1000 ರೂ.ವರೆಗೆ ಅಗ್ಗವಾಗಿವೆ ಈ Samsung ಫೋನ್‌ಗಳು

ಅಕ್ಟೋಬರ್ ತಿಂಗಳು ಆರಂಭವಾಯಿತು ಎಂದರೆ ಹಬ್ಬಗಳ ಋತು ಆರಂಭವಾಗಿದೇ ಎಂದೇ ಅರ್ಥ. ಈ ಹಬ್ಬದ ಋತುವಿನಲ್ಲಿ ಪ್ರಸಿದ್ಧ ಫೋನ್ ಕಂಪನಿಯ ಫೋನ್‌ಗಳು ಅಗ್ಗವಾಗಿವೆ.   

IANS | Updated: Oct 1, 2020 , 08:15 AM IST
1000 ರೂ.ವರೆಗೆ ಅಗ್ಗವಾಗಿವೆ ಈ Samsung ಫೋನ್‌ಗಳು
Image courtesy: Reuters

ನವದೆಹಲಿ : ಅಕ್ಟೋಬರ್ ತಿಂಗಳು ಆರಂಭವಾಯಿತು ಎಂದರೆ ಹಬ್ಬಗಳ ಋತು ಆರಂಭವಾಗಿದೇ ಎಂದೇ ಅರ್ಥ. ಈ ಹಬ್ಬದ ಋತುವಿನಲ್ಲಿ ಸ್ಯಾಮ್‌ಸಂಗ್ (Samsung) ಫೋನ್‌ಗಳು ಅಗ್ಗವಾಗಿವೆ. ಕಂಪನಿಯು ಬೆಲೆಗಳನ್ನು 1000 ರೂಪಾಯಿಗಳವರೆಗೆ ಕಡಿಮೆ ಮಾಡಿದೆ. ಕಂಪನಿಯ ಪ್ರಕಾರ ಇದು ಭಾರತದಲ್ಲಿ ಗ್ಯಾಲಕ್ಸಿ ಎಂ ಸರಣಿ (Galaxy M series)ಯಡಿಯಲ್ಲಿ ತನ್ನ ಅಗ್ಗದ ಸ್ಮಾರ್ಟ್‌ಫೋನ್‌ಗಳಾದ ಗ್ಯಾಲಕ್ಸಿ ಎಂ 01 ಮತ್ತು ಎಂ 11 ಬೆಲೆಯನ್ನು ಕಡಿಮೆ ಮಾಡಿದೆ.

ಗ್ಯಾಲಕ್ಸಿ ಎಂ 11 (Galaxy M11) ಅನ್ನು ಈಗ 10,499 ರೂ.ಗಳಿಗೆ (3 ಜಿಬಿ -32 ಜಿಬಿ ರೂಪಾಂತರ) ಖರೀದಿಸಬಹುದು. ಅಂತೆಯೇ 4 ಜಿಬಿ -64 ಜಿಬಿ ರೂಪಾಂತರದ ಬೆಲೆಯನ್ನು 11,999 ರೂ.ಗಳಿಗೆ ಇಳಿಸಲಾಗಿದೆ. ಈ ಎರಡು ರೂಪಾಂತರಗಳನ್ನು ಕ್ರಮವಾಗಿ 1000 ಮತ್ತು 500 ರೂಪಾಯಿಗಳು ಕಡಿಮೆ ಮಾಡಲಾಗಿದೆ.

ವಿಶೇಷ ಡಿಸ್ಲ್ಪೆ ಜೊತೆಗೆ ಲಾಂಚ್ ಆಗಿದೆ Samsung Galaxy S20 FE, ಇದರ ವೈಶಿಷ್ಟ್ಯಗಳಿವು

ಅಂತೆಯೇ ಗ್ಯಾಲಕ್ಸಿ ಎಂ 01 ರ 3 ಜಿಬಿ -32 ಜಿಬಿ ರೂಪಾಂತರವನ್ನು 7999 ರೂ.ಗಳಿಗೆ ಪಡೆಯಬಹುದು. ಇದರ ಬೆಲೆಯನ್ನು 400 ರೂಪಾಯಿ ಇಳಿಸಲಾಗಿದೆ. ಸ್ಯಾಮ್‌ಸಂಗ್ ಜೂನ್‌ನಲ್ಲಿ ಈ ಎರಡು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿತು ಮತ್ತು ಬಿಡುಗಡೆಯಾದ ನಂತರ ಅವುಗಳ ಬೆಲೆಗಳನ್ನು ಎರಡನೇ ಬಾರಿಗೆ ಕಡಿತಗೊಳಿಸಲಾಗಿದೆ.

ಸ್ಯಾಮ್‌ಸಂಗ್ ಮಾರುಕಟ್ಟೆಯಲ್ಲಿ ಮತ್ತೊಂದು ಸ್ಫೋಟವನ್ನು ಮಾಡಲಿದೆ. ಕಂಪನಿಯು ಈ ವರ್ಷ ಗ್ಯಾಲಕ್ಸಿ ಸರಣಿಯ ಮುಂದಿನ ಫೋನ್ ಅನ್ನು ಬಿಡುಗಡೆ ಮಾಡಲಿದೆ ಎಂಬ ವರದಿಗಳು ಬಂದಿವೆ. ಸುದ್ದಿ ಸಂಸ್ಥೆ ಐಎಎನ್‌ಎಸ್ ಪ್ರಕಾರ ಇದು ಅಕ್ಟೋಬರ್‌ನಲ್ಲಿ ಆಗಲಿದೆ.

ಭಾರತದಲ್ಲಿ Samsung Galaxy Tab S7 ಲಾಂಚ್, ಬೆಲೆ, ವೈಶಿಷ್ಟ್ಯಗಳ ಬಗ್ಗೆ ಇಲ್ಲಿದೆ ಮಾಹಿತಿ

ಸುದ್ದಿಯ ಪ್ರಕಾರ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ತನ್ನ ಗ್ಯಾಲಕ್ಸಿ ಎಫ್ ಸರಣಿಯನ್ನು ಮುಂದಿನ ತಿಂಗಳು ಭಾರತದಲ್ಲಿ ಬಿಡುಗಡೆ ಮಾಡಲಿದೆ. ದಕ್ಷಿಣ ಕೊರಿಯಾದ ಟೆಕ್ ದೈತ್ಯ ವಿಶ್ವದ ಎರಡನೇ ಅತಿದೊಡ್ಡ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ವಿಸ್ತರಿಸುವ ಗುರಿ ಹೊಂದಿದೆ ಎಂದು ಉದ್ಯಮ ತಜ್ಞರು ತಿಳಿಸಿದ್ದಾರೆ.

ಸ್ಯಾಮ್‌ಸಂಗ್‌ನ ಹೊಸ 'ಗ್ಯಾಲಕ್ಸಿ ಎಫ್' ಅನ್ನು ವಿಶೇಷವಾಗಿ ಯುವಕರನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗಿದ್ದು ಇದರ ಬೆಲೆ ಸುಮಾರು 20,000 ರೂ. ಫೋನ್‌ನಲ್ಲಿ ಕ್ಯಾಮೆರಾಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.