Woman Slapped Man: ಮಹಾಪಂಚಾಯತ್ ಕಿಕ್ಕಿರಿದ ಸಭೆಯಲ್ಲಿ ವ್ಯಕ್ತಿಗೆ ಚಪ್ಪಲಿಯಿಂದ ಕಪಾಳಮೋಕ್ಷ ಮಾಡಿದ ಮಹಿಳೆ!!

Woman Slapped Man: ಕಾರ್ಯಕ್ರಮದಲ್ಲಿ ಮುಖಕ್ಕೆ ಸ್ಕಾರ್ಫ್ ಹಾಕಿಕೊಂಡ ಮಹಿಳೆಯೊಬ್ಬಳು ವೇದಿಕೆ ಮೇಲೆ ಬಂದು ತಮ್ಮ ಸ್ಥಿತಿಯ ಬಗ್ಗೆ ಹೇಳುತ್ತಿರುವುದು ವಿಡಿಯೋದಲ್ಲಿ ಕಂಡು ಬರುತ್ತಿದೆ. ಅದೇ ಸಂದರ್ಭದಲ್ಲಿ ನಿಂತಿದ್ದ ವ್ಯಕ್ತಿಗೆ ಚಪ್ಪಲಿಯಿಂದ ಹೊಡೆಯಲು ಪ್ರಾರಂಭಿಸುತ್ತಾಳೆ. ಇದಾದ ನಂತರ ವೇದಿಕೆಯಲ್ಲಿದ್ದ ಇತರ ಜನರು ಮಧ್ಯಪ್ರವೇಶಿಸಿ ಆಕೆಯನ್ನು ವೇದಿಕೆಯಿಂದ ಕೆಳಗಿಳಿಸಲು ಪ್ರಯತ್ನಿಸಿದ್ದಾರೆ.

Written by - Bhavishya Shetty | Last Updated : Nov 30, 2022, 04:59 AM IST
    • ದೆಹಲಿಯಲ್ಲಿ ಹಿಂದೂ ಏಕತಾ ಮಂಚ್ ಆಯೋಜಿಸಿದ್ದ ಕಾರ್ಯಕ್ರಮ
    • ಮಹಿಳೆಯೊಬ್ಬರು ವೇದಿಕೆಯಲ್ಲೇ ವ್ಯಕ್ತಿಯೊಬ್ಬನಿಗೆ ಚಪ್ಪಲಿಯಿಂದ ಥಳಿಸಿದ್ದಾರೆ
    • ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
Woman Slapped Man: ಮಹಾಪಂಚಾಯತ್ ಕಿಕ್ಕಿರಿದ ಸಭೆಯಲ್ಲಿ ವ್ಯಕ್ತಿಗೆ ಚಪ್ಪಲಿಯಿಂದ ಕಪಾಳಮೋಕ್ಷ ಮಾಡಿದ ಮಹಿಳೆ!! title=
Mahapanchayat

Woman Slapped Man: ಮಂಗಳವಾರ ದಕ್ಷಿಣ ದೆಹಲಿಯಲ್ಲಿ ಹಿಂದೂ ಏಕತಾ ಮಂಚ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬರು ವೇದಿಕೆಯಲ್ಲೇ ವ್ಯಕ್ತಿಯೊಬ್ಬನಿಗೆ ಚಪ್ಪಲಿಯಿಂದ ಥಳಿಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಿಂದೂ ಏಕತಾ ಮಂಚ್ ಛತ್ತರ್‌ಪುರದಲ್ಲಿ 'ಬೇಟಿ ಬಚಾವೋ ಮಹಾಪಂಚಾಯತ್' ಅನ್ನು ಆಯೋಜಿಸಲಾಗಿತ್ತು, ಅಲ್ಲಿ ವೇದಿಕೆಗೆ ಬಂದ ಮಹಿಳೆಯೊಬ್ಬಳು, ಭಾಷಣ ಮಾಡುತ್ತಿದ್ದ ವ್ಯಕ್ತಿಗೆ ಚಪ್ಪಲಿ ಸೇವೆ ಮಾಡಿದ್ದಾಳೆ.  

ಇದನ್ನೂ ಓದಿ: ಮಾರ್ಚ್ 2024 ರ ವೇಳೆಗೆ ಏರ್ ಇಂಡಿಯಾ, ವಿಸ್ತಾರಾ ವಿಲೀನ

ಕಾರ್ಯಕ್ರಮದಲ್ಲಿ ಮುಖಕ್ಕೆ ಸ್ಕಾರ್ಫ್ ಹಾಕಿಕೊಂಡ ಮಹಿಳೆಯೊಬ್ಬಳು ವೇದಿಕೆ ಮೇಲೆ ಬಂದು ತಮ್ಮ ಸ್ಥಿತಿಯ ಬಗ್ಗೆ ಹೇಳುತ್ತಿರುವುದು ವಿಡಿಯೋದಲ್ಲಿ ಕಂಡು ಬರುತ್ತಿದೆ. ಅದೇ ಸಂದರ್ಭದಲ್ಲಿ ನಿಂತಿದ್ದ ವ್ಯಕ್ತಿಗೆ ಚಪ್ಪಲಿಯಿಂದ ಹೊಡೆಯಲು ಪ್ರಾರಂಭಿಸುತ್ತಾಳೆ. ಇದಾದ ನಂತರ ವೇದಿಕೆಯಲ್ಲಿದ್ದ ಇತರ ಜನರು ಮಧ್ಯಪ್ರವೇಶಿಸಿ ಆಕೆಯನ್ನು ವೇದಿಕೆಯಿಂದ ಕೆಳಗಿಳಿಸಲು ಪ್ರಯತ್ನಿಸಿದ್ದಾರೆ.

ವೈಯಕ್ತಿಕ ವಿವಾದದಿಂದ ಈ ಘಟನೆ ಸಂಭವಿಸಿದ್ದು, ಇವರಿಬ್ಬರೂ ಪರಿಚಯಸ್ಥರು ಎಂದು ಹಿಂದೂ ಏಕತಾ ಮಂಚ್ ಸ್ಪಷ್ಟಪಡಿಸಿದೆ. ಹಿಂದೂ ಏಕತಾ ಮಂಚ್ ಕಾರ್ಯಕರ್ತ ಲಕ್ಷ್ಮಣ್ ಸಿಂಗ್ ಅವರು ಮಾತನಾಡಿದ್ದು, “ಇದು ವೈಯಕ್ತಿಕ ವಿವಾದ. ಆ ವ್ಯಕ್ತಿ ಹಿಂದೂ ಏಕತಾ ಮಂಚ್‌ನೊಂದಿಗೆ ಯಾವುದೇ ರೀತಿಯಲ್ಲಿ ಸಂಬಂಧ ಹೊಂದಿಲ್ಲ. ತಕ್ಷಣವೇ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಯಾವುದೇ ದೂರು ದಾಖಲಾಗಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.

 

 

ಘಟನೆಯ ಕುರಿತು ಮಾತನಾಡಿದ ಅವರು, “ಆ ಮಹಿಳೆಯ ಮಗಳು ಮತ್ತು ಆ ವ್ಯಕ್ತಿಯ ಮಗ ಇತ್ತೀಚೆಗೆ ಕೋರ್ಟ್ ಗೆ ತೆರಳಿ ವಿವಾಹವಾಗಿದ್ದರು. ಸಂಬಂಧಿತ ಕುಟುಂಬಗಳು ಮದುವೆಗೆ ಅಸಮಾಧಾನ ವ್ಯಕ್ತಪಡಿಸಿತ್ತು. ಆದರೆ ಆ ಬಳಿಕ ಒಪ್ಪಿಕೊಂಡು ಮದುವೆಯೂ ಮಾಡಿಸಿದ್ದರು. ಆದರೆ ಆಕೆ ಯಾಕೆ ವೇದಿಕೆಗೆ ಹತ್ತಿ ಈ ರೀತಿ ಮಾಡಿದ್ದಾಳೆ ಗೊತ್ತಿಲ್ಲ. ಕಾರ್ಯಕ್ರಮ ಮಹಿಳೆಯರಿಗಾಗಿಯೇ ಆಗಿದ್ದರಿಂದ ಆಕೆಗೆ ಮಾತನಾಡಲು ಅವಕಾಶ ನೀಡಿದ್ದೆವು. ವ್ಯಕ್ತಿ ಸಾಮಾಜಿಕ ಕಾರ್ಯಕರ್ತ ಮತ್ತು ಆತ ಸಹಾಯ ಮಾಡಲು ಮುಂದಾಗಿದ್ದ. ಆದರೆ ಮಹಿಳೆ ಅವನನ್ನು ಹೊಡೆಯಲು ಪ್ರಾರಂಭಿಸಿದಳು” ಎಂದು ಅವರು ಹೇಳಿದರು.

ಈ ಮಹಾಪಂಚಾಯತ್ ಕಾರ್ಯಕ್ರಮವನ್ನು ಶ್ರದ್ಧಾ ವಾಕರ್ ಹತ್ಯೆಗೈದ ಅಫ್ತಾಬ್ ಪೂನಾವಾಲಾಗೆ ಕಠಿಣ ಶಿಕ್ಷೆ ನೀಡಿ ಶ್ರದ್ಧಾಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಲು ಆಯೋಜನೆ ಮಾಡಲಾಗಿತ್ತು.

ಇದನ್ನೂ ಓದಿ: Earthquake in Delhi: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಂಪಿಸಿದ ಭೂಮಿ: ರಿಕ್ಟರ್ ಮಾಪಕದಲ್ಲಿ ತೀವ್ರತೆ ದಾಖಲು

ಪೊಲೀಸರು ಹೇಳಿದ್ದೇನು?

ಚಪ್ಪಲಿಯಿಂದ ಹೊಡೆದ ಬಬಿತಾ ಎಂಬ ಮಹಿಳೆ ತನ್ನ ಮಗಳ ಮದುವೆಗೆ ವಿರುದ್ಧವಾಗಿದ್ದಳು ಎಂದು ದೆಹಲಿ ಪೊಲೀಸರು ಹೇಳುತ್ತಾರೆ. ಹಿಂದೂ ಮಂಚ್‌ನ ಸಂಘಟಕರ ಮಗ ಮತ್ತು ಈ ಮಹಿಳೆಯ ಮಗಳು ಕೆಲವು ತಿಂಗಳ ಹಿಂದೆ ಓಡಿಹೋಗಿ ಮದುವೆಯಾಗಿದ್ದರು. ಇಬ್ಬರೂ ಅಪ್ರಾಪ್ತರು. ನಿನ್ನೆ ಮಹಿಳೆ ಮೆಹ್ರಾಲಿ ಪೊಲೀಸ್ ಠಾಣೆಗೆ ತೆರಳಿ ಈ ಮದುವೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎರಡೂ ಕಡೆಯವರ ನಡುವೆ ಒಪ್ಪಂದ ಮಾಡಿಕೊಂಡು ನಿನ್ನೆ ಪೊಲೀಸರು ಕಳುಹಿಸಿದ್ದರು. ಇಂದು ಮತ್ತೆ ಈ ಮಹಿಳೆ ಪಂಚಾಯತ್ ಗೆ ಹೋಗಿ ಚಪ್ಪಲಿಯಿಂದ ಹೊಡೆದಿದ್ದು ಯಾಕೆ ಎಂಬುದು ಗೊತ್ತಿಲ್ಲ. ತನಿಖೆ ನಡೆಯುತ್ತಿದೆ” ಎಂದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆಕ್ಲಿಕ್ ಮಾಡಿ.

Trending News