WhatsApp Privacy Feature: WhatsAppನಿಂದ ಜಬರ್ದಸ್ತ್ ಪ್ರೈವೆಸಿ ವೈಶಿಷ್ಟ್ಯ, ಇನ್ಮುಂದೆ ಯಾರೂ ಈ ಕೆಟ್ಟ ಕೆಲಸಕ್ಕಿಳಿಯುವಂತಿಲ್ಲ

WhatsApp Privacy Feature - WhatsApp ದೀರ್ಘ ಕಾಲದಿಂದಲೂ ಅತಿ ಹೆಚ್ಚು ಬಳಸಲ್ಪಡುವ ಸಂದೇಶ ರವಾನೆ ವೇದಿಕೆಯಾಗಿದೆ. ಸಂದೇಶಗಳು, ಕರೆಗಳು, ಚಿತ್ರಗಳು ಇತ್ಯಾದಿಗಳ ಮೂಲಕ ತಮ್ಮ ಪ್ರೀತಿಪಾತ್ರರೊಂದಿಗೆ ಸಂಪರ್ಕದಲ್ಲಿರಲು ಬಹುತೇಕ ಎಲ್ಲರೂ WhatsApp ಅನ್ನು ಬಳಸುತ್ತಾರೆ. ಅಪ್ಲಿಕೇಶನ್ ತನ್ನ ಅಂತಿಮ-ಬಳಕೆದಾರರಿಗೆ ಸಾಕಷ್ಟು ಸೌಲಭ್ಯಗಳನ್ನು ಒದಗಿಸುತ್ತದೆ.

Written by - Nitin Tabib | Last Updated : Dec 12, 2021, 08:03 PM IST
  • ನಿಮ್ಮ ಟೈಮ್ ಲಾಗ್ ವರೆಗೆ ಥರ್ಡ್ ಪಾರ್ಟಿ ಆಪ್ ಗಳು ತಲುಪುವುದಕ್ಕೆ ವಾಟ್ಸ್ ಆಪ್ ಕಡಿವಾಣ
  • ಇದಕ್ಕಾಗಿ ಹೊಸ ಗೌಪ್ಯತಾ ನೀತಿ ವೈಶಿಷ್ಟ್ಯ ಪರಿಚಯಿಸಿದ ವಾಟ್ಸ್ ಆಪ್.
  • ಏನಿದು ಹೊಸ ವೈಶಿಷ್ಟ್ಯ ಮತ್ತು ಅದು ಹೇಗೆ ಕಾರ್ಯನಿರ್ವಹಿಸುತ್ತದೆ ತಿಳಿಯೋಣ
WhatsApp Privacy Feature: WhatsAppನಿಂದ ಜಬರ್ದಸ್ತ್ ಪ್ರೈವೆಸಿ ವೈಶಿಷ್ಟ್ಯ, ಇನ್ಮುಂದೆ ಯಾರೂ ಈ ಕೆಟ್ಟ ಕೆಲಸಕ್ಕಿಳಿಯುವಂತಿಲ್ಲ title=
WhatsApp Privacy Feature (File Photo)

WhatsApp Privacy Feature - WhatsApp ದೀರ್ಘ ಕಾಲದಿಂದಲೂ ಅತಿ ಹೆಚ್ಚು ಬಳಸಲ್ಪಡುವ ಸಂದೇಶ ರವಾನೆ ವೇದಿಕೆಯಾಗಿದೆ. ಸಂದೇಶಗಳು, ಕರೆಗಳು, ಚಿತ್ರಗಳು ಇತ್ಯಾದಿಗಳ ಮೂಲಕ ತಮ್ಮ ಪ್ರೀತಿಪಾತ್ರರೊಂದಿಗೆ ಸಂಪರ್ಕದಲ್ಲಿರಲು ಬಹುತೇಕ ಎಲ್ಲರೂ WhatsApp ಅನ್ನು ಬಳಸುತ್ತಾರೆ. ಅಪ್ಲಿಕೇಶನ್ ತನ್ನ ಅಂತಿಮ-ಬಳಕೆದಾರರಿಗೆ ಸಾಕಷ್ಟು ಸೌಲಭ್ಯಗಳನ್ನು ಒದಗಿಸುತ್ತದೆ, ಆದರೆ ಇದು ಮೆಲಿಶಿಯಸ್ ಆಕ್ಟರ್ (Melicious Actors) ಮತ್ತು ಸ್ಟಾಕರ್ (Stalkers) ಗಳು ತಪ್ಪು ಕೆಲಸ ಮಾಡಲು ಬಳಸಲಾಗುವ ಕೆಲವು ವೈಶಿಷ್ಟ್ಯಗಳನ್ನು ಹೊಂದಿದೆ. ಕೆಲವರು ಆನ್‌ಲೈನ್‌ನಲ್ಲಿ ಯಾರನ್ನಾದರೂ ಅನುಸರಿಸಲು ಥರ್ಡ್ ಪಾರ್ಟಿ ಆಪ್ ಗಳಿಂದ  'ಲಾಸ್ಟ್ ಸೀನ್ ' ಸ್ಟೇಟಸ್ ಮತ್ತು 'ಆನ್‌ಲೈನ್' ಸ್ಟೇಟಸ್ ಅನ್ನು ನೋಡಲು ಬಳಸುತ್ತಾರೆ.

ಕೆಲವು ಬಳಕೆದಾರರು ತಾವು ಹಿಂದೆ ಚಾಟ್ ಮಾಡದ ಬಳಕೆದಾರರ 'ಆನ್‌ಲೈನ್' ಸ್ಥಿತಿ (WhatsApp Online Status)ಅಥವಾ 'ಕೊನೆಯದಾಗಿ ನೋಡಿದ' (WhatsApp Last Seen Status) ಸ್ಥಿತಿಯನ್ನು ವೀಕ್ಷಿಸಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ನೀವು ಗಮನಿಸಿರಬಹುದು. ವಾಟ್ಸಾಪ್ ಬೀಟಾ ವೈಶಿಷ್ಟ್ಯಗಳನ್ನು ಟ್ರ್ಯಾಕ್ ಮಾಡುವ ವೆಬ್‌ಸೈಟ್ WABetaInfo ನ ವರದಿಯ ಪ್ರಕಾರ, ತ್ವರಿತ ಸಂದೇಶ ರವಾನೆ ಆಪ್ WhatsApp, ಥರ್ಡ್ ಪಾರ್ಟಿ ಆಪ್ ಗಳು ಟೈಮ್ ಲಾಗ್ ವರೆಗೆ ತಲುಪುವುದನ್ನು ತಡೆಯಲು ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. 

ಹಿಂಬಾಲಿಸಲು 'ಲಾಸ್ಟ್ ಸೀನ್' ಹಾಗೂ 'ಆನ್ಲೈನ್' ಸ್ಟೇಟಸ್ ಅನ್ನು ಹೇಗೆ ಬಳಸಲಾಗುತ್ತದೆ?
ಅಂಡ್ರಾಯಿಡ್ ನ ಗೂಗಲ್ (Google Play Store) ಪ್ಲೇ ಸ್ಟೋರ್ ಹಾಗೂ iOS ನ ಆಪಲ್ ಆಪ್ ಸ್ಟೋರ್ ನಲ್ಲಿ ಕೆಲ ಥರ್ಡ್ ಪಾರ್ಟಿ ಆಪ್ಲಿಕೆಶನ್ ಗಳಿದ್ದು, ಅವುಗಳ ಸಹಾಯದಿಂದ ಯಾವುದೇ ವ್ಯಕ್ತಿಯ ಆನ್ಲೈನ್ ಸ್ಟೇಟಸ್ ಹಾಗೂ ಲಾಸ್ಟ್ ಸೀನ್ ಟೈಮ್ ವಾಟ್ಸ್ ಆಪ್ ಡೇಟಾ ಎಕ್ಸಸ್ ಮಾಡಬಹುದು. ಆದರೆ, ಈಗ ವಾಟ್ಸ್ ಆಪ್ ಈ ಆಪ್ಲಿಕೆಶನ್ ಗಳನ್ನು ಇಂತಹ ಸೂಕ್ಷ್ಮ ದತ್ತಾಂಶದವರೆಗೆ ತಲುಪುವುದನ್ನು ತಡೆಯಲು ಕೆಲ ಭದ್ರತಾ ಉಪಾಯಗಳನ್ನು ಪ್ರಸ್ತುತಪಡಿಸಿದೆ.

ಅಷ್ಟೇ ಯಾಕೆ ಎರಡೂ ಖಾತೆಗಳ ಮೇಲೆ ಲಾಸ್ಟ್ ಸೀನ್ ಸ್ಟೇಟಸ್ ಆಕ್ಟಿವ್ ಇದ್ದರೂ ಕೂಡ ಬಳಕೆದಾರರು ಯಾವುದೇ ಚಾಟ್ ಹಿಸ್ಟರಿ ಇಲ್ಲದೆ ಅದನ್ನು ನೋಡಲು ಸಾಧ್ಯವಿಲ್ಲ. ಇಂತಹ ಸ್ಥಿತಿಯಲ್ಲಿ ಆನ್ಲೈನ್ ಸ್ಟೇಟಸ್ ಕೂಡ ಕಾಣಿಸುವುದಿಲ್ಲ. ಈ ಹೊಸ ಮಿತಿಯು ಬಳಕೆದಾರರೊಂದಿಗೆ ಸಂವಹನ ನಡೆಸುವ ಸ್ನೇಹಿತರು, ಕುಟುಂಬ ಮತ್ತು ವ್ಯವಹಾರಗಳೊಂದಿಗೆ ಚಾಟ್‌ಗಳಲ್ಲಿ ಯಾವುದೇ ಅಡಚಣೆಯನ್ನು ಉಂಟುಮಾಡುವುದಿಲ್ಲ ಎಂದು WhatsApp ಭರವಸೆ ನೀಡಿದೆ.

ಇದನ್ನೂ ಓದಿ-Hidden River Found Under Sangam: ಗಂಗೆ-ಯಮುನೆಯ ಪವಿತ್ರ ಸಂಗಮದ ಕೆಳಗೆ ಮೂರನೇ ನದಿ, ನಿಬ್ಬೇರಗಾದ ವಿಜ್ಞಾನಿಗಳು

ಈ ಕುರಿತಾದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ WhatsApp Support, "ನಮ್ಮ ಬಳಕೆದಾರರ ಗೌಪ್ಯತೆ ಮತ್ತು ಸುರಕ್ಷತೆಯನ್ನು ಸುಧಾರಿಸುವ ಸಲುವಾಗಿ, ನಾವು ನಿಮಗೆ ಪರಿಚಯವಿಲ್ಲದ ಹಾಗೂ ನೀವು ವಾಟ್ಸ್ ಆಪ್ ಚಾಟ್ ನಡೆಸದ ಜನರಿಗೆ ನಿಮ್ಮ ಸ್ಟೇಟಸ್ ನೋಟ ಕಠಿಣಗೊಳಿಸಲಿದ್ದೇವೆ. ಹೀಗಾಗಿ ಅವರಿಗೆ ನಿಮ್ಮ ಆನ್‌ಲೈನ್ ಉಪಸ್ಥಿತಿ ಅಥವಾ ಕೊನೆಯದಾಗಿ ನೋಡಿದ ಸ್ಥಿತಿಯನ್ನು ನೋಡಲು ಸಾಧ್ಯವಾಗುವುದಿಲ್ಲ. ಇದು ನಿಮ್ಮ ಮತ್ತು ನಿಮ್ಮ ಸ್ನೇಹಿತರು, ಕುಟುಂಬ ಮತ್ತು ನಿಮಗೆ ತಿಳಿದಿರುವ ಅಥವಾ ಮೊದಲು ಸಂದೇಶ ಕಳುಹಿಸಿದ ವ್ಯವಹಾರಗಳ ನಡುವೆ ಏನನ್ನೂ ಬದಲಾಯಿಸುವುದಿಲ್ಲ" ಎಂದು ಹೇಳಿದೆ.

ಇದನ್ನೂ ಓದಿ-BoAt: ಬಜೆಟ್ ಬೆಲೆಯ ಅದ್ಭುತ ಜಲನಿರೋಧಕ ಸ್ಮಾರ್ಟ್ ವಾಚ್ ಬಿಡುಗಡೆ

ಮಾತುಕತೆ ನಡೆಸಿದ ಬಳಿಕವೂ ಕೂಡ ಒಂದು ವೇಳೆ ನೀವು ಲಾಸ್ಟ್ ಸೀನ್ ಅಥವಾ ಆನ್ಲೈನ್ ಸ್ಟೇಟಸ್ ನೋಡುತ್ತಿಲ್ಲ ಎಂದಾದರೆ, ನಿಮ್ಮ ಕಾಂಟ್ಯಾಕ್ಟ್ ಎಲ್ಲರ ಜೊತೆಗೆ ತಮ್ಮ ಸ್ಟೇಟಸ್ ಹಂಚಿಕೊಳ್ಳುವುದನ್ನು ನಿಲ್ಲಿಸಿದ್ದಾರೆ  ಅಥವಾ ಕೆಲ ವಿಶೇಷ ಬಳಕೆದಾರರಿಗೆ ತಮ್ಮ ಸ್ಟೇಟಸ್ ನೋಡಲು ಅನುಮತಿ ನೀಡಿದ್ದಾರೆ ಎಂದೇ ಅರ್ಥೈಸಬೇಕು. 

ಇದನ್ನೂ ಓದಿ-ನಿಮಗೆ ಗೊತ್ತಿಲ್ಲದಂತೆ ನಿಮ್ಮ ಫೇಸ್ ಬುಕ್ ಪ್ರೊಫೈಲನ್ನು ಯಾರು ಚೆಕ್ ಮಾಡುತ್ತಿದ್ದಾರೆ ಹೀಗೆ ತಿಳಿಯಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News