Buffaloes attacking lion Video: ಕಾಡಿನ ರಾಜನನ್ನು ಕೊಂಬಿನಲ್ಲಿ ತಿವಿದು ಮಾರುದ್ದ ಎಸೆದ ಕಾಡೆಮ್ಮೆ ಹಿಂಡು: ವಿಡಿಯೋ ನೋಡಿ

Buffaloes attacking lion Video: ಎಮ್ಮೆಗಳ ಹಿಂಡು ತಮ್ಮ ಕೊಂಬುಗಳ ಸಹಾಯದಿಂದ ಸಿಂಹದ ಮೇಲೆ ದಾಳಿ ಮಾಡುವುದನ್ನು ವೀಡಿಯೋದಲ್ಲಿ ಕಾಣಬಹುದು. ಇನ್ನು ಈ ