ನವದೆಹಲಿ: ಮೆಸೇಜಿಂಗ್ ಆ್ಯಪ್ ವಾಟ್ಸಾಪ್ (WhatsApp) ಹೊಸ ವೈಶಿಷ್ಟ್ಯಗಳನ್ನು ಹೊರ ತರುತ್ತಿದೆ. ಐದು ವರ್ಷಗಳ ಹಿಂದಿನ ವಾಟ್ಸಾಪ್ ಮತ್ತು ಇವತ್ತಿನ ಅಪ್ಡೇಟೆಡ್ ಆವೃತ್ತಿಯಲ್ಲಿ ಭಾರೀ ವ್ಯತ್ಯಾಸವಿದೆ. ಇದೀಗ ಮತ್ತೆ ಕಂಪನಿ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುವಲ್ಲಿ ಕೆಲಸ ಮಾಡುತ್ತಿದೆ. ಶೀಘ್ರದಲ್ಲೇ 5 ಹೊಸ ವೈಶಿಷ್ಟ್ಯಗಳನ್ನು (Features) ಕಂಪನಿ ಪರಿಚಯಿಸಲಿದೆ. ಇದಾದ ನಂತರ ಚಾಟಿಂಗ್ ಇನ್ನು ಹೆಚ್ಚು ಮಜವಾಗಿರಲಿದೆ ಎನ್ನುವುದು ಕಂಪನಿಯ ವಾದ.
Instagram ರೀಲ್ಸ್ :
ವಾಟ್ಸಾಪ್ ಶೀಘ್ರದಲ್ಲೇ Instagram Reels ಸೇರಿಸಲಿದೆ. ಮಾಹಿತಿಯ ಪ್ರಕಾರ, ಸಣ್ಣ ವೀಡಿಯೊ ತುಣುಕುಗಳನ್ನು ಚಾಟಿಂಗ್ ಅಪ್ಲಿಕೇಶನ್‌ಗೆ ಸಂಯೋಜಿಸಲಾಗುತ್ತದೆ. ಈ ವೀಡಿಯೊ ಬಳಕೆದಾರರಿಗೆ ಹೇಗೆ ಕಾಣಲಿದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಸ್ಟೇಟಸ್ (Status) ನಂತೆಯೇ Instagram Reelsಗು ಪ್ರತ್ಯೇಕ ಸೆಕ್ಷನ್ ಇರಬಹುದು ಎನ್ನಲಾಗಿದೆ.
ಇದನ್ನೂ ಓದಿ : BSNL ಗ್ರಾಹಕರಿಗೆ ಸಿಗಲಿದೆ ಈ ಅದ್ಭುತ ಪ್ರಯೋಜನ
ನಿರ್ದಿಷ್ಟ ಸಮಯದ ನಂತರ ಫೋಟೋ ಡಿಲೀಟ್ ಆಗಲಿದೆ :
ಮೆಸೇಜ್ ನಂತೆಯೇ (Message) ಫೋಟೋ ಕೂಡ ನಿರ್ದಿಷ್ಟ ಸಮಯದ ನಂತರ ಡಿಲೀಟ್ ಆಗುವ Feature ಕೂಡ ಬರಲಿದೆ. ಇದರಲ್ಲಿ ಒಂದು ನಿಗದಿತ ಸಮಾಯದ ನಂತರ ಫೋಟೋ ತನ್ನಷ್ಟಕ್ಕೆ ಡಿಲೀಟ್ ಆಗಲಿದೆ.
ಮಲ್ಟಿ ಡಿವೈಸ್ ಸಪೋರ್ಟ್ (Multi Device support) :
ಒಂದಕ್ಕಿಂತ ಹೆಚ್ಚು ಡಿವೈಸ್ ಗಳಲ್ಲಿ ವಾಟ್ಸಾಪ್ ಆಕ್ಸೆಸ್ ಸಿಗಲಿದೆ ಎಂಬ ವಿಚಾರ ಬಹಳ ದಿನಗಳಿಂದ ಕೇಳಿ ಬರುತ್ತಿದೆ. ಈ ವರ್ಷದಿಂದ ಈ ಮಲ್ಟಿ ಡಿವೈಸ್ ಸಪೋರ್ಟ್ ಸಿಸ್ಟಮ್ ಆರಂಭವಾಗಲಿದೆ ಎನ್ನಲಾಗಿದೆ. ಅಂದರೆ, ಏಕಕಾಲದಲ್ಲಿ ನಾಲ್ಕು ಡಿವೈಸ್ ಗಳಲ್ಲಿ ವಾಟ್ಸಾಪ್ (WhatsApp) ನಿರ್ವಹಿಸಲು ಸಾಧ್ಯವಾಗುತ್ತದೆ.
