ಸೂಪರ್ ಮೈಲೇಜ್, ವೈಶಿಷ್ಟ್ಯ ಹೊಂದಿರುವ SUV!ಅಗ್ಗದ ಬೆಲೆಯ ಈ ಕಾರಿನ ಸೇಫ್ಟಿ ಫೀಚರ್ ಅದ್ಭುತ !

SUVs under 10 Lakh in India:ಈ ಕಾರು ಏಪ್ರಿಲ್‌ನಲ್ಲಿ ಹೆಚ್ಚು ಮಾರಾಟವಾದ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಟಾಟಾ ಮೋಟಾರ್ಸ್‌ನ ಕಾಂಪ್ಯಾಕ್ಟ್ SUV ಟಾಟಾ ನೆಕ್ಸಾನ್ ಏಪ್ರಿಲ್ ತಿಂಗಳಲ್ಲಿ ಹೆಚ್ಚು ಮಾರಾಟವಾದ SUV ಆಗಿ ಹೊರಹೊಮ್ಮಿದೆ.

Written by - Ranjitha R K | Last Updated : May 5, 2023, 10:47 AM IST
  • ಎಸ್‌ಯುವಿ ವಾಹನಗಳಿಗೆ ನಿಧಾನವಾಗಿ ಬೇಡಿಕೆ ಹೆಚ್ಚುತ್ತಿದೆ.
  • ಲುಕ್‌ನಿಂದಾಗಿ ಹೆಚ್ಚಿನ ಜನರು ಈ ವಿಭಾಗದ ವಾಹನಗಳಿಗೆ ಬೇಡಿಕೆ
  • ನೀಡುತ್ತದೆ ಉತ್ತಮ ಮೈಲೇಜ್ ಅದ್ಭುತ ಸೇಫ್ಟಿ ಫೀಚರ್
ಸೂಪರ್ ಮೈಲೇಜ್, ವೈಶಿಷ್ಟ್ಯ ಹೊಂದಿರುವ SUV!ಅಗ್ಗದ ಬೆಲೆಯ ಈ ಕಾರಿನ ಸೇಫ್ಟಿ ಫೀಚರ್ ಅದ್ಭುತ !  title=

SUVs under 10 Lakh in India : ಎಸ್‌ಯುವಿ ವಾಹನಗಳಿಗೆ ನಿಧಾನವಾಗಿ ಬೇಡಿಕೆ ಹೆಚ್ಚುತ್ತಿದೆ. ಪ್ರಚಂಡ ಕಾರ್ಯಕ್ಷಮತೆ ಮತ್ತು ಉತ್ತಮ ಸ್ಪೋರ್ಟಿ ಲುಕ್‌ನಿಂದಾಗಿ ಹೆಚ್ಚಿನ ಜನರು ಈ ವಿಭಾಗದ ವಾಹನಗಳನ್ನು ಖರೀದಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಈ ವರ್ಗದಲ್ಲಿ ಹಲವು ವಿಧದ ಮಾದರಿಗಳು ವಾಹನಗಳು ಇದ್ದರೂ ಕಾಂಪ್ಯಾಕ್ಟ್ ವಿಭಾಗದಲ್ಲಿ ಹೆಚ್ಚಿನ ಮಾರಾಟ ಕಂಡುಬರುತ್ತವೆ. ಏಪ್ರಿಲ್ ತಿಂಗಳಲ್ಲಿ, ಕೈಗೆಟುಕುವ SUVಯೊಂದು  ಬ್ರೆಝಾ ಮತ್ತು ಹ್ಯುಂಡೈ ಕ್ರೆಟಾದಂತಹ ಫ್ಲ್ಯಾಗ್‌ಶಿಪ್‌ಗಳನ್ನು ಕೂಡಾ  ಮಾರಾಟದಲ್ಲಿ ಹಿಂದಿಕ್ಕಿದೆ. 

ಈ ಕಾರು ಏಪ್ರಿಲ್‌ನಲ್ಲಿ ಹೆಚ್ಚು ಮಾರಾಟವಾದ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಟಾಟಾ ಮೋಟಾರ್ಸ್‌ನ ಕಾಂಪ್ಯಾಕ್ಟ್ SUV ಟಾಟಾ ನೆಕ್ಸಾನ್ ಏಪ್ರಿಲ್ ತಿಂಗಳಲ್ಲಿ ಹೆಚ್ಚು ಮಾರಾಟವಾದ SUV ಆಗಿ ಹೊರಹೊಮ್ಮಿದೆ. ಈ ಕಾರು ಇದು ಹೆಚ್ಚು ಮಾರಾಟವಾಗುವ ಹಿಂದೆ ಕಾರಣವೂ ಇದೆ. ಮೊದಲನೆಯದಾಗಿ, ಈ ವಾಹನವನ್ನು ದೇಶದಲ್ಲೇ ಅತ್ಯಂತ ಸುರಕ್ಷಿತ ಎಸ್‌ಯುವಿ ಎಂದು ರೇಟ್ ಮಾಡಲಾಗಿದೆ. ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ ಈ ವಾಹನವು 5 ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ. ಈ SUV 5 ಸೀಟರ್ ಆಗಿದೆ. ಇದರಲ್ಲಿ ಕಂಪನಿಯು 1.2 ಲೀಟರ್ ಸಾಮರ್ಥ್ಯದ ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಬಳಸಿದೆ. ಡೀಸೆಲ್ ರೂಪಾಂತರದಲ್ಲಿ 1.5 ಲೀಟರ್ ಟರ್ಬೊ-ಡೀಸೆಲ್ ಎಂಜಿನ್ ನೀಡಲಾಗಿದೆ. ಈ ಎರಡೂ ಎಂಜಿನ್‌ಗಳು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ  ಕನೆಕ್ಟ್ ಆಗಿವೆ. 

ಇದನ್ನೂ ಓದಿ : ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ದುಬಾರಿಯಾಗಿರುವುದು ಚಿನ್ನ ! ಹೊಸ ದಾಖಲೆ ಬರೆದ ಹಳದಿ ಲೋಹ

ನೀಡುತ್ತದೆ ಉತ್ತಮ ಮೈಲೇಜ್ :
ಇನ್ನು ಈ ವಾಹನದ ಮೈಲೇಜ್ ಎಷ್ಟಿದೆ ಎಂದು ನೋಡುವುದಾದರೆ ಟಾಟಾ ನೆಕ್ಸಾನ್‌ನ ಪೆಟ್ರೋಲ್ ರೂಪಾಂತರವು 17 kmpl ವರೆಗೆ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿದೆ. ಡೀಸೆಲ್ ರೂಪಾಂತರವು 21 kmpl ಮೈಲೇಜ್ ನೀಡುತ್ತದೆ. ಈ SUV ಆಪಲ್ ಕಾರ್ ಪ್ಲೇ ಜೊತೆಗೆ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಸಹ ಹೊಂದಿದೆ. ಇದು  ಆಟೋಮ್ಯಾಟಿಕ್ ವಾಯ್ಸ್ ಕಮಾಂಡ್, ಆಟೋಮ್ಯಾಟಿಕ್ AC ಮತ್ತು  ರೈನ್ ಸೆನ್ಸಿಂಗ್  ವೈಪರ್‌ಗಳನ್ನು ನೀಡಲಾಗಿದೆ. ಇದು 8 ಸ್ಪೀಕರ್ ಸೌಂಡ್ ಸಿಸ್ಟಮ್, ಸನ್ ರೂಫ್ ಮತ್ತು ಏರ್ ಕ್ವಾಲಿಟಿ ಡಿಸ್ಪ್ಲೇಯೊಂದಿಗೆ ಏರ್ ಪ್ಯೂರಿಫೈಯರ್ ಗಳನ್ನೂ ಹೊಂದಿದೆ. 

ಸುರಕ್ಷತೆಯಲ್ಲೂ ಎರಡು ಮಾತಿಲ್ಲ : 
ಟಾಟಾ ನೆಕ್ಸಾನ್‌ನ ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಇದು ಅಗ್ರಸ್ಥಾನದಲ್ಲಿದೆ. ಇದು ರಿಯರ್ ಪಾರ್ಕಿಂಗ್ ಸೆನ್ಸಾರ್, ರಿಯರ್ ವ್ಯೂ ಕ್ಯಾಮೆರಾ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂನೊಂದಿಗೆ ಬರುತ್ತದೆ. ಇದರೊಂದಿಗೆ, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ ಮತ್ತು ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್ ಸಹ ನೀಡಲಾಗಿದೆ. ಈ ವಾಹನದಲ್ಲಿ ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಅನ್ನು ಕೂಡಾ ನೀಡಲಾಗಿದೆ. ಮಾರುಕಟ್ಟೆಯಲ್ಲಿ ಈ ಎಸ್‌ಯುವಿ ಬೆಲೆ 7.80 ಲಕ್ಷದಿಂದ 
ಆರಂಭವಾಗಿ 14.49 ಲಕ್ಷದವರೆಗೆ ಏರುತ್ತದೆ. 

ಇದನ್ನೂ ಓದಿ : ಆಧಾರ್ ಜೊತೆ ನಿಮ್ಮ ಮೊಬೈಲ್ ನಂಬರ್, ಇ-ಮೇಲ್ ಲಿಂಕ್ ಆಗಿದ್ಯಾ? ಈ ರೀತಿ ಚೆಕ್ ಮಾಡಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News