ಸ್ಮಾರ್ಟ್‌ಫೋನ್, ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪೇಮೆಂಟ್ ಮಾಡಬಹುದು! ಹೇಗ್ ಗೊತ್ತಾ!

UPI Payment Without Internet: ಡಿಜಿಟಲ್ ಯುಗದಲ್ಲಿ ಭಾರತದಲ್ಲಿನ ಸ್ಮಾರ್ಟ್‌ಫೋನ್ ಬಳಕೆದಾರರು ಆನ್ಲೈನ್ ಪಾವತಿಗಳಿಗಾಗಿ ಹೆಚ್ಚಾಗಿ ಯುಪಿಐ  ಅಪ್ಲಿಕೇಶನ್‌ಗಳನ್ನು ಬಳಸುತ್ತಾರೆ. ಆದರೆ, ಇದರಲ್ಲಿ ಪೇಮೆಂಟ್ ಮಾಡುವಾಗ ಇಂಟರ್ನೆಟ್ ಅವಶ್ಯಕತೆ ಇದೆ. ನಮ್ಮ ದೇಶದಲ್ಲಿ ಇಂದಿಗೂ ಕೂಡ ಸ್ಮಾರ್ಟ್‌ಫೋನ್ ಬಳಸದ ಜನರಿದ್ದಾರೆ. ಅವರು ಸಾಮಾನ್ಯವಾಗಿ ನಗದು ಮೂಲಕವೇ ಪಾವತಿಸುತ್ತಾರೆ. 

Written by - Yashaswini V | Last Updated : May 23, 2024, 07:12 AM IST
  • ಯುಪಿಐ ಪಾವತಿಯಲ್ಲಿ ಭಾರತವು ವಿಶ್ವದಲ್ಲಿ ಮೊದಲ ಸ್ಥಾನದಲ್ಲಿದೆ
  • ಭಾರತದಲ್ಲಿ ರಚಿಸಲಾದ ಆನ್‌ಲೈನ್ ಪಾವತಿ ಪೋರ್ಟಲ್ ಅನ್ನು ವಿಶ್ವದ ಇತರ ದೇಶಗಳು ಅಳವಡಿಸಿಕೊಂಡಿವೆ.
ಸ್ಮಾರ್ಟ್‌ಫೋನ್, ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪೇಮೆಂಟ್ ಮಾಡಬಹುದು! ಹೇಗ್ ಗೊತ್ತಾ!  title=

UPI Payment Tips: ಪ್ರಸ್ತುತ ಬಹುತೇಕ ಜನರ ಕೈಯಲ್ಲಿ ಸ್ಮಾರ್ಟ್‌ಫೋನ್ ಇದ್ದೇ ಇರುತ್ತದೆ. ಅವರು ಪಾವತಿಗಳನ್ನು ಮಾಡಲು ಯುಪಿಐ ಅಪ್ಲಿಕೇಶನ್‌ಗಳನ್ನು ಬಳಸುತ್ತಾರೆ. ಆದಾಗ್ಯೂ, ಇಂದಿಗೂ ಕೂಡ ಸ್ಮಾರ್ಟ್‌ಫೋನ್ ಬಳಸದ ಹಲವು ಜನರಿದ್ದಾರೆ. ಅವರು ನಗದು ಅಥವಾ ಕಾರ್ಡ್ ಮೂಲಕ ಪಾವತಿಗಳನ್ನು ಮಾಡುತ್ತಾರೆ. ಆದರೆ, ಸ್ಮಾರ್ಟ್‌ಫೋನ್ ಇಲ್ಲದಿದ್ದರೂ, ಆ್ಯಪ್‌ಗಳು/ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ ಮಾಡಬಹುದು ಎಂದು ತಿಳಿದಿದೆಯೇ? 