ಇದನ್ನೂ ಓದಿ : Samsung Galaxy S20 FE: ನಾಳೆ ಭಾರತದಲ್ಲಿ ಬಿಡುಗಡೆಯಾಗಲಿದೆ Samsung Galaxy S20 FE 5G ಆವೃತ್ತಿ
ವಾಟ್ಸಾಪ್ ಆಡಿಯೊ ಮೆಸೇಜ್ ಫೀಚರ್ :
ಇತ್ತೀಚಿನ ವರದಿಗಳ ಪ್ರಕಾರ, ವಾಟ್ಸ್‌ಆ್ಯಪ್‌ನಲ್ಲಿ ಹೊಸ ಆಡಿಯೊ ಮೆಸೇಜ್ ಫೀಚರ್ (Audio Message Feature) ಬರುತ್ತಿದೆ. ಇದರ ವಿಶೇಷ ಲಕ್ಷಣವೆಂದರೆ ಆಡಿಯೊದ ವೇಗವನ್ನು ಬಳಕೆದಾರರೇ ನಿರ್ಧರಿಸಬಹುದು. ಪ್ರಸ್ತುತ ಇರುವ ವಾಟ್ಸಾಪ್ ಆಡಿಯೊ ಮೆಸೇಜ್ ಒಂದೇ ಆಡಿಯೊ ಸ್ಪೀಡ್ ಫಾರ್ಮ್ಯಾಟ್ ಅನ್ನು ಬೆಂಬಲಿಸುತ್ತದೆ.
Read Later Feature
ಮಾಹಿತಿಯ ಪ್ರಕಾರ, ಈಗ ಬಳಕೆದಾರರು, ಯಾವುದೇ ಸಂದೇಶವನ್ನು ಅಳಿಸುವ (Delete) ಅಗತ್ಯವಿಲ್ಲ. ಅನಗತ್ಯ ಮೆಸೇಜ್ ಗಳನ್ನೂ ಆರ್ಕೈವ್ ಮೋಡ್‌ನಲ್ಲಿ ಹಾಕಬಹುದು. ಅಂದರೆ ಅನಗತ್ಯ ಮೆಸೇಜ್ ಗಳಿಂದ ಆಗುವ ತೊಂದರೆ ತಪ್ಪುತ್ತದೆ. ಬಳಕೆದಾರರ ಸಮಯಕ್ಕನುಗುಣವಾಗಿ ನೀವು ಸಂದೇಶವನ್ನು ಓದಬಹುದು. ಈ ವೈಶಿಷ್ಟ್ಯ ಕೂಡ ಈ ವರ್ಷ ಆರಂಭವಾಗಲಿದೆ.
ಇದನ್ನೂ ಓದಿ: Mobile Users: ಮೊಬೈಲ್ ಬಳಕೆದಾರರೇ ಎಚ್ಚರ: ಅಪ್ಪಿತಪ್ಪಿಯೂ 'ಈ ಅಪ್ಲಿಕೇಶನ್' ಡೌನ್ಲೋಡ್ ಮಾಡಬೇಡಿ!
WhatsApp logout :
ಮೆಸೇಜಿಂಗ್ ಅಪ್ಲಿಕೇಶನ್ ನಲ್ಲಿ ಇದೆ ಮೊದಲ ಬಾರಿಗೆ ಆಪ್ ಡಿಲೀಟ್ ಮಾಡದೆ ಬ್ರೇಕ್ (Break) ತೆಗೆದುಕೊಳ್ಳುವ ಅವಕಾಶ ನೀಡಲಾಗಿದೆ. ವಾಟ್ಸಾಪ್‌ನಲ್ಲಿ ಬರುವ ಸಂದೇಶದಿಂದ ಅಸಮಾಧಾನಗೊಂಡಿದ್ದರೆ, ಆ್ಯಪ್ ಅನ್ನೇ ಡಿಲೀಟ್ ಮಾಡುವ ಅಗತ್ಯವಿಲ್ಲ. ಅದಕ್ಕಾಗಿಯೇ ವಾಟ್ಸಾಪ್ ತರುತ್ತಿದೆ logout Feature. ಅಂದರೆ, ಈಗ ನಮಗೆ ಮನ ಬಂದಂತೆ ವಾಟ್ಸಾಪ್ ನಿಂದ ಬ್ರೇಕ್ ತೆಗೆದುಕೊಳ್ಳಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.