ಬರುತ್ತಿದೆ 10 ಸಾವಿರಕ್ಕಿಂತ ಕಡಿಮೆ ಬೆಲೆಯ ಸೂಪರ್ Smartphone!ವಿನ್ಯಾಸ ವೈಶಿಷ್ಟ್ಯ ಎರಡೂ ಅದ್ಭುತ

ಆಗಸ್ಟ್ 1 ರಂದು Moto G14 ಬಿಡುಗಡೆಯಾಗಲಿದೆ. ವರದಿಗಳ ಪ್ರಕಾರ, ಫೋನ್‌ನ ಬೆಲೆ ಸುಮಾರು 10 ಸಾವಿರ ಎನ್ನಲಾಗಿದೆ.  ಫೋನಿನ ವಿನ್ಯಾಸವೂ ಮುನ್ನೆಲೆಗೆ ಬಂದಿದೆ.

Written by - Ranjitha R K | Last Updated : Jul 24, 2023, 03:34 PM IST
  • ಆಗಸ್ಟ್ 1 ರಂದು ಬಿಡುಗಡೆಯಾಗಲಿದೆ Moto G14
  • ಫೋನ್‌ನ ಬೆಲೆ ಸುಮಾರು 10 ಸಾವಿರ ಎನ್ನಲಾಗಿದೆ.
  • Moto G14 ವಿಶೇಷಣಗಳು
ಬರುತ್ತಿದೆ 10 ಸಾವಿರಕ್ಕಿಂತ ಕಡಿಮೆ ಬೆಲೆಯ ಸೂಪರ್ Smartphone!ವಿನ್ಯಾಸ ವೈಶಿಷ್ಟ್ಯ ಎರಡೂ ಅದ್ಭುತ  title=

ಬೆಂಗಳೂರು : ಮೊಟೊರೊಲಾ ಇತ್ತೀಚೆಗೆ ಅನೇಕ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಈಗ ಕಂಪನಿಯು ಭಾರತದಲ್ಲಿ ಬಜೆಟ್ ಫೋನ್ ಅನ್ನು ಬಿಡುಗಡೆ ಮಾಡಲಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಲ್ಯಾಂಡಿಂಗ್ ಪೇಜ್ ಈ ಮಾಹಿತಿ ಕಾಣಿಸಿಕೊಂಡಿದೆ. ಅದರ ಪ್ರಕಾರ ಫೋನ್‌ನ ಹೆಸರು Moto G14 ಆಗಿರಲಿದೆ. ಆಗಸ್ಟ್ 1 ರಂದು Moto G14 ಬಿಡುಗಡೆಯಾಗಲಿದೆ. ವರದಿಗಳ ಪ್ರಕಾರ, ಫೋನ್‌ನ ಬೆಲೆ ಸುಮಾರು 10 ಸಾವಿರ ಎನ್ನಲಾಗಿದೆ. 
ಫೋನಿನ ವಿನ್ಯಾಸವೂ ಮುನ್ನೆಲೆಗೆ ಬಂದಿದೆ. Moto G14 ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.

Moto G14 ವಿಶೇಷಣಗಳು :
Moto G14 6.5-ಇಂಚಿನ LCD FHD+ ಪಂಚ್-ಹೋಲ್ ಡಿಸ್ಪ್ಲೇಯೊಂದಿಗೆ ಬರುತ್ತದೆ. Unisoc T616 ಚಿಪ್‌ಸೆಟ್ ಅನ್ನು ಅದರ ಪವರ್ ಸಪ್ಲೈ ಗಾಗಿ ಬಳಸಲಾಗುತ್ತದೆ. ಇದು 4GB RAM ಮತ್ತು 128GB UFS 2.2 ಸ್ಟೋರೇಜ್ ಅನ್ನು  ಹೊಂದಿರುತ್ತದೆ. ಹೆಚ್ಚುವರಿ  ಸ್ಟೋರೇಜ್ ಗಾಗಿ ಮೈಕ್ರೊ SD ಕಾರ್ಡ್ ಸ್ಲಾಟ್ ಅನ್ನು  ನೀಡಲಾಗಿದೆ. ಅದನ್ನು ಬಳಸಿಕೊಂಡು  ಸ್ಟೋರೇಜ್ ವಿಸ್ತರಿಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ : 'Akira' ಕಂಪ್ಯೂಟರ್ ಬಳಕೆದಾರರೇ ಎಚ್ಚರ!

