ಮೈಸೂರು ಪಾಕ್ ತಯಾರಿಕೆಯಲ್ಲಿ ನಿರತರಾಗಿರುವ ಭಾಣಸಿಗರು. ಇವೆಲ್ಲ ದೃಶ್ಯಗಳು ದಾವಣಗೆರೆಯಲ್ಲಿ ನಡೆಯುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವಕ್ಕೆ ತಿಂಡಿ ತಿನಿಸುಗಳ ಸಿದ್ದತೆ. ದಾವಣಗೆರೆಯ ಹೊರವಲಯದಲ್ಲಿರುವ ಕುಂದುವಾಡ ಬಳಿಯ ಸುಶಿ ಕನ್ವೆನ್ಷನ್ ಹಾಲ್ ನಲ್ಲಿ ಆರು ಲಕ್ಷ ಮೈಸೂರು ಪಾಕ್ ಸಿದ್ದವಾಗುತ್ತಿದ್ದು, ಮೂರು ದಿನಗಳಿಂದ 150 ಹೆಚ್ಚು ಬಾಣಸಿಗರು ಮೈಸೂರ್ ಪಾಕ್ ಸಿದ್ದ ಪಡಿಸುತ್ತಿದ್ದಾರೆ. ಈಗಾಗಲೇ 4 ಲಕ್ಷ ಮೈಸೂರು ಪಾಕ್ ಸಿದ್ದಪಡಿಸಲಾಗಿದೆ. ತಯಾರಾಗಿರುವ ಮೈಸೂರ್ ಪಾಕ್ ನ್ನು ಸುರಕ್ಷಿತವಾಗಿ ರಟ್ಟಿನ್ ಬಾಕ್ಸ್ ನನ್ನ ಹಾಕಿ ಸುರಕ್ಷಿತವಾಗಿ ಪ್ಯಾಕ್ ಮಾಡಲಾಗುತ್ತಿದೆ. ಇನ್ನು ಮೈಸೂರ್ ಪಾಕ್ ತಯಾರಿಸಲು ಒಟ್ಟು ಎರಡು ಸಾವಿರ ಲೀಟರ್ ತುಪ್ಪ, ಎರಡು ಸಾವಿರ ಲೀಟರ್ ಹಾಲು, ಎರಡು ಸಾವಿರ ಕೆಜಿ ಕಡಲೆ ಹಿಟ್ಟು, 4 ಸಾವಿರ ಕೆಜಿ ಸಕ್ಕರೆ ಸೇರಿದಂತೆ ವಿವಿಧ ಪದಾರ್ಥಗಳನ್ನ ಹಾಕಿ ಭಾಣಸಿಗರು ಸಿಹಿ ತಿಂಡಿಗಳನ್ನ ತಯಾರಿಸುತ್ತಿದ್ದಾರೆ.