Uber ಚಾಲಕರು ಇನ್ನು ಕ್ಯಾನ್ಸಲ್ ಮಾಡುವಂತಿಲ್ಲ ಕ್ಯಾಬ್ , appನಲ್ಲಿ ಬಂದಿದೆ ಹೊಸ ಅಪ್ಡೇಟ್

Uber ಹೊಸ ಅಪ್‌ಡೇಟ್ ಅನ್ನು ಘೋಷಿಸಿದೆ. ಅದರ ಅಡಿಯಲ್ಲಿ ಕ್ಯಾಬ್ ಅನ್ನು ಬುಕ್ ಮಾಡಿದ ವ್ಯಕ್ತಿಯು ಎಲ್ಲಿಗೆ ಹೋಗಬೇಕು ಎನ್ನುವುದನ್ನು Uber ಚಾಲಕರು  ಮೊದಲೇ ನೋಡಲು ಸಾಧ್ಯವಾಗುತ್ತದೆ.

Written by - Ranjitha R K | Last Updated : Jul 15, 2022, 02:49 PM IST
  • ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ಗಳು ನಮ್ಮ ಹಲವು ಕಾರ್ಯಗಳನ್ನು ಸುಲಭಗೊಳಿಸಿವೆ.
  • ಉಬರ್ ಕ್ಯಾಬ್ ಗಳನ್ನು ಬುಕ್ ಮಾಡಿದ ನಂತರ ಒಂದು ಸಮಸ್ಯೆ ಎದುರಾಗುತ್ತಿದೆ.
  • ಈಗ ಗ್ರಾಹಕರ ಈ ಸಮಸ್ಯೆಗೆ ಪರಿಹಾರವಾಗಬಲ್ಲ ಹೊಸ ಅಪ್ಡೇಟ್ ತಂದಿದೆ.
Uber ಚಾಲಕರು ಇನ್ನು ಕ್ಯಾನ್ಸಲ್ ಮಾಡುವಂತಿಲ್ಲ ಕ್ಯಾಬ್ , appನಲ್ಲಿ ಬಂದಿದೆ ಹೊಸ ಅಪ್ಡೇಟ್  title=
Uber New update (file photo)

ಬೆಂಗಳೂರು : ಇಂದಿನ ಸಮಯದಲ್ಲಿ ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ಗಳು ನಮ್ಮ ಹಲವು ಕಾರ್ಯಗಳನ್ನು ಸುಲಭಗೊಳಿಸಿವೆ. ಸ್ವಂತ ವಾಹನ ಇಲ್ಲದಿದ್ದರೆ, ನಾವು ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಬೇಕಾಗುತ್ತದೆ. ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣ ಬೇಡ ಎಂದಾದರೆ Ola ಮತ್ತು Uber ನಂತಹ ಪ್ಲಾಟ್‌ಫಾರ್ಮ್‌ಗಳನ್ನು ಅವಲಂಬಿಸುತ್ತೇವೆ. ಆದರೆ ಇತ್ತೀಚಿನ ದಿನಗಳಲಿ ಉಬರ್ ಕ್ಯಾಬ್ ಗಳನ್ನು ಬುಕ್ ಮಾಡಿದ ನಂತರ ಒಂದು ಸಮಸ್ಯೆ ಎದುರಾಗುತ್ತಿದೆ. ಅದೇನೆಂದರೆ  ಚಾಲಕರು ಕ್ಯಾಬ್ ಅನ್ನು ಕ್ಯಾನ್ಸಲ್ ಮಾಡಿ ಬಿಡುತ್ತಾರೆ. Uber ಈಗ ಗ್ರಾಹಕರ ಈ  ಸಮಸ್ಯೆಗೆ ಪರಿಹಾರವಾಗಬಲ್ಲ ಹೊಸ ಅಪ್ಡೇಟ್ ತಂದಿದೆ. 

ಈಗ ಕ್ಯಾಬ್ ಅನ್ನು  ಕ್ಯಾನ್ಸಲ್ ಮಾಡಲಾಗುವುದಿಲ್ಲ :
Uber ಹೊಸ ಅಪ್‌ಡೇಟ್ ಅನ್ನು ಘೋಷಿಸಿದೆ. ಅದರ ಅಡಿಯಲ್ಲಿ ಕ್ಯಾಬ್ ಅನ್ನು ಬುಕ್ ಮಾಡಿದ ವ್ಯಕ್ತಿಯು ಎಲ್ಲಿಗೆ ಹೋಗಬೇಕು ಎನ್ನುವುದನ್ನು Uber ಚಾಲಕರು  ಮೊದಲೇ ನೋಡಲು ಸಾಧ್ಯವಾಗುತ್ತದೆ.  ಹೀಗಾಗಿ ಈ ಹೊಸ ಅಪ್‌ಡೇಟ್‌ನ ನಂತರ, ಡ್ರೈವರ್‌ಗಳು ಆ ಜಾಗಕ್ಕೆ ಹಿಗಳು ಇಷ್ಟಪಟ್ಟರೆ ಮಾತ್ರ ಸವಾರಿಯನ್ನು  ಸ್ವೀಕರಿಸಬಹುದು. ಈ ರೀತಿಯಾಗಿ, ನಿಮ್ಮ ಗಮ್ಯಸ್ಥಾನಕ್ಕೆ ಹೋಗಲು ಸಿದ್ಧರಾಗಿರುವ ಚಾಲಕ ಮಾತ್ರ  ನಿಮ್ಮ ರೈಡ್ ಅನ್ನು ಅಕ್ಸೆಪ್ಟ್ ಮಾಡುತ್ತಾರೆ.

ಇದನ್ನೂ ಓದಿ :  iPhone 12 ಮೇಲೆ 27 ಸಾವಿರ ರೂಪಾಯಿ ರಿಯಾಯಿತಿ..!

ಈಗ ಸ್ವಲ್ಪ ಸಮಯದಿಂದ, ಉಬರ್ ತನ್ನ ಅಪ್ಲಿಕೇಶನ್‌ನಲ್ಲಿ ಇಂತಹ ಹಲವು ಅಪ್ಡೇಟ್ ಅನ್ನು ಬಿಡುಗಡೆ ಮಾಡಿದೆ. ಪೆಟ್ರೋಲ್ , ಡಿಸೇಲ್ ಬೆಲೆ ಏರಿಕೆಯ ನಂತರ ಚಾಲಕರ ಸಂಬಳವನ್ನು 15% ಹೆಚ್ಚಿಸಲಾಗಿದೆ. ರೈಡ್ ಅನ್ನು ಸ್ವೀಕರಿಸಿದ ನಂತರ, ಅವರು ಪಾವತಿಯನ್ನು ನಗದು ರೂಪದಲ್ಲಿ ತೆಗೆದುಕೊಳ್ಳಬೇಕೋ ಅಥವಾ ಆನ್‌ಲೈನ್‌ನಲ್ಲಿ ತೆಗೆದುಕೊಳ್ಳಬೇಕೋ ಎನ್ನುವುದು ತಿಳಿಯುತ್ತದೆ. 

ಇದನ್ನೂ ಓದಿ : ಸ್ಟೇಟಸ್ ಅಪ್ಡೇಟ್ ಕುರಿತಾದ ಹೊಸ ವೈಶಿಷ್ಟ್ಯ ಪರಿಚಯಿಸುತ್ತಿರುವ WhatsApp

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News