುದು.
ಗರ್ಭಪಾತ ಮಾಡುವುದು ಹೇಗೆ ? :
ಗರ್ಭಪಾತದ ಹುಡುಕಾಟ ವಿಧಾನಗಳು ಸಹ ಅಪರಾಧ ವಿಭಾಗದಲ್ಲಿ ಬರುತ್ತದೆ. ಹಾಗಾಗಿ ಈ ವಿಚಾರದ ಬಗ್ಗೆ ಕೂಡಾ ಸರ್ಚ್ ಮಾಡಬೇಡಿ. ಭಾರತೀಯ ಕಾನೂನಿನ ಪ್ರಕಾರ ವೈದ್ಯರ ಸಲಹೆ ಇಲ್ಲದೆ ಗರ್ಭಪಾತ ಮಾಡುವಂತಿಲ್ಲ.
ಮಕ್ಕಳ ಅಶ್ಲೀಲತೆ :
ಮಕ್ಕಳ ಅಶ್ಲೀಲತೆಯ ಬಗ್ಗೆ ಭಾರತ ಸರ್ಕಾರವು ತುಂಬಾ ಕಟ್ಟುನಿಟ್ಟಾಗಿದೆ. Google ನಲ್ಲಿ ಮಕ್ಕಳ ಅಶ್ಲೀಲ ಫೋಟೋ ವಿಡಿಯೋಗಳನ್ನು ಹುಡುಕುವುದು, ನೋಡುವುದು ಅಥವಾ ಹಂಚಿಕೊಳ್ಳುವುದು ಅಪರಾಧವಾಗಿದೆ. ಈ ನಿಯಮವನ್ನು ಉಲ್ಲಂಘಿಸಿದರೆ ಜೈಲು ಪಾಲಾಗಬಹುದು.
ಇದನ್ನೂ ಓದಿ : Free Watch IPL 2023: ಈ ಬಾರಿ ನೀವು ಉಚಿತವಾಗಿ ಐಪಿಎಲ್ ವೀಕ್ಷಿಸಬಹುದು, ಯಾವುದೇ ರೀತಿಯ ಶುಲ್ಕ ಪಾವತಿಸಬೇಕಾಗಿಲ್ಲ!
ಚಲನಚಿತ್ರ ಪೈರಸಿ :
ಸಿನಿಮಾ ಬಿಡುಗಡೆಗೂ ಮುನ್ನ ಆನ್‌ಲೈನ್‌ನಲ್ಲಿ ಲೀಕ್ ಆಗುವುದು ಅಪರಾಧದ ಅಡಿಯಲ್ಲಿ ಬರುತ್ತದೆ. ಆನ್‌ಲೈನ್‌ನಲ್ಲಿ ಸಿನಿಮಾವನ್ನು ಸೋರಿಕೆ ಮಾಡಿದರೆ ಅಥವಾ ಡೌನ್‌ಲೋಡ್ ಮಾಡಿದರೆ ಅದು ಅಪರಾಧ. ಭಾರತ ಸರ್ಕಾರದ ಈ ಕಾನೂನನ್ನು ಉಲ್ಲಂಘಿಸಿದರೆ 3 ವರ್ಷಗಳ ಜೈಲು ಶಿಕ್ಷೆ ಮತ್ತು 10,000 ರೂ.ದಂಡ ಪಾವತಿಸಬೇಕಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - https://bit.ly/3AClgDd Apple Link - https://apple.co/3wPoNgr ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.