ವಾಸ್ತವವಾಗಿ, NPCI ಸ್ಮಾರ್ಟ್‌ಫೋನ್ (Smartphone) ಮತ್ತು ಇಂಟರ್ನೆಟ್ ಸೌಲಭ್ಯವಿಲ್ಲದಿದ್ದರೂ ಆನ್‌ಲೈನ್ ಪಾವತಿಗಳನ್ನು ಮಾಡಲು ಅನುಕೂಲವಾಗುವಂತೆ ಅನುವು ಮಾಡಿಕೊಟ್ಟಿದೆ. ಇದರ ಸಹಾಯದಿಂದ ನೀವು ಸ್ಮಾರ್ಟ್‌ಫೋನ್ ಹೊಂದಿಲ್ಲದಿದ್ದರೆ ಅಥವಾ ನಿಮ್ಮ ಫೋನ್‌ನಲ್ಲಿ ಇಂಟರ್ನೆಟ್ ಇಲ್ಲದಿದ್ದರೂ ಆನ್‌ಲೈನ್ ಪಾವತಿ ಪೂರ್ಣಗೊಳಿಸಬಹುದು.

ಇದನ್ನೂ ಓದಿ- Jio Prepaid Plans: ಜಿಯೋದ ಈ ಯೋಜನೆಗಳಲ್ಲಿ Netflix, Amazon Prime, Disney+ Hotstar ಫುಲ್ ಫ್ರೀ

ಏನಿದು ಯುಪಿಐ? 
UPI ಎಂದರೆ ಏಕೀಕೃತ ಪಾವತಿಗಳ ಇಂಟರ್ಫೇಸ್. ಇದು ಡಿಜಿಟಲ್ ಮತ್ತು ನೈಜ-ಸಮಯದ ಪಾವತಿ ವ್ಯವಸ್ಥೆಯಾಗಿದ್ದು, ಇದನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಅಭಿವೃದ್ಧಿಪಡಿಸಿದೆ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿಂದ ನಿಯಂತ್ರಿಸಲ್ಪಡುತ್ತದೆ. 

ಸ್ಮಾರ್ಟ್‌ಫೋನ್, ಇಂಟರ್ನೆಟ್ ಇಲ್ಲದೆ ಯುಪಿಐ ಪಾವತಿ ಮಾಡುವುದೇಗೆ? 
ಸ್ಮಾರ್ಟ್‌ಫೋನ್, ಇಂಟರ್ನೆಟ್  (Internet) ಇಲ್ಲದ ಸಂದರ್ಭದಲ್ಲಿ UPI123Pay ಬಳಸಿಕೊಂಡು ನೀವು ಯುಪಿಐ ಪಾವತಿಯನ್ನು ಪೂರ್ಣಗೊಳಿಸಬಹುದು. ಆದರೆ, ಇಂಟರ್ನೆಟ್ ಇಲ್ಲದೆ ಯುಪಿಐ ಪಾವತಿ ಪೂರ್ಣಗೊಳಿಸಲು ನಿಮ್ಮ ಫೋನ್‌ನಲ್ಲಿ USSD ಸೇವೆ ಸಕ್ರಿಯವಾಗಿರಬೇಕು, ಜೊತೆಗೆ ನಿಮ್ಮ ಖಾತೆಯಲ್ಲಿ ಹಣವಿರಬೇಕು ಎಂಬುದನ್ನು ನೆನಪಿನಲ್ಲಿಡಿ. 

ಇದನ್ನೂ ಓದಿ-  ವಾಟ್ಸಾಪ್‌ನಲ್ಲಿ ಸದ್ಯದಲ್ಲೇ ಬರಲಿದೆ ಆಡಿಯೋ ಕಾಲ್ ಫೀಚರ್: ಏನಿದರ ವಿಶೇಷತೆ!

ಇಂಟರ್ನೆಟ್ ಇಲ್ಲದೆ ಯುಪಿಐ ಪಾವತಿ ಮಿತಿ: 
ಇಂಟರ್ನೆಟ್ ಇಲ್ಲದೆಯೇ ಯುಪಿಐ ಪಾವತಿ ಮಾಡಲು ಪ್ರತಿ ವಹಿವಾಟಿನ ಮಿತಿ  ₹ 2000 ಮತ್ತು ದಿನಕ್ಕೆ ₹ 10000 ಆಗಿರುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News