Moto G14 ಬ್ಯಾಟರಿ: 
Moto G14 ಆಂಡ್ರಾಯ್ಡ್ 13 ಅನ್ನು ಆಧರಿಸಿದೆ. ಆದರೆ  Android 14 OS ಅಪ್ ಗ್ರೇಡ್ ಆಗಲು,  ಸೆಕ್ಯೂರಿಟಿ ಅಪ್ಡೇಟ್ ಗಳನ್ನು ಮೂರು ವರ್ಷಗಳ ಒಳಗೆ ಸ್ವೀಕರಿಸುವ ಭರವಸೆ ಇದೆ ಎನ್ನಲಾಗಿದೆ. ಇದು ದೊಡ್ಡ 5,000mAh ಬ್ಯಾಟರಿಯನ್ನು ಹೊಂದಿದ್ದು, 20W ಫಾಸ್ಟ್  ಚಾರ್ಜಿಂಗ್ ಅನ್ನು  ಸಪೋರ್ಟ್ ಮಾಡುತ್ತದೆ. ಫೋನ್ 34 ಗಂಟೆಗಳವರೆಗೆ ಟಾಕ್ ಟೈಮ್, 94 ಗಂಟೆಗಳವರೆಗೆ ಮ್ಯೂಸಿಕ್ ಪ್ಲೇಬ್ಯಾಕ್ ಟೈಮ್ ಮತ್ತು 16 ಗಂಟೆಗಳವರೆಗೆ ವೀಡಿಯೊ ಪ್ಲೇಬ್ಯಾಕ್ ಅನ್ನು ನೀಡುತ್ತದೆ. ಆಡಿಯೊಫಿಲ್‌ಗಳಿಗಾಗಿ, G14 ಡಾಲ್ಬಿ ಅಟ್ಮಾಸ್ ತಂತ್ರಜ್ಞಾನದಿಂದ ಬೆಂಬಲಿತವಾದ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳೊಂದಿಗೆ ಬರುತ್ತದೆ.

Moto G14 ಕ್ಯಾಮೆರಾ : 
Moto G14 50-ಮೆಗಾಪಿಕ್ಸೆಲ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುತ್ತದೆ. ಇದು ಉತ್ತಮ ಗುಣಮಟ್ಟದ ಫೋಟೋಗಳನ್ನು ಸೆರೆಹಿಡಿಯಲು ಸಹಾಯ ಮಾಡುತ್ತದೆ. ಇದು ಮ್ಯಾಕ್ರೋ ವಿಷನ್ ಮತ್ತು ನೈಟ್ ವಿಷನ್‌ನಂತಹ ಫೋಟೋಗ್ರಫಿ ವೈಶಿಷ್ಟ್ಯಗಳನ್ನು ಸಹ ನೀಡುತ್ತದೆ. ಅಲ್ಲದೆ, ಇದು ಸೈಡ್-ಫೇಸಿಂಗ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ನೊಂದಿಗೆ ಬರುತ್ತದೆ. 

ಇದನ್ನೂ ಓದಿ : OTT ಉದ್ಯಮಕ್ಕೆ ಎದುರಾಗಿದೆಯೇ ಹೊಸ ಸಂಕಷ್ಟ? ವೆಬ್ ಸೀರೀಸ್ ನಿರ್ಮಿಸುವ ಮುನ್ನ ಸರ್ಕಾರದ ಅನುಮತಿ ಕಡ್ಡಾಯ!

ಭಾರತದಲ್ಲಿ Moto G14 ಬೆಲೆ : 
ಇಲ್ಲಿಯವರೆಗೆ Moto G14 ಬೆಲೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ಆದರೆ, G13 ಬೆಲೆ 9,999 ರೂ.ಗೆ ಇದ್ದ ಕಾರಣ, G14 ಬೆಲೆ ಅದೇ ಶ್ರೇಣಿಯಲ್ಲಿ ದೊರೆಯುವ ಸಾಧ್ಯತೆ ಇದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News