ಎಲ್ಲಿಗೆ ಬಂತಪ್ಪಾ ಕಾಲ..! ರೀಲ್ಸ್‌ಗಾಗಿ ಬ್ರಾ ತೊಟ್ಟು ಬಿದಿಗಿಳಿದ ಯುವತಿ.. ಕಣ್ಣು ಮುಚ್ಚಿಕೊಂಡ ಯುವಕರು.. ವಿಡಿಯೋ ವೈರಲ್‌

Viral Video : ಮೊನ್ನೆ ದೆಹಲಿಯಲ್ಲಿ ಯುವತಿಯೊಬ್ಬಳು ಬಸ್ಸಿನಲ್ಲಿ ಬಿಕಿನಿ ಹಾಕಿಕೊಂಡು ಓಡಾಡಿದ್ದ ಸುದ್ದಿ ವೈರಲ್ ಆಗಿತ್ತು. ಈಗ ಅಂಥದ್ದೊಂದು ಘಟನೆ ಮತ್ತೆ ನಡೆದಿದೆ. ಯುವತಿಯೊಬ್ಬಳು ರೀಲ್‌ಗಳಿಗೆ ಬ್ರಾ ಧರಿಸಿ ರಸ್ತೆಯಲ್ಲಿ ನಡೆದಾಡಿದ್ದಾಳೆ.. ಯುವತಿಯ ಅನುಚಿತ ವರ್ತನೆ ನೆಟ್ಟಿಗರು ಕೋಪಗೊಂಡಿದ್ದಾರೆ.. ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. 

Written by - Krishna N K | Last Updated : Sep 28, 2024, 03:59 PM IST
    • ಮೊನ್ನೆ ದೆಹಲಿಯಲ್ಲಿ ಯುವತಿಯೊಬ್ಬಳು ಬಸ್ಸಿನಲ್ಲಿ ಬಿಕಿನಿ ಹಾಕಿಕೊಂಡು ಓಡಾಡಿದ್ದಳು
    • ಇಂದು ಯುವತಿಯೊಬ್ಬಳು ಬ್ರಾ ಮತ್ತು ಚಡ್ಡಿ ಧರಿಸಿ ರಸ್ತೆಯಲ್ಲಿ ತಿರುಗಾಡಿದ್ದಾಳೆ.
    • ಯುವತಿಯ ವರ್ತನೆಯಿಂದ ರಸ್ತೆಯಲ್ಲಿದ್ದ ಜನರು ತಲೆ ತಗ್ಗಿಸುವಂತಾಗಿದೆ.
ಎಲ್ಲಿಗೆ ಬಂತಪ್ಪಾ ಕಾಲ..! ರೀಲ್ಸ್‌ಗಾಗಿ ಬ್ರಾ ತೊಟ್ಟು ಬಿದಿಗಿಳಿದ ಯುವತಿ.. ಕಣ್ಣು ಮುಚ್ಚಿಕೊಂಡ ಯುವಕರು.. ವಿಡಿಯೋ ವೈರಲ್‌ title=

Viral Reels : ಕೆಲವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗುವ ಹುಚ್ಚು. ಅದಕ್ಕಾಗಿ ಹುಚ್ಚು ಹುಚ್ಚಾಗಿ ವರ್ತಿಸುತ್ತಿದ್ದಾರೆ.. ಶಿಷ್ಟಾಚಾರ ಮತ್ತು ಸಂಸ್ಕೃತಿಯಿಲ್ಲದೆ ವರ್ತಿಸುತ್ತಿದ್ದಾರೆ.. ಕೆಲವರು ರೀಲುಗಳು ಮತ್ತು ಶಾರ್ಟ್‌ ವೀಡಿಯೊಗಳ ಮೂಲಕ ಜನಪ್ರಿಯತೆಯನ್ನು ಗಳಿಸಲು ಮಾನ ಮರ್ಯಾದೆ ಬಿಟ್ಟಂತೆ ನಡೆದುಕೊಳ್ಳುತ್ತಿದ್ದಾರೆ..

ಕೆಲ ಯುವತಿಯರೂ ನೆಕೆಡ್‌ ಟ್ರೆಂಡ್ ಅನುಸರಿಸುತ್ತಿದ್ದಾರೆ. ಇತ್ತೀಚಿಗೆ ಯುವತಿಯರು ಬಿಕಿನಿ ಧರಿಸಿ ಬಸ್‌ನಲ್ಲಿ ಪ್ರಯಾಣಿಸುವ ಸುದ್ದಿ ವೈರಲ್ ಆಗಿತ್ತು. ಇದೀಗ ಬ್ಯುಸಿ ರೋಡ್‌ನಲ್ಲಿ ಯುವತಿಯೊಬ್ಬಳು ಕೇವಲ ಬ್ರಾ ಮತ್ತು ತುಂಡು ಚಡ್ಡಿ ಧರಿಸಿ ಶೋ ಮಾಡಿದ್ದಾಳೆ. ಈಕೆಯ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ, ಇನ್ನು ಮುಂದೆ ಈ ರೀತಿ ಮಾಡಲ್ಲ ಅಂತ ಯುವತಿ ಕ್ಷಮೆ ಕೇಳಿದ್ದಾಳೆ.

ಇದನ್ನೂ ಓದಿ: ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್ ವಿಚ್ಛೇದನ ಫಿಕ್ಸ್!? ಕೊನೆಗೂ ಸಿಕ್ಕೇ ಬಿಟ್ಟಿತು ದೊಡ್ಡ ಸಾಕ್ಷಿ!!

ಮಧ್ಯಪ್ರದೇಶದ ಇಂದೋರ್‌ನಲ್ಲಿ ಈ ಘಟನೆ ನಡೆದಿದೆ. ರೀಲ್‌ಗಾಗಿ ಯುವತಿಯೊಬ್ಬಳು ಡೆನಿಮ್ ಶಾರ್ಟ್‌, ಬೇರ್ ಬ್ರಾ ಧರಿಸಿ ಜನನಿಬಿಡ ಪ್ರದೇಶದಲ್ಲಿ ಸುತ್ತಾಡಿದ್ದಾಳೆ. ಈ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟಿಜನ್‌ಗಳು ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ವರ್ತಿಸಿದ್ದಕ್ಕೆ ಆಕೆಯ ವಿರುದ್ಧ ಹರಿಹಾಯ್ದಿದ್ದಾರೆ. 

ಅಲ್ಲದೆ, ಬಿಜೆಪಿ ಪಕ್ಷ, ಬಜರಂಗದಳ ಮತ್ತು ಇತರ ಸಂಘಟನೆಗಳು ಕೂಡ ಆಕೆಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ. ಟೀಕೆಗಳು ಮತ್ತು ವಿರೋಧ ವ್ಯಕ್ತವಾಗುತ್ತಿದ್ದಂತೆ ಯುವತಿ ವಿಡಿಯೋ ಮೂಲಕ 'ಕ್ಷಮಿಸಿ.. ಸಾರ್ವಜನಿಕ ಸ್ಥಳದಲ್ಲಿ ಇಂತಹ ಬಟ್ಟೆ ಹಾಕಿಕೊಳ್ಳಬಾರದು.. ನನ್ನ ವರ್ತನೆ ನಿಮ್ಮ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದರೆ ಕ್ಷಮಿಸಿ. ಇನ್ನು ಮುಂದೆ ಇಂತಹ ತಪ್ಪುಗಳನ್ನು ಮಾಡುವುದಿಲ್ಲ’ ಎಂದು ಕ್ಷಮೆ ಕೇಳಿದ್ದಾಳೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News