Recharge Plan: ಇಡೀ ತಿಂಗಳ ಬದಲಿಗೆ 28 ​​ದಿನಗಳವರೆಗೆ ಮಾತ್ರ ಏಕಿರುತ್ತೆ ರಿಚಾರ್ಜ್ ಪ್ಲಾನ್! ಇಲ್ಲಿದೆ ಪ್ರಮುಖ ಕಾರಣ!

Recharge Plan: ನಮ್ಮಲ್ಲಿ ಕೆಲವರು ಒಮ್ಮೆಗೆ ಇಡೀ ವರ್ಷಕ್ಕೆ ಮೊಬೈಲ್ ರೀಚಾರ್ಜ್ ಅನ್ನು  ಮಾಡಿಸುತ್ತಾರೆ. ಇನ್ನೂ ಕೆಲವರು ಪ್ರತಿ ತಿಂಗಳಿಗೊಮ್ಮೆ ಮೊಬೈಲ್ ರಿಚಾರ್ಜ್ ಮಾಡಿಸುತ್ತಾರೆ. ಆದರೆ, ತಿಂಗಳಿಗೊಮ್ಮೆ ರಿಚಾರ್ಜ್ ಯೋಜನೆಯಲ್ಲಿ ತಿಂಗಳಿಡೀ ಎಂದರೆ 30 ದಿನಗಳ ಮಾನ್ಯತೆ ಲಭ್ಯವಿರುವುದಿಲ್ಲ. ಬದಲಿಗೆ ಕೇವಲ 28ದಿನಗಳವರೆಗೆ ಮಾತ್ರ ವ್ಯಾಲಿಡಿಟಿ ಇರುತ್ತದೆ ಎಂದು ಎಂದಾದರೂ ಯೋಚಿಸಿದ್ದೀರಾ?

Written by - Yashaswini V | Last Updated : Apr 3, 2024, 12:25 PM IST
  • ನೀವು ಮಾಸಿಕ ರಿಚಾರ್ಜ್ ಪ್ಲಾನ್ ಅನ್ನು ಆಯ್ಕೆ ಮಾಡಿಕೊಂಡಿದ್ದೀರಿ ಎಂದು ಭಾವಿಸೋಣ...
  • ಆಗ 30 ದಿನಗಳ ಬದಲಿಗೆ ಕೇವಲ 28 ದಿನಗಳವರೆಗೆ ಮಾತ್ರ ನಿಮ್ಮ ಯೋಜನೆ ಮಾನ್ಯವಾಗಿರುತ್ತದೆ
  • ಎಂದರೆ ತಿಂಗಳಲ್ಲಿ ಎರಡು ದಿನ ಕಡಿಮೆ ಅವಧಿಗೆ ನಿಮ್ಮ ಯೋಜನೆ ಮುಕ್ತಾಯಗೊಳ್ಳುತ್ತದೆ.
Recharge Plan: ಇಡೀ ತಿಂಗಳ ಬದಲಿಗೆ 28 ​​ದಿನಗಳವರೆಗೆ ಮಾತ್ರ ಏಕಿರುತ್ತೆ ರಿಚಾರ್ಜ್ ಪ್ಲಾನ್! ಇಲ್ಲಿದೆ ಪ್ರಮುಖ ಕಾರಣ!  title=

Mobile Recharge Plan: ತಿಂಗಳಿಗೆ 30/31 ದಿನಗಳು ಇರುತ್ತವೆ. ಆದರೂ, ನಮ್ಮ ಭಾರತೀಯ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ, ವೋಡಾಫೋನ್-ಐಡಿಯಾ, ಏರ್ಟೆಲ್, ಬಿ‌ಎಸ್‌ಎನ್‌ಎಲ್ ಕಂಪನಿಗಳು ಮಾಸಿಕ ರಿಚಾರ್ಜ್ ಯೋಜನೆಗಳಲ್ಲಿ (Monthly Recharge Plans) ಕೇವಲ 28 ದಿನಗಳವರೆಗೆ ಮಾತ್ರ  ವ್ಯಾಲಿಡಿಟಿಯನ್ನು ನೀಡುತ್ತವೆ. ಅಷ್ಟಕ್ಕೂ ಟೆಲಿಕಾಂ ಕಂಪನಿಗಳು 30 ದಿನಗಳ ಬದಲಿಗೆ ಕೇವಲ 28ದಿನ ಮಾತ್ರ ಏಕೆ ರೀಚಾರ್ಜ್ ವ್ಯಾಲಿಡಿಟಿಯನ್ನು ನೀಡುತ್ತವೆ ಎಂದು ಎಂದಾದರೂ ಯೋಚಿಸಿದ್ದೀರಾ? 

ವಾಸ್ತವವಾಗಿ, ಟೆಲಿಕಾಂ ಕಂಪನಿಗಳು (Telecom Companies) ವಾರ್ಷಿಕ ಯೋಜನೆಯನ್ನು ಹೊರತುಪಡಿಸಿ, ಮೂರು ರೀತಿಯ ರಿಚಾರ್ಜ್ ಯೋಜನೆಗಳನ್ನು (Recharge Plans) ಪರಿಚಯಿಸುತ್ತವೆ. ಇವುಗಳಲ್ಲಿ ಮೊದಲನೆಯದಾಗಿ 28 ದಿನಗಳ ರಿಚಾರ್ಜ್ ಪ್ಲಾನ್, ಎರಡನೆಯದಾಗಿ 56 ದಿನಗಳ ರಿಚಾರ್ಜ್ ಯೋಜನೆ ಮತ್ತು ಮೂರನೆಯದು 84 ದಿನಗಳ ರಿಚಾರ್ಜ್ ಯೋಜನೆಗಳು. ಎಂದರೆ ತಿಂಗಳ ಯೋಜನೆಯಲ್ಲಿ 2 ದಿನ ಕಡಿಮೆ, ಎರಡು ತಿಂಗಳ ಯೋಜನೆಯಲ್ಲಿ 4 ದಿನ ಕಡಿಮೆ, ಮೂರು ತಿಂಗಳ ಯೋಜನೆಯಲ್ಲಿ 6 ದಿನ ಕಡಿಮೆ ಅವಧಿಗೆ ಯೋಜನೆಯ ಮಾನ್ಯತೆಯನ್ನು ಹೊಂದಿರಲಿದೆ. ಇದರ ಹಿಂದೆ ಟೆಲಿಕಾಂ ಕಂಪನಿಗಳ ದೊಡ್ಡ ಲೆಕ್ಕಾಚಾರವೇ ಇದೆ. 

ಇದನ್ನೂ ಓದಿ- ಅಮೆಜಾನ್‌ನ ಹೊಸ ಅಪ್ಲಿಕೇಶನ್‌ನಲ್ಲಿ ಅಂಗೈ ಸ್ಕ್ಯಾನ್ ಮಾಡಿದ್ರೆ ಪೂರ್ಣಗೊಳ್ಳುತ್ತೇ ಪೇಮೆಂಟ್!

ಇಡೀ ತಿಂಗಳ ಬದಲಿಗೆ 28 ​​ದಿನಗಳವರೆಗೆ ಮಾತ್ರ ವ್ಯಾಲಿಡಿಟಿ ನೀಡಲು ಇದೇ ಪ್ರಮುಖ ಕಾರಣ: 
ನೀವು ಮಾಸಿಕ ರಿಚಾರ್ಜ್ ಪ್ಲಾನ್ (Monthly Recharge Plans) ಅನ್ನು ಆಯ್ಕೆ ಮಾಡಿಕೊಂಡಿದ್ದೀರಿ ಎಂದು ಭಾವಿಸೋಣ... ಆಗ 30 ದಿನಗಳ ಬದಲಿಗೆ ಕೇವಲ 28 ದಿನಗಳವರೆಗೆ ಮಾತ್ರ ನಿಮ್ಮ ಯೋಜನೆ ಮಾನ್ಯವಾಗಿರುತ್ತದೆ ಎಂದರೆ ತಿಂಗಳಲ್ಲಿ ಎರಡು ದಿನ ಕಡಿಮೆ ಅವಧಿಗೆ ನಿಮ್ಮ ಯೋಜನೆ ಮುಕ್ತಾಯಗೊಳ್ಳುತ್ತದೆ. ಈ ರೀತಿ 12 ತಿಂಗಳಿಗೆ ಲೆಕ್ಕಾ ಹಾಕಿದರೆ ಒಟ್ಟು 24 ದಿನಗಳು ಉಳಿಯುತ್ತವೆ. 

ಇದನ್ನೂ ಓದಿ- Smartphone Tricks: ಫೋನ್ ನಲ್ಲಿ ಈ ಸಂಕೇತ ಕಾಣಿಸಿಕೊಂಡರೆ ನಿಮ್ಮ ಕರೆ ರೆಕಾರ್ಡ್ ಆಗುತ್ತಿದೆ ಎಂದರ್ಥ, ನೀವೂ ತಿಳಿದುಕೊಳ್ಳಿ!

ಸರಳವಾಗಿ ಹೇಳುವುದಾದರೆ 30 ದಿನಗಳ ಬದಲಿಗೆ ಕೇವಲ 28ದಿನಗಳವರೆಗೆ ರಿಚಾರ್ಜ್ ಯೋಜನೆಯನ್ನು ನೀಡುವುದರಿಂದ ಗ್ರಾಹಕರು ವರ್ಷವಿಡೀ 12 ಬಾರಿ ರೀಚಾರ್ಜ್ ಮಾಡುವ ಬದಲಿಗೆ 13 ಬಾರಿ ರಿಚಾರ್ಜ್ ಮಾಡಿಸುತ್ತಾರೆ. ಇದರಿಂದ ಟೆಲಿಕಾಂ ಕಂಪನಿಗಳಿಗೆ ಹೆಚ್ಚುವರಿ ಆದಾಯ ದೊರೆಯುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News