Tiger And Bird Video: ಜೀವನವಿಡಿ ಮರೆಯದ ಪಾಠ ಕಲಿಸಿ, ಹುಲಿರಾಯನ ಬೆವರಿಳಿಸಿದ ಪುಟ್ಟ ಪಕ್ಷಿ

Tiger And Bird Video: ಹಕ್ಕಿಯನ್ನು ಹಿಡಿಯಲು ಹುಲಿ ಹೊಂಡಕ್ಕೆ ಹಾರುತ್ತಿದ್ದಂತೆ, ನೀರಿನಲ್ಲಿ ಮುಳುಗುವ ಹಕ್ಕಿ ಮೆಲ್ಲಗೆ ಹುಲಿಯ ಹಿಂದಕ್ಕೆ ಪ್ರತ್ಯಕ್ಷವಾಗುತ್ತದೆ. ಹಕ್ಕಿಯ ಈ ಕಣ್ಣುಮುಚ್ಚಾಲೆ ಆಟಕ್ಕೆ ಹುಲಿಯ ಬೆವರೇ ಇಳಿದು ಹೋಗುತ್ತದೆ.  

Written by - Nitin Tabib | Last Updated : Jul 29, 2022, 03:31 PM IST
  • ವೈಲ್ಡ್ ಲೈಫ್ ಗೆ ಸಂಬಂಧಿಸಿದ ಹಲವಾರು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹೆಡ್ಲೈನ್ ಗಿಟ್ಟಿಸುತ್ತಲೇ ಇರುತ್ತವೆ.
  • ಈ ವಿಡಿಯೋಗಳಲ್ಲಿ ಕೆಲವೊಮ್ಮೆ ಪ್ರಾಣಿಗಳು ತಮ್ಮ ಸ್ವಭಾವಕ್ಕೆ ವಿಪರೀತ ವರ್ತನೆಯನ್ನು ತೋರುತ್ತವೆ
  • ಮತ್ತು ಅವುಗಳ ಈ ಪರಿಯೇ ಜನರ ಭಾರಿ ಮೆಚ್ಚುಗೆಗೆ ಪಾತ್ರವಾಗುತ್ತದೆ.
Tiger And Bird Video: ಜೀವನವಿಡಿ ಮರೆಯದ ಪಾಠ ಕಲಿಸಿ, ಹುಲಿರಾಯನ ಬೆವರಿಳಿಸಿದ ಪುಟ್ಟ ಪಕ್ಷಿ title=
Tiger And Bird Video

Tiger And Bird Video: ವೈಲ್ಡ್ ಲೈಫ್ ಗೆ ಸಂಬಂಧಿಸಿದ ಹಲವಾರು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹೆಡ್ಲೈನ್ ಗಿಟ್ಟಿಸುತ್ತಲೇ ಇರುತ್ತವೆ. ಈ ವಿಡಿಯೋಗಳಲ್ಲಿ ಕೆಲವೊಮ್ಮೆ ಪ್ರಾಣಿಗಳು ತಮ್ಮ  ಸ್ವಭಾವಕ್ಕೆ ವಿಪರೀತ ವರ್ತನೆಯನ್ನು ತೋರುತ್ತವೆ ಮತ್ತು ಅವುಗಳ ಈ ಪರಿಯೇ ಜನರ ಭಾರಿ ಮೆಚ್ಚುಗೆಗೆ ಪಾತ್ರವಾಗುತ್ತದೆ. ಪ್ರಸ್ತುತ ಹುಲಿ ಹಾಗೂ ಪಕ್ಷಿಯೊಂದರ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಚಿಕ್ಕದಾದ ಹೊಂಡವೊಂದರಲ್ಲಿ ನೀರು ತುಂಬಿರುವುದನ್ನು ನೀವು ನೋಡಬಹುದು. ಈ ಹೊಂಡದಲ್ಲಿ ಪುಟ್ಟ ಹಕ್ಕಿಯೊಂದು ಆಟವಾಡುತ್ತಿದೆ. ಆದರೆ, ಆ ಹಕ್ಕಿಯ ಮೇಲೆ ಹುಲಿಯೊಂದರ ಕಣ್ಣು ಬೀಳುತ್ತದೆ ಮತ್ತು ಹಕ್ಕಿಯನ್ನು ಬೇಟೆಯಾಡುವ ಉದ್ದೇಶದಿಂದ ಹುಲಿರಾಯ ಹೊಂಡಕ್ಕೆ ಜಿಗಿಯುತ್ತಾನೆ. ಆದರೆ, ಹಕ್ಕಿ ಗಾತ್ರದಲ್ಲಿ ಚಿಕ್ಕದಾದರು ಕೂಡ ಭಾರಿ ಚಾಲಾಕಿತನ ಮೆರೆದಿದೆ.

ಇದನ್ನೂ ಓದಿ-PubGಗೆ ಪರ್ಯಾಯವಾಗಿ ಬಂದ BGMI ಗೇಮ್ ಭಾರತದಲ್ಲಿ ಬ್ಯಾನ್: ಕಾರಣ ಏನು?

ಹಕ್ಕಿಯನ್ನು ಹಿಡಿಯಲು ಹುಲಿ ಹೊಂಡಕ್ಕೆ ಹಾರುತ್ತಿದ್ದಂತೆ, ಹಕ್ಕಿ ನೀರಿನಲ್ಲಿ ಮುಳುಗಿಹೋಗುತ್ತದೆ ಮತ್ತು ನೇರವಾಗಿ ಹುಲಿಯ ಹಿಂಭಾಗದಲ್ಲಿ ಪ್ರತ್ಯಕ್ಷವಾಗುತ್ತದೆ. ಹುಲಿ ತನ್ನತ್ತ ತಿರುಗುತ್ತಿದ್ದಂತೆ ಹಕ್ಕಿ ಮತ್ತೆ ನೀರಿನಲ್ಲಿ ಡುಬಕಿ ಹೊಡೆಯುತ್ತದೆ. ದೀರ್ಘ ಕಾಲದವರೆಗೆ ಎರಡರ ನಡುವೆ ಈ ಕಣ್ಣುಮುಚ್ಚಾಲೆ ಆಟ ಮುಂದುವರೆಯುತ್ತದೆ. ಬಯಸಿಯೂ ಕೂಡ ಹುಲಿರಾಯನಿಗೆ ಹಕ್ಕಿಯ ಒಂದು ರೆಕ್ಕೆಯೂ ಕೂಡ ಸಿಗುವುದಿಲ್ಲ. ಇನ್ನೊಂದೆಡೆ ತನ್ನ ಚಾಲಾಕಿತನ ಮೆರೆಯುವ ಪುಟ್ಟ ಹಕ್ಕಿ ಮಾತ್ರ ತನ್ನ ಪ್ರಾಣ ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ.

ಇದನ್ನೂ ಓದಿ-ಏರ್ ಏಷ್ಯಾದಿಂದ ಬಂಪರ್‌ ಆಫರ್‌ ಕೇವಲ 1499 ರೂ.ಗೆ ಟಿಕೆಟ್‌ ಬುಕ್‌ ಮಾಡಿ!

ನಿಸ್ಸಹಾಯಕ ಕಂಡು ಬಂದ ಹುಲಿರಾಯ
ಸಾಮಾನ್ಯವಾಗಿ ಹುಲಿ ತನ್ನ ಬೇಟೆಯನ್ನು ಹಿಡಿದು ಅದರ ಪ್ರಾಣವನ್ನೇ ಹೀರುತ್ತದೆ. ಆದರೆ, ಈ ವಿಡಿಯೋದಲ್ಲಿ ಹುಲಿರಾಯ ಮಾತ್ರ ನಿಸ್ಸಹಾಯಕನಾಗಿರುವುದನ್ನು ನೀವು ನೋಡಬಹುದು. ಹಕ್ಕಿಯ ಚಾನಾಕ್ಷತನದ ಮುಂದೆ ಹುಲಿಯ ಆಟ ನಡೆಯುವುದಿಲ್ಲ. ಈ ವಿಡಿಯೋ ಅನ್ನು feline.unity ಹೆಸರಿನ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಹಂಚಿಕೊಳ್ಳಲಾಗಿದೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News