Viral Video : ಶಾಸ್ತ್ರ ಎಂದು ಅವಕಾಶ ಕೊಟ್ಟಿದ್ದೇ ತಪ್ಪಾಯಿತು ಎಲ್ಲರೂ ಮುಖ ಮುಚ್ಚಿಕೊಳ್ಳುವಂತೆ ವರ್ತಿಸಿದ ಜೋಡಿ!

Bride Groom Video: ಒಂದೊಂದು ಪ್ರಾಂತ್ಯಕ್ಕೆ ಒಂದೊದು ಕ್ರಮ. ಆದರೆ ಎಲಾ ಕ್ರಮಕ್ಕೂ ಒಂದು ಶಿಸ್ತು ಸೀಮೆ ಎಂದಿರುತ್ತದೆ. ಅದನ್ನು ಮೀರಿದರೆ ಸಂಪ್ರದಾಯ, ಶಾಸ್ತ್ರ, ಕ್ರಮ ಎಲ್ಲವೂ ವಿಪರೀತ ಎನಿಸಿ ಬಿಡುತ್ತದೆ. 

Written by - Ranjitha R K | Last Updated : Aug 1, 2022, 04:12 PM IST
  • ಶಾಸ್ತ್ರ ಎಂದು ಅವಕಾಶ ಕೊಟ್ಟಿದ್ದೇ ತಪ್ಪಾಯಿತು
  • ಮದುವೆ ಮಂಟಪದಲ್ಲಿಯೇ ಅತಿಯಾಗಿ ವರ್ತಿಸಿದ ಜೋಡಿ
  • ವೈರಲ್ ಆಯಿತು ವಿಡಿಯೋ
Viral Video : ಶಾಸ್ತ್ರ ಎಂದು ಅವಕಾಶ ಕೊಟ್ಟಿದ್ದೇ ತಪ್ಪಾಯಿತು ಎಲ್ಲರೂ ಮುಖ ಮುಚ್ಚಿಕೊಳ್ಳುವಂತೆ ವರ್ತಿಸಿದ ಜೋಡಿ!     title=
Wedding Video (file photo)

Bride Groom Video: ಸಮಾರಂಭ ಏನೇ ಇರಲಿ. ಶಾಸ್ತ್ರಗಳು ಬೇರೆ ಬೇರೆಯಾಗಿರುತ್ತದೆ. ಊರಿಗೊಂದು ಕ್ರಮ ಜಾತಿಗೊಂದು ಕಟ್ಟಳೆ ಅನ್ನುತ್ತಾರಲ್ಲ ಹಾಗೆ. ಜಾತಿ, ಧರ್ಮ ಪ್ರದೇಶಕ್ಕನುಸಾರವಾಗಿ ಅನುಸರಿಸುವ ಕ್ರಮಗಳು ಬೇರೆ ಬೇರೆಯಾಗಿರುತ್ತವೆ.  ಮದುವೆ ಕೂಡಾ ಹಾಗೆ. ಒಂದೊಂದು ಪ್ರಾಂತ್ಯಕ್ಕೆ ಒಂದೊದು ಕ್ರಮ. ಆದರೆ ಎಲಾ ಕ್ರಮಕ್ಕೂ ಒಂದು ಶಿಸ್ತು ಸೀಮೆ ಎಂದಿರುತ್ತದೆ. ಅದನ್ನು ಮೀರಿದರೆ ಸಂಪ್ರದಾಯ, ಶಾಸ್ತ್ರ, ಕ್ರಮ ಎಲ್ಲವೂ ವಿಪರೀತ ಎನಿಸಿ ಬಿಡುತ್ತದೆ. 

ಹೌದು,  ಇತ್ತೀಚಿನ ದಿನಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋ ನೋಡಿದರೆ ಹಾಗೆಯೇ ಅನಿಸುತ್ತದೆ. ಇಲ್ಲಿ ವರ ಮತ್ತು ವಧು ಮದುವೆ ಮಂಟಪದಲ್ಲಿ ಕುಳಿತಿದ್ದಾರೆ. ಅವರಿಬ್ಬರನ್ನು ನೋಡಿದರೆ, ಮದುವೆ ಶಾಸ್ತ್ರಗಳು ನಡೆಯುತ್ತಿವೆ ಎಂದು  ಗೊತ್ತಾಗುತ್ತದೆ. ಮೊದಲೇ ಹೇಳಿದ ಹಾಗೆ ಪ್ರಾಂತ್ಯಕ್ಕೆ ಅನುಗುಣವಾಗಿ ಮದುವೆ ಕ್ರಮಗಳು ಭಿನ್ನ ಭಿನ್ನವಾಗಿರುತ್ತವೆ.  ಅ ಪದ್ದತಿಯಂತೆ ಶಾಸ್ತ್ರದ ಮಧ್ಯೆ ಪರಸ್ಪರ ಚುಂಬಿಸುವಂತೆ ಇಲ್ಲಿ ವಧು ವರರಿಗೆ ಹೇಳಲಾಗುತ್ತದೆ. 

ಇದನ್ನೂ ಓದಿ : Viral Video: ಮೃಗಾಲಯಕ್ಕೆ ಬಂದ ಜನರಿಗೆ ತನ್ನ ಮಗು ತೋರಿಸಿದ ಗೊರಿಲ್ಲಾ!

ಮದುವೆಯ ಶಾಸ್ತ್ರ ಎನ್ನುವ ಕಾರಣಕ್ಕೆ ಪರಸ್ಪರ ಚುಂಬಿಸುವಂತೆ ಹೇಳಿದ್ದೇ ತಡ. ವರ ಮಹಾಶನಂತೂ ಸಿಕ್ಕಿದ್ದೇ ಚಾನ್ಸ್ ಎನ್ನುವ ಹಾಗೆ ವರ್ತಿಸಿ ಬಿಟ್ಟ. ವಿವಾಹ ಮಂಟಪದಲ್ಲಿ ವಧು ವರರು ನಡೆದುಕೊಂಡ ರೀತಿ ನೋಡಿ ಅಲ್ಲಿದ್ದವರಂತೂ ಸುಸ್ತೋ ಸುಸ್ತು. 

ಇಲ್ಲಿದೆ ವಿಡಿಯೋ : 

 

ಇದನ್ನೂ ಓದಿ : Viral Video: ವೃದ್ಧನ ಎದೆಗೆ ಒದ್ದು ರೈಲ್ವೆ ಟ್ರ್ಯಾಕ್ಗೆ ಹಾಕಿದ ಪೊಲೀಸ್!

ಮದುವೆ ಮನೆ ಎಂದರೆ ಅಲ್ಲಿ ಮಕ್ಕಳು ಮುದುಕರು ಎಲ್ಲರೂ ಸೇರಿರುತ್ತಾರೆ.  ಅದ್ಯಾವುದರ ಪರಿವೇ ಇಲ್ಲದೆ ವಧು ವರರು ಚುಂಬನದಲ್ಲಿ ತಲ್ಲೀನರಾಗಿದ್ದನ್ನು ನೋಡಿದರೆ ಇಂಥಹ ಕ್ರಮವನ್ನು ಅದ್ಯಾರು ಮದುವೆ ಶಾಸ್ತ್ರದಲ್ಲಿ ಹಾಕಿದರೋ ಎಂದು ಮನೆಮಂದಿ ಅಂದು ಕೊಳ್ಳದೇ ಇರಲಿಕ್ಕಿಲ್ಲ. 

ಈ ಘಟನೆಯಿಂದ ಆ ವಧು ಮತ್ತು ವರನಿಗೆ ಏನನಿಸಿತೋ  ಗೊತ್ತಿಲ್ಲ, ಮದುವೆಗೆ ಬಂದವರು ಮಾತ್ರ ಮುಖ ಮುಚ್ಚಿಕೊಳ್ಳುವಂತಾಗಿದ್ದು ಮಾತ್ರ ಸುಳ್ಳಲ್ಲ.    

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News