ಕಂಬಳದ ಕೋಣಗಳ ಓಟಕ್ಕೆ ಬೆರಗಾದ ಪುಟ್ಟ ಪೋರಿ! ಮುದ್ದು ಮಗುವಿನ ವಿಡಿಯೋ ವೈರಲ್

Viral Video : ಇದೀಗ ಕರಾವಳಿ ಭಾಗದಲ್ಲಿ ಕಂಬಳ ನಡೆಯುವ ಹೊತ್ತು. ಪುಟ್ಟ ಮಗುವೊಂದು ಕಂಬಳ ವೀಕ್ಷಿಸುತ್ತಿರುವ ವಿಡಿಯೋವೊಂದು  ಇದೀಗ ವೈರಲ್ ಆಗಿದೆ. 

Written by - Ranjitha R K | Last Updated : Jan 23, 2023, 04:30 PM IST
  • ಕಂಬಳ ಕರಾವಳಿ ಭಾಗದ ಜಾನಪದ ಕ್ರೀಡೆ.
  • ಸುಗ್ಗಿ ಬೆಳೆಯ ಬಿತ್ತನೆ ಸಮಯದಲ್ಲಿ ಕಂಬಳ ನಡೆಯುತ್ತದೆ.
  • ಕಂಬಳಕ್ಕೆ ಅಭಿಮಾನಿ ಬಳಗವೂ ದೊಡ್ಡದಿದೆ.
ಕಂಬಳದ ಕೋಣಗಳ ಓಟಕ್ಕೆ ಬೆರಗಾದ ಪುಟ್ಟ ಪೋರಿ! ಮುದ್ದು ಮಗುವಿನ ವಿಡಿಯೋ ವೈರಲ್  title=

Viral Video : ಕಂಬಳ ಕರಾವಳಿ ಭಾಗದ ಜಾನಪದ ಕ್ರೀಡೆ. ಈ ಕಂಬಳಕ್ಕೆ ಸುಮಾರು ೯೦೦ ವರ್ಷಗಳ ಇತಿಹಾಸವಿದೆ ಎಂದು ಹೇಳಲಾಗುತ್ತದೆ. ಸುಗ್ಗಿ ಬೆಳೆಯ ಬಿತ್ತನೆ ಸಮಯದಲ್ಲಿ ಕಂಬಳ ನಡೆಯುತ್ತದೆ. ಮೊದಲ ಕೊಯ್ಲು ಮುಗಿದ ನಂತರ ಎರಡನೆಯ ಬೆಳೆಗೆ ಭೂಮಿಯನ್ನು ಹದ ಮಾಡುವ ಹಂತದಲ್ಲಿ ಕಂಬಳ ನಡೆಯುತ್ತದೆ. ಕೆಸರು ಗದ್ದೆಯಲ್ಲಿ ಕೋಣಗಳನ್ನು ಓಡಿಸಲಾಗುತ್ತದೆ.  ದಷ್ಟ ಪುಷ್ಟವಾಗಿ ಬೆಳೆದಿರುವ ಕೋಣಗಳು ಕೆಸರು ಗದ್ದೆಗೆ ಇಳಿದು ಓಡುವ ನೋಟವೇ ಚಂದ. ಕಂಬಳದ ಜೊತೆ ಈ ಭಾಗದ ಜನರ ಧಾರ್ಮಿಕ ಭಾವನೆ ಕೂಡಾ ಬೆಸೆದುಕೊಂಡಿದೆ.  

ಕಂಬಳಕ್ಕೆ ಅಭಿಮಾನಿ ಬಳಗವೂ ದೊಡ್ಡದಿದೆ. ಇಲ್ಲಿ ಹಿರಿಯರು ಕಿರಿಯರು ಎನ್ನುವ ಭೇದ ಇಲ್ಲ. ಸಾಮಾನ್ಯ ಓಟದ ಸ್ಪರ್ಧೆಯಲ್ಲಿ ತಮ್ಮ ನೆಚ್ಚಿನ ಆಟಗಾರನನ್ನು ಹೇಗೆ ಬೆಂಬಲಿಸುತ್ತೆವೆಯೋ, ಕಂಬಳದಲ್ಲಿ ಕೂಡಾ ತಮ್ಮ ನೆಚ್ಚಿನ ಕೋಣಗಳನ್ನು ಬೆಂಬಲಿಸುವ ದೊಡ್ಡ ದಂಡೇ ಅಲ್ಲಿ ನೆರೆದಿರುತ್ತದೆ.   ಇದೀಗ ಕರಾವಳಿ ಭಾಗದಲ್ಲಿ ಕಂಬಳ ನಡೆಯುವ ಹೊತ್ತು. ಪುಟ್ಟ ಮಗುವೊಂದು ಕಂಬಳ ವೀಕ್ಷಿಸುತ್ತಿರುವ ವಿಡಿಯೋವೊಂದು  ಇದೀಗ ವೈರಲ್ ಆಗಿದೆ. 

ಇದನ್ನೂ ಓದಿ : ದೈತ್ಯ ಮೊಸಳೆಯನ್ನು ಬೈಕ್ ಮೇಲೆ ಮಲಗಿಸಿ, ಬೈಕ್ ಸವಾರಿ! ಈ ವೈರಲ್ ವಿಡಿಯೋ ನೀವು ನೋಡಲೇಬೇಕು

ವಿಡಿಯೋದಲ್ಲಿ ಹೆಣ್ಣು ಮಗುವೊಂದು ಸರಳುಗಳ ಎಡೆಯಿಂದ  ತಲೆ ಹೊರ ಹಾಕಿ ಕಂಬಳ ನೋಡುತ್ತಿದೆ. ಕೋಣಗಳು ಅಷ್ಟೊಂದು ಬಿರುಸಿನಿಂದ ಓಡುತ್ತಿರುವುದನ್ನು ಕಂಡು ಮಗು ಬೆಕ್ಕಸ ಬೆರಗಾಗಿದೆ. ಯಬ್ಬೋ ಅನ್ನುವ ಉದ್ಗಾರ ಕೂಡಾ ಮಗುವಿನ ಬಾಯಲ್ಲಿ ಬರುತ್ತದೆ. ಕೋಣಗಳ ಓಟ ನೋಡಿದ ಆ ಮಗುವಿನ ಬಟ್ಟಲು ಕಂಗಳಲ್ಲಿ ಆಶ್ಚರ್ಯ, ಸಂತೋಷ, ಬೆರಗು ಎಲ್ಲವೂ ಕಾಣುತ್ತದೆ. 

 

ಮೊದಲ ಬಾರಿಗೆ ಈ ಮಗು ಕಂಬಳ ವೀಕ್ಷಿಸುತ್ತಿದೆ ಎನ್ನುವುದು ಮಗುವಿನ ನೋಟದಲ್ಲೇ ತಿಳಿಯುತ್ತದೆ.  ನಿಶ್ಚಲ್ ಸುವರ್ಣ ಎಂಬ  ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಅತಿ ಕಿರಿಯ ವಯಸ್ಸಿನ ಕಂಬಳದ ಅಭಿಮಾನಿ ಎಂದು ಕೂಡಾ ಬಳಕೆದಾರರು ಬರೆದುಕೊಂಡಿದ್ದಾರೆ.
 
ಇದನ್ನೂ ಓದಿ :  ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಹತ್ತಿದ ವ್ಯಕ್ತಿ, ಮುಂದೆ ಆಗಿದ್ದೇನು- ವಾಚ್ ವೈರಲ್ ವಿಡಿಯೋ

ಈ ವಿಡಿಯೋ ಲೈಕ್ ಗಳನ್ನೂ ಪಡೆಯುತ್ತಿದ್ದು, ವಿಡಿಯೋ ವೀಕ್ಷಿಸಿದವರು ಕಾಮೆಂಟ್ ಗಳನ್ನೂ ಕೂಡಾ ಮಾಡುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News