Tata Nexon: ಕೇವಲ 6 ಲಕ್ಷ ರೂಪಾಯಿಗೆ ಈ ಕಾರನ್ನು ಮನೆಗೆ ತನ್ನಿ!

Tata Nexon: ಭಾರತೀಯ ಮಾರುಕಟ್ಟೆಯಲ್ಲಿ ಪ್ರತಿಷ್ಠಿತ ಕಾರುಗಳ ಪಟ್ಟಿಯಲ್ಲಿ ಖಂಡಿತವಾಗಿಯೂ ಟಾಟಾ ಮೋಟಾರ್ಸ್ ಅಗ್ರ ಸ್ಥಾನದಲ್ಲಿ ನಿಲ್ಲುತ್ತದೆ. ಅದರಕ್ಕೂ ಟಾಟಾ ಮೋಟಾರ್ಸ್ ಕಂಪನಿಯ ಟಾಟಾ ನೆಕ್ಸಾನ್ ಮತ್ತು ಟಾಟಾ ಪಂಚ್ ಜನರ ಅತ್ಯುತ್ತಮ ಕಾರಗಳ ಪಟ್ಟಿಯಲ್ಲಿವೆ. 

Written by - Yashaswini V | Last Updated : May 15, 2023, 08:49 AM IST
  • ಶೋ ರೂಂನಲ್ಲಿ ಟಾಟಾ ನೆಕ್ಸಾನ್‌ಗೆ ಭಾರೀ ಬೇಡಿಕೆಯಿದೆ.
  • ಮಾತ್ರವಲ್ಲ, ಇದರ ಸೆಕೆಂಡ್ ಹ್ಯಾಂಡ್ ಕಾರುಗಳಿಗೂ ಕೂಡ ಹೆಚ್ಚು ಬೇಡಿಕೆಯಿದೆ.
  • ನೀವು ಟಾಟಾ ನೆಕ್ಸಾನ್‌ನ ಸೆಕೆಂಡ್ ಹ್ಯಾಂಡ್ ಕಾರ್ ಖರೀದಿಸಲು ಬಯಸಿದರೆ 6 ಲಕ್ಷ ರೂಪಾಯಿಗಳಲ್ಲಿ ನಿಮ್ಮ ಮನೆಗೆ ನೆಕ್ಸಾನ್ ಕೊಂಡೊಯ್ಯಬಹುದು.
Tata Nexon: ಕೇವಲ 6 ಲಕ್ಷ ರೂಪಾಯಿಗೆ ಈ ಕಾರನ್ನು ಮನೆಗೆ ತನ್ನಿ!  title=
Second hand Tata Nexon

Tata Nexon: ಭಾರತೀಯ ಕಾರು ಮಾರುಕಟ್ಟೆಯಲ್ಲಿ ಅತ್ಯುತ್ತಮ ಸ್ಥಾನದಲ್ಲಿರುವ   ಟಾಟಾ ಮೋಟಾರ್ಸ್ ಕಂಪನಿಯ ಕಾರುಗಳಿಗೆ ಹೆಚ್ಚು ಬೇಡಿಕೆ ಇದೆ. ಅದರಲ್ಲೂ ಈ ವರ್ಷ ಟಾಟಾ ಮೋಟಾರ್ಸ್‌ನ ಟಾಟಾ ನೆಕ್ಸಾನ್ ಮತ್ತು ಟಾಟಾ ಪಂಚ್ ಕಾರುಗಳು ಉತ್ತಮ ಮಾರಾಟವನ್ನು ಕಾಣುತ್ತಿವೆ. ಅಂಕಿ ಅಂಶಗಳ ಪ್ರಕಾರ, ಏಪ್ರಿಲ್ ತಿಂಗಳಲ್ಲಿ ಟಾಟಾ ಮೋಟಾರ್ಸ್‌ನ  ನೆಕ್ಸಾನ್ ಎಸ್‌ಯೂ‌ವಿ ಹೆಚ್ಚು ಮಾರಾಟವಾದ ಕಾರು ಎಂದು ಹೇಳಲಾಗಿದೆ.

ಶೋ ರೂಂನಲ್ಲಿ ಟಾಟಾ ನೆಕ್ಸಾನ್‌ಗೆ ಭಾರೀ ಬೇಡಿಕೆಯಿದೆ. ಮಾತ್ರವಲ್ಲ, ಇದರ ಸೆಕೆಂಡ್ ಹ್ಯಾಂಡ್ ಕಾರುಗಳಿಗೂ ಕೂಡ ಹೆಚ್ಚು ಬೇಡಿಕೆಯಿದೆ. ನೀವು ಟಾಟಾ ನೆಕ್ಸಾನ್‌ನ ಸೆಕೆಂಡ್ ಹ್ಯಾಂಡ್ ಕಾರ್ ಖರೀದಿಸಲು ಬಯಸಿದರೆ 6 ಲಕ್ಷ ರೂಪಾಯಿಗಳಲ್ಲಿ ನಿಮ್ಮ ಮನೆಗೆ ನೆಕ್ಸಾನ್ ಕೊಂಡೊಯ್ಯಬಹುದು. ಅದು ಹೇಗೆ ಸಾಧ್ಯ? ಎಲ್ಲಿ ಇಷ್ಟು ಕಡಿಮೆ ಬೆಲೆಯಲ್ಲಿ ಕಾರ್ ಖರೀದಿಸಬಹುದು ಎಂದು ತಿಳಿಯಿರಿ. 

ವಾಸ್ತವವಾಗಿ, ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡುವ ಹಲವು ವೆಬ್‌ಸೈಟ್‌ಗಳು ಲಭ್ಯವಿವೆ. ಇವುಗಳಲ್ಲಿ Cars24 ಕೂಡ ಒಂದು. ಈ ವೆಬ್‌ಸೈಟ್‌ನಲ್ಲಿ ಸುಮಾರು 6 ಲಕ್ಷ ರೂ.ಗಳಲ್ಲಿ ಲಭ್ಯವೈರುವ ಹಾವು ನೆಕ್ಸಾನ್ ಕಾರ್ ಗಳನ್ನು ಪಟ್ಟಿ ಮಾಡಲಾಗಿದೆ. ಅವುಗಳ ವಿವರ ಕೆಳಕಂಡಂತಿದೆ. 

ಇದನ್ನೂ ಓದಿ- 6-7 ಸೀಟರ್ ಮರೆತುಬಿಡಿ… ಬಂದಿದೆ 8 ಸೀಟರ್ ಕಾರು! ಫೀಚರ್ ಪರಮಾದ್ಭುತ-ಬೆಲೆಯೂ ಭಾರೀ ಕಡಿಮೆ

2018 ರ ಟಾಟಾ ನೆಕ್ಸಾನ್:
ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡುವ Cars24 ಎಂಬ ವೆಬ್‌ಸೈಟ್‌ನಲ್ಲಿ 2018 ರ ಟಾಟಾ ನೆಕ್ಸಾನ್ ಎಕ್ಸ್‌ಎಂ ((2018 Tata NEXON XM) 1.2 ಮ್ಯಾನುಯಲ್ ಅನ್ನು 6.18 ಲಕ್ಷ ರೂ.ಗಳಿಗೆ ಪಟ್ಟಿ ಮಾಡಲಾಗಿದೆ. ಈ ಕಾರು ಇದುವರೆಗೂ ಒಟ್ಟು 58,008 ಕಿ.ಮೀ ಕ್ರಮಿಸಿದ್ದು, ಮೊದಲ ಮಾಲೀಕರ ಅಧೀನದಲ್ಲಿದೆ. ಈ ಪೆಟ್ರೋಲ್ ಎಂಜಿನ್ ಕಾರ್ ಸರಣಿಯ ಸಂಖ್ಯೆ DL-2C ಯಿಂದ ಆರಂಭವಾಗಲಿದ್ದು, ಈ ಕಾರ್ ಫರಿದಾಬಾದ್‌ನಲ್ಲಿ ಮಾರಾಟಕ್ಕೆ ಲಭ್ಯವಿದೆ ಎಂದು ಇದರಲ್ಲಿ ವಿವರಿಸಲಾಗಿದೆ. 

2018 Tata NEXON XMA : 
ಈ ವೆಬ್‌ಸೈಟ್‌ನಲ್ಲಿ ಪಟ್ಟಿಮಾಡಲಾಗಿರುವ ಇನ್ನೊಂದು ಕಾರ್ ಎಂದರೆ ಅದು 2018 ರ ಟಾಟಾ ನೆಕ್ಸಾನ್ ಎಕ್ಸ್‌ಎಂಎ (2018 Tata NEXON XMA) 1.5 ಆಟೋ ಮ್ಯಾಟಿಕ್ ಕಾರ್. ಇದನ್ನು 6.18ಲಕ್ಷಕ್ಕೆ ನಿಮ್ಮದಾಗಿಸಬಹುದು. ಈ ಕಾರ್ ಇದುವರೆಗೂ 94,046 ಕಿ.ಮೀ ಕ್ರಮಿಸಿದ್ದು, ಈ ಡೀಸೆಲ್ ಎಂಜಿನ್ ಕಾರ್ ಪ್ರಸ್ತುತ ಮೊದಲ ಮಾಲೀಕರ ಹೆಸರಿನಲ್ಲಿದೆ. ಇದರ ಸಂಖ್ಯೆ DL-8C ನಿಂದ ಆರಂಭವಾಳಿದ್ದು, ಗುರುಗ್ರಾಮ್‌ನಲ್ಲಿ ಇದು ಮಾರಾಟಕ್ಕೆ ಲಭ್ಯವಿದೆ ಎಂದು ತಿಳಿದು ಬಂದಿದೆ. 

2018 ಟಾಟಾ ನೆಕ್ಸಾನ್ XM: 
ಈ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾದ ಮತ್ತೊಂದು ಕಾರ್ ಎಂದರೆ 2018 ಟಾಟಾ ನೆಕ್ಸಾನ್ XM ಪೆಟ್ರೋಲ್ ಮ್ಯಾನುಯಲ್ ಕಾರ್. ಈ ಕಾರ್ 6.30 ಲಕ್ಷ ರೂ.ಗಳಿಗೆ ಲಭ್ಯವಿದ್ದು, ಇಡುವರೆಗೆ 88,706 ಕಿ.ಮೀ. ಸಂಚರಿಸಿದೆ. ಈ ಪೆಟ್ರೋಲ್ ಎಂಜಿನ್ ಕಾರ್ ಪ್ರಸ್ತುತ ಮೊದಲ ಮಾಲೀಕರ ಹೆಸರಿನಲ್ಲಿದ್ದು. ಇದರ ಸಂಖ್ಯೆ HR-26 ರಿಂದ ಪ್ರಾರಂಭವಾಗುತ್ತದೆ. ಇದು ಗುರುಗ್ರಾಮ್‌ನಲ್ಲಿ ಮಾರಾಟಕ್ಕೆ ಲಭ್ಯವಿದೆ ಎಂದು ವೆಬ್‌ಸೈಟ್‌ ಮಾಹಿತಿ ಹಂಚಿಕೊಂಡಿದೆ. 

ಇದನ್ನೂ ಓದಿ- Swift, Nexon ಅಲ್ಲ… 34KM ಮೈಲೇಜ್ ನೀಡುವ, ದೇಶದಲ್ಲಿ ಅತೀ ಹೆಚ್ಚು ಮಾರಾಟವಾದ ಕಾರಿದು! ಬೆಲೆ ಜಸ್ಟ್ 5 ಲಕ್ಷ

2018 Tata NEXON XZA+: 
ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡುವ Cars24 ವೆಬ್‌ಸೈಟ್‌ನಲ್ಲಿ 2018 Tata NEXON XZA+ 1.2 ಡ್ಯುಯಲ್ ಟೋನ್  ಆಟೋಮ್ಯಾಟಿಕ್ ಕಾರ್ ಬೆಲೆ 6.72 ಲಕ್ಷ ರೂ. ಈ ಪೆಟ್ರೋಲ್ ಎಂಜಿನ್ ಕಾರು 75,382 ಕಿ.ಮೀ. ಕ್ರಮಿಸಿದ್ದು, ಇದು ಕೂಡ ಮೊದಲ ಮಾಲೀಕರ ಹೆಸರಿನಲ್ಲಿದೆ. UP-16 ಸರಣಿ ಸಂಖ್ಯೆಯಿಂದ ಆರಂಭವಾಗುವ ಈ ಕಾರ್ ಗಾಜಿಯಾಬಾದ್‌ನಲ್ಲಿ ಮಾರಾಟಕ್ಕೆ ಲಭ್ಯವಿದೆ ಎಂದು ತಿಳಿಸಲಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News