Ola Electric Scooter ಖರೀದಿಸಿದವರಿಗೆ ಕಂಪನಿ ನೀಡಿದೆ ಮಹತ್ವದ ಸುದ್ದಿ! ಗ್ರಾಹಕರಿಗೆ ತಿಳಿದಿರಲೇ ಬೇಕು

ಅನೇಕ ಗ್ರಾಹಕರು ಸ್ಕೂಟರ್‌ನ ಮುಂಭಾಗದ ಫೋರ್ಕ್ ಆರ್ಮ್‌ನ ಸಮಸ್ಯೆಗಳ ಬಗ್ಗೆ ದೂರು ನೀಡಿರುವ ಕಾರಣ ಓಲಾ ಎಲೆಕ್ಟ್ರಿಕ್ S1 ಅನ್ನು ರಿಕಾಲ್ ಮಾಡಿದೆ. ಮಾತ್ರವಲ್ಲ ಗ್ರಾಹಕರಿಗೆ ಈ ಆಯ್ಕೆಯನ್ನು ಕೂಡಾ ನೀಡಿದೆ. 

Written by - Ranjitha R K | Last Updated : Mar 15, 2023, 02:09 PM IST
  • ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳು ಈ ಹಿಂದೆ ಹಲವು ಬಾರಿ ವಿವಾದಕ್ಕೆ ಒಳಗಾಗಿದ್ದವು.
  • ಗ್ರಾಹಕರ ದೂರುಗಳನ್ನು ಗಂಭೀರವಾಗಿ ಪರಿಗಣಿಸಿರುವ ಕಂಪನಿ
  • ಫ್ರಂಟ್ ಫೋರ್ಕ್‌ಗಳಿಗೆ ಅಪ್‌ಗ್ರೇಡ್ ಮಾಡುವ ಆಯ್ಕೆ
Ola Electric Scooter ಖರೀದಿಸಿದವರಿಗೆ ಕಂಪನಿ ನೀಡಿದೆ ಮಹತ್ವದ ಸುದ್ದಿ! ಗ್ರಾಹಕರಿಗೆ ತಿಳಿದಿರಲೇ ಬೇಕು  title=

ಬೆಂಗಳೂರು : ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳು ಈ ಹಿಂದೆ ಹಲವು ಬಾರಿ ವಿವಾದಕ್ಕೆ ಒಳಗಾಗಿದ್ದವು. ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗೆ ಬೆಂಕಿ ಹೊತ್ತಿಕೊಂಡ  ಪ್ರಕರಣಗಳು ಬೆಳಕಿಗೆ ಬರುತ್ತಲೇ ಇದೆ. ಕಳೆದ ಕೆಲವು ಸಮಯಗಳಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮಾಲೀಕರು ಕೂಡಾ ಬೇರೆ ಬೇರೆ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಂಪನಿಯು ಕೂಡಾ ಗ್ರಾಹಕರ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮಗಳನ್ನು ಕೈಗೊಂಡಿದೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಓಲಾ ಎಲೆಕ್ಟ್ರಿಕ್ ತನ್ನ ಓಲಾ ಎಸ್1 ಅನ್ನು  ರಿಕಾಲ್ ಮಾಡಿದೆ. ಓಲಾ ಎಲೆಕ್ಟ್ರಿಕ್ ತನ್ನ ಗ್ರಾಹಕರಿಗೆ ಓಲಾ ಎಸ್1 ಸ್ಕೂಟರ್‌ನ ಮುಂಭಾಗದ ಫೋರ್ಕ್ ಆರ್ಮ್ ಅನ್ನು ಉಚಿತವಾಗಿ ಬದಲಾಯಿಸುವುದಾಗಿ ಹೇಳಿದೆ. ಅನೇಕ ಗ್ರಾಹಕರು ಸ್ಕೂಟರ್‌ನ ಮುಂಭಾಗದ ಫೋರ್ಕ್ ಆರ್ಮ್‌ನ ಸಮಸ್ಯೆಗಳ ಬಗ್ಗೆ ದೂರು ನೀಡಿರುವ ಕಾರಣ ಓಲಾ ಎಲೆಕ್ಟ್ರಿಕ್ S1 ಅನ್ನು  ರಿಕಾಲ್ ಮಾಡಿದೆ. 

ಮುಂಭಾಗದ ಫೋರ್ಕ್ ಆರ್ಮ್‌ನ ಸುರಕ್ಷತೆಯ ಬಗ್ಗೆ ಯಾವುದೇ ರೀತಿಯ ಕಳವಳವನ್ನು  ಹೊಂದುವ ಅಗತ್ಯವಿಲ್ಲ ಎಂದು ಓಲಾ ಎಲೆಕ್ಟ್ರಿಕ್ S1 ಹೇಳಿದೆ. ತಮ್ಮ ಸ್ಕೂಟರ್‌ಗಳ ಫ್ರಂಟ್ ಫೋರ್ಕ್‌ಗಳಿಗೆ ಅಪ್‌ಗ್ರೇಡ್ ಮಾಡುವ ಆಯ್ಕೆಯನ್ನು ನೀಡುತ್ತಿದೆ. ಇದಕ್ಕಾಗಿ ಅಪಾಯಿಂಟ್ ಮೆಂಟ್ ವಿಂಡೋ ಮಾರ್ಚ್ 22 ರಿಂದ ತೆರೆಯುಲಿದೆ.  ಫ್ರಂಟ್ ಫೋರ್ಕ್‌ಗಳನ್ನು ಅಪ್‌ಗ್ರೇಡ್ ಮಾಡಲು ಅಪಾಯಿಂಟ್‌ಮೆಂಟ್ ಬುಕಿಂಗ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಗ್ರಾಹಕರನ್ನು ಸಂಪರ್ಕಿಸುವುದಾಗಿ ಕಂಪನಿ ಹೇಳಿದೆ.

ಇದನ್ನೂ ಓದಿ : ಈ ಫ್ರಿಜ್ ನಲ್ಲಿಟ್ಟ ಆಹಾರ ವಾರಗಳವರೆಗೆ ಕೆಡುವುದಿಲ್ಲವಂತೆ ! ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ ಈ ಡಬಲ್ ಡೋರ್ ಫ್ರಿಜ್

ಓಲಾ ಎಕ್ಸ್ ಪಿರಿಯೆನ್ಸ್  ಸೆಂಟರ್ ಅಥವಾ ಅವರ ಸರ್ವಿಸ್ ಸೆಂಟರ್ ಗೆ ಭೇಟಿ ನೀಡುವ ಮೂಲಕ ಅಪಾಯಿಂಟ್‌ಮೆಂಟ್ ಅನ್ನು ಬುಕ್ ಮಾಡಬಹುದಾಗಿದೆ. “ಈ ಅಪ್‌ಗ್ರೇಡ್ ಪ್ರಕ್ರಿಯೆ ಉಚಿತವಾಗಿರಲಿದೆ. ಅಲ್ಲದೆ, ಅಪಾಯಿಂಟ್‌ಮೆಂಟ್  ಬುಕ್ ಮಾಡುವ ವಿವರವಾದ ಪ್ರಕ್ರಿಯೆಯೊಂದಿಗೆ ಶೀಘ್ರದಲ್ಲೇ ಗ್ರಾಹಕರನ್ನು  ಸಂಪರ್ಕಿಸುವುದಾಗಿ ಹೇಳಿದೆ. ಸ್ಕೂಟರ್ ಅನ್ನು ಹೆಚ್ಚು ಬಾಳಿಕೆ ಬರುವ ಮತ್ತು ಹೆಚ್ಚು ದೃಢವಾಗಿಸುವ ನಿಟ್ಟಿನಲ್ಲಿ ಕಂಪನಿ ಈ ಪ್ರಕ್ರಿಯೆಯನ್ನು ನಡೆಸುತ್ತಿದೆ. 

ಇದನ್ನೂ ಓದಿ :  ಎರಡು ಹೊಸ ಧಮಾಕ ಪ್ರಿಪೇಯ್ಡ್ ಯೋಜನೆಗಳನ್ನು ಪ್ರಕಟಿಸಿದ ವೋಡಾಫೋನ್ ಐಡಿಯಾ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News