ನವದೆಹಲಿ: ಎಮರ್ಜಿಂಗ್ ಸ್ಮಾರ್ಟ್‌ಫೋನ್ ತಯಾರಕ ಕಂಪನಿಯಾಗಿರುವ ಟೆಕ್ನೋ(Tecno) ಇತ್ತೀಚೆಗೆ ಹೊಸ ಸ್ಮಾರ್ಟ್‌ಫೋನ್ CAMON18 ಸರಣಿಯನ್ನು ಬಿಡುಗಡೆ ಮಾಡಿದೆ. ಈ ಸರಣಿಯು CAMON18 Premier, CAMON18P ಮತ್ತು CAMON18 ಎಂಬ 3 ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿದೆ. ಈ ಫೋನಿನ ಕ್ಯಾಮೆರಾ ವೈಶಿಷ್ಟ್ಯಗಳು ನಿಮ್ಮನ್ನು ದಿಗ್ಭ್ರಮೆಗೊಳಿಸುತ್ತದೆ. MediaTek Helio G96 ಚಿಪ್ ನಲ್ಲಿ ಕೆಲಸ ಮಾಡುವ ಈ ಸ್ಮಾರ್ಟ್‌ಫೋನಿನಲ್ಲಿ ಬಳಕೆದಾರರು ಫೋಟೋಗ್ರಫಿ ಮತ್ತು ವಿಡಿಯೋಗ್ರಫಿಯ ಅದ್ಭುತ ವೈಶಿಷ್ಟ್ಯಗಳನ್ನು ಪಡೆಯುತ್ತಾರೆ. ಇದರ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ.
ಕ್ಯಾಮೆರಾದಲ್ಲಿ Anti-shaking ತಂತ್ರಜ್ಞಾನ ಲಭ್ಯ
CAMON18 ಪ್ರೀಮಿಯರ್‌ನಲ್ಲಿ ನೀವು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಪಡೆಯುತ್ತೀರಿ. ಇದು 64MP ಮುಖ್ಯ ಕ್ಯಾಮೆರಾ, ವೈಡ್ ಫ್ರೇಮ್ ಜೊತೆಗೆ 12MP ಅಲ್ಟ್ರಾ-ಸ್ಟೇಡಿ ಗಿಂಬಲ್(Ultra-Steady Gimbal) ಕ್ಯಾಮೆರಾ ಮತ್ತು 8MP ಪೆರಿಸ್ಕೋಪ್ ಲೆನ್ಸ್ ಹೊಂದಿದೆ.
ಇದನ್ನೂ ಓದಿ: Airtel Offer: ಸ್ಮಾರ್ಟ್ ಫೋನ್ ಖರೀದಿಸಿದರೆ ಸಿಗಲಿದೆ 6 ಸಾವಿರ ರೂಪಾಯಿಗಳ ಕ್ಯಾಶ್ ಬ್ಯಾಕ್ , ಹೇಗೆ ತಿಳಿಯಿರಿ
ಇದಲ್ಲದೆ ಈ ಸ್ಮಾರ್ಟ್‌ಫೋನಿನ(Tecno Smartphone) ಅತ್ಯಂತ ಗಮನಾರ್ಹವಾದ ಕ್ಯಾಮೆರಾ ವೈಶಿಷ್ಟ್ಯವೆಂದರೆ ಅದ್ಭುತ Anti-Shaking ತಂತ್ರಜ್ಞಾನವಾಗಿದೆ. ಇದು ಇತರ ಸ್ಮಾರ್ಟ್‌ಫೋನ್‌ಗಳಿಗೆ ಹೋಲಿಸಿದರೆ ಶೇ.300ರಷ್ಟು ಪರಿಣಾಮಕಾರಿತ್ವವನ್ನು ಹೊಂದಿದೆ. ಈ ತಂತ್ರಜ್ಞಾನ ಫೋನಿನ ವೈಡ್-ಫ್ರೇಮ್ ಅಲ್ಟ್ರಾ-ಸ್ಟೇಡಿ ಗಿಂಬಲ್ ಕ್ಯಾಮೆರಾದೊಂದಿಗೆ ಸಂಯೋಜಿಸಿದಾಗ, ನಿಮಗೆ 109 ಡಿಗ್ರಿ ವೈಡ್-ಆಂಗಲ್ ಶೂಟಿಂಗ್ ಸೌಲಭ್ಯವನ್ನು ನೀಡುತ್ತದೆ. ಈ Technique ನಿಂದ ನೀವು ಯಾವುದೇ ಸ್ಥಳದಲ್ಲಿ, ಯಾವುದೇ ಪರಿಸ್ಥಿತಿಯಲ್ಲಿ ಉತ್ತಮ ಸ್ಪಷ್ಟತೆಯೊಂದಿಗೆ ವಿಡಿಯೋಗಳನ್ನು ಮಾಡಬಹುದು.
60X ಅಲ್ಟ್ರಾ-ಕ್ಲಿಯರ್ ಹೈಪರ್ ಜೂಮ್
CAMON18 ಪ್ರೀಮಿಯರ್ 5X ಪೆರಿಸ್ಕೋಪ್ ಲೆನ್ಸ್ ಮತ್ತು ಗೆಲಿಲಿಯೋಸ್ ಅಲ್ಗಾರಿದಮ್ ಎಂಜಿನ್ ಅನ್ನು ಬಳಸುತ್ತದೆ. ಇದು ಚಿತ್ರಗಳ ಸ್ಪಷ್ಟತೆ ಮತ್ತು ರೆಸಲ್ಯೂಶನ್ ಅನ್ನು ಸುಧಾರಿಸುತ್ತದೆ. 5X ನ ಆಪ್ಟಿಕಲ್ ಜೂಮ್, 12X ವರೆಗಿನ AI ಅಲ್ಗಾರಿದಮ್‌ನಲ್ಲಿ ಚಾಲನೆಯಲ್ಲಿರುವ ಡಿಜಿಟಲ್ ಜೂಮ್‌ನೊಂದಿಗೆ ಸಂಯೋಜಿಸಿದಾಗ, ಬಳಕೆದಾರರಿಗೆ 60X ನ ಹೈಬ್ರಿಡ್ ಜೂಮ್ ಅನ್ನು ನೀಡುತ್ತದೆ. ಇದನ್ನು ಬಳಸಿ ಚಂದ್ರನವರೆಗೂ ತುಂಬಾ ಸ್ಪಷ್ಟವಾಗಿ ಛಾಯಾಚಿತ್ರವನ್ನು ತೆಗೆದುಕೊಳ್ಳಬಹುದು.
ಇದನ್ನೂ ಓದಿ: RBI New Rule: ಇಂಟರ್ನೆಟ್ ಇಲ್ಲದಿದ್ದರೂ ನೀವು ಡಿಜಿಟಲ್ ಪಾವತಿ ಮಾಡಲು ಸಾಧ್ಯ! ಹೇಗೆಂದು ತಿಳಿಯಿರಿ
ಸೆಲ್ಫಿ ಕ್ಯಾಮೆರಾ ಕೂಡ ಅದ್ಭುತವಾಗಿದೆ
ಈ ಸ್ಮಾರ್ಟ್‌ಫೋನ್‌ನ 32MP AI ಆಧಾರಿತ ಸೆಲ್ಫಿ ಕ್ಯಾಮೆರಾ ಅದ್ಭುತ ಸ್ಪಷ್ಟತೆ, Intelligent Gender-Based Identification, Beauty Features ಮತ್ತು ಭಾವಚಿತ್ರ ಬೆಳಕಿನ ಪರಿಣಾಮದ ಮೋಡ್‌ನಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಈ ಫೋಟೋಗಳನ್ನು ಎಡಿಟ್ ಮಾಡಲು ನಿಮಗೆ ಹಲವು Featuresಗಳ ಸೌಲಭ್ಯವನ್ನು ಸಹ ಇದರಲ್ಲಿ ನೀಡಲಾಗುವುದು.
ಈ ಟೆಕ್ನೊ ಸ್ಮಾರ್ಟ್‌ಫೋನ್‌ನ ಕ್ಯಾಮೆರಾ ವೈಶಿಷ್ಟ್ಯಗಳು ಅದ್ಭುತವಾಗಿವೆ. ಇದು 256GB ಇಂಟರ್ನಲ್ ಸ್ಟೋರೇಜ್, 4,750mAh ಬ್ಯಾಟರಿ ಮತ್ತು 33W ಫ್ಲಾಶ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. 6.7-ಇಂಚಿನ AMOLED FULL HD ಡಿಸ್ಪ್ಲೇ ನಿಮ್ಮ ಕಣ್ಣುಗಳನ್ನು ರಕ್ಷಿಸಲು TUV Rheinland ಬ್ಲೂ ಲೈಟ್ ಪ್ರಮಾಣೀಕರಣದೊಂದಿಗೆ ಬರುತ್ತದೆ. ಈ ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಯಾವಾಗ ಮತ್ತು ಎಷ್ಟು ಬೆಲೆಯಲ್ಲಿ ಬಿಡುಗಡೆಯಾಗಲಿದೆ ಎಂಬುದರ ಮಾಹಿತಿಯು ಸದ್ಯಕ್ಕೆ ಬಹಿರಂಗಪಡಿಸಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