Redmi 10 Prime, Redmi TWS Earbuds ಇಂದು ಭಾರತದಲ್ಲಿ ಬಿಡುಗಡೆ, ಇಲ್ಲಿದೆ ಫುಲ್ ಡೀಟೇಲ್ಸ್

ರೆಡ್ಮಿ 10 ಪ್ರೈಮ್ ಜೊತೆಗೆ, ಕಂಪನಿಯು ಇಂದು ಭಾರತದಲ್ಲಿ ರೆಡ್ಮಿ ಟಿಡಬ್ಲ್ಯೂಎಸ್ ಇಯರ್ ಬಡ್ಸ್ ಅನ್ನು ಬಿಡುಗಡೆ ಮಾಡಿದೆ.

Written by - Yashaswini V | Last Updated : Sep 3, 2021, 02:00 PM IST
  • ರೆಡ್ಮಿ 10 ಪ್ರೈಮ್ ಮತ್ತು ರೆಡ್ಮಿ ಟಿಡಬ್ಲ್ಯೂಎಸ್ ಇಯರ್‌ಬಡ್‌ಗಳನ್ನು ಇಂದು ಭಾರತದಲ್ಲಿ ಬಿಡುಗಡೆ ಮಾಡಲಾಗುವುದು
  • ರೆಡ್ಮಿ 10 ಪ್ರೈಮ್ ಅನ್ನು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ ರೆಡ್ಮಿ 10 ರ ಮರುಬ್ರಾಂಡೆಡ್ ಆವೃತ್ತಿ ಎಂದು ಹೇಳಲಾಗುತ್ತಿದೆ
  • ಈ ಸ್ಮಾರ್ಟ್‌ಫೋನ್ ಅನ್ನು ಮೀಡಿಯಾ ಟೆಕ್ ಹೆಲಿಯೋ G88 SoC ಪ್ರೊಸೆಸರ್‌ನಲ್ಲಿ ನೀಡಲಾಗುವುದು ಎಂದು ಮಾಹಿತಿ ಲಭ್ಯವಾಗಿದೆ
Redmi 10 Prime, Redmi TWS Earbuds ಇಂದು ಭಾರತದಲ್ಲಿ ಬಿಡುಗಡೆ, ಇಲ್ಲಿದೆ ಫುಲ್ ಡೀಟೇಲ್ಸ್ title=
Redmi 10 Prime and Redmi TWS Earbuds

Redmi 10 Prime, Redmi TWS Earbuds: ಶಿಯೋಮಿ ಇಂದು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಬಹುನಿರೀಕ್ಷಿತ ಸ್ಮಾರ್ಟ್ಫೋನ್ ರೆಡ್ಮಿ 10 ಪ್ರೈಮ್ (Redmi 10 Prime) ಅನ್ನು ಅನಾವರಣಗೊಳಿಸಿದೆ. ಇದರೊಂದಿಗೆ, ಕಂಪನಿಯು ರೆಡ್ಮಿ ಟಿಡಬ್ಲ್ಯೂಎಸ್ ಇಯರ್‌ಬಡ್‌ಗಳನ್ನು (Redmi TWS Earbuds) ಕೂಡ ಇಂದು ಬಿಡುಗಡೆ ಮಾಡಿದೆ. 

ರೆಡ್ಮಿ 10 ಪ್ರೈಮ್ ಅನ್ನು ಇ-ಕಾಮರ್ಸ್ ಸೈಟ್ ಅಮೆಜಾನ್ (Amazon) ಇಂಡಿಯಾದಲ್ಲಿ ಪಟ್ಟಿ ಮಾಡಲಾಗಿದೆ ಮತ್ತು ಇದು ಅಮೆಜಾನ್‌ನಲ್ಲಿ ಮಾತ್ರ ಮಾರಾಟಕ್ಕೆ ಲಭ್ಯವಿರುತ್ತದೆ ಎಂದು ಇದು ಸ್ಪಷ್ಟಪಡಿಸುತ್ತದೆ. Redmi 10 Prime ನಲ್ಲಿ 6,000mAh ಬ್ಯಾಟರಿಯನ್ನು ನೀಡಲಾಗುವುದು ಎಂದು ಕಂಪನಿ ಈಗಾಗಲೇ ಘೋಷಿಸಿದೆ. ಇದರ ಹೊರತಾಗಿ, ಈ ಸ್ಮಾರ್ಟ್‌ಫೋನ್ ಅನ್ನು ಮೀಡಿಯಾ ಟೆಕ್ ಹೆಲಿಯೋ G88 SoC ಪ್ರೊಸೆಸರ್‌ನಲ್ಲಿ ನೀಡಲಾಗುವುದು ಎಂದು ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ- Mobile Number Portability: ನೀವೂ ಸಹ ನಿಮ್ಮ ಫೋನ್ ಸಂಖ್ಯೆಯನ್ನು ಪೋರ್ಟ್ ಮಾಡಲು ಬಯಸುವಿರಾ? ಇಲ್ಲಿದೆ ಸುಲಭ ಮಾರ್ಗ

ರೆಡ್ಮಿ 10 ಪ್ರೈಮ್: ಸಂಭಾವ್ಯ ಬೆಲೆ
ರೆಡ್ಮಿ 10 ಪ್ರೈಮ್ (Redmi 10 Prime) ಅನ್ನು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ ರೆಡ್ಮಿ 10 ರ ಮರುಬ್ರಾಂಡೆಡ್ ಆವೃತ್ತಿ ಎಂದು ಹೇಳಲಾಗುತ್ತಿದೆ. ಇದರ 4GB + 64GB ಶೇಖರಣಾ ಮಾದರಿಯ ಬೆಲೆ $ 179 ಅಂದರೆ ಸುಮಾರು 13,300 ರೂ. 6GB + 128GB ಮಾದರಿಯನ್ನು $ 219 ಕ್ಕೆ ಬಿಡುಗಡೆ ಮಾಡಲಾಯಿತು ಅಂದರೆ ಸುಮಾರು 16,600 ರೂ. ರೆಡ್ಮಿ 10 ಪ್ರೈಮ್ ಭಾರತದಲ್ಲಿ ಈ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಎಂದು ಊಹಿಸಲಾಗಿದೆ.

ಇದನ್ನೂ ಓದಿ-  ನಿಮ್ಮ ಬೈಕ್ ಕೂಡಾ ಕಡಿಮೆ ಮೈಲೇಜ್ ನೀಡುತ್ತಿದೆಯೇ ? ಹಾಗಿದ್ದರೆ ಈ ಟಿಪ್ಸ್ ಬಳಸಿ ನೋಡಿ

ರೆಡ್‌ಮಿ ಇಯರ್‌ಬಡ್ಸ್: ಸಂಭಾವ್ಯ ಬೆಲೆ 
ಇಯರ್‌ಬಡ್ಸ್ (Redmi Earbuds) ಬಗ್ಗೆ ಇದುವರೆಗೆ ಹಲವು ಮಾಹಿತಿಗಳನ್ನು ಬಹಿರಂಗಪಡಿಸಲಾಗಿದೆ, ಆದರೆ ಅದರ ಬೆಲೆಯ ಬಗ್ಗೆ ಇನ್ನೂ ಯಾವುದೇ ಬಹಿರಂಗಪಡಿಸಲಾಗಿಲ್ಲ. ಇದಕ್ಕಾಗಿ, ಬಳಕೆದಾರರು ಲಾಂಚ್ ಆಗುವವರೆಗೆ ಕಾಯಬೇಕಾಗುತ್ತದೆ.

ರೆಡ್ಮಿ 10 ಪ್ರೈಮ್: ಸಂಭಾವ್ಯ ವಿಶೇಷತೆಗಳು
ರೆಡ್ಮಿ 10 ಪ್ರೈಮ್ ಸ್ಮಾರ್ಟ್ ಫೋನ್ ಪವರ್ ಬ್ಯಾಕಪ್ ಗಾಗಿ 6,000mAh ಬ್ಯಾಟರಿಯನ್ನು ಹೊಂದಿರುತ್ತದೆ ಮತ್ತು ಇದನ್ನು MediaTek Helio G88 ಪ್ರೊಸೆಸರ್ ನಲ್ಲಿ ನೀಡಲಾಗುವುದು. ಪಂಚ್ ಹೋಲ್ ಡಿಸ್ ಪ್ಲೇ, ಅಡಾಪ್ಟಿವ್ ರಿಫ್ರೆಶ್ ರೇಟ್ ಮತ್ತು ಡ್ಯುಯಲ್ ಮೈಕ್ರೊಫೋನ್ ಗಳನ್ನು ಫೋನಿನಲ್ಲಿ ನೀಡಬಹುದು. ಫೋಟೋಗ್ರಫಿಗಾಗಿ, 50MP ಕ್ವಾಡ್ ರಿಯರ್ ಕ್ಯಾಮೆರಾವನ್ನು ಇದರಲ್ಲಿ ನೀಡಬಹುದು. ಆಂಡ್ರಾಯ್ಡ್ 11 ಓಎಸ್ ಆಧರಿಸಿ, ಈ ಫೋನಿಗೆ 6.5 ಇಂಚಿನ ಪೂರ್ಣ ಎಚ್ ಡಿ ಡಿಸ್ ಪ್ಲೇ ನೀಡಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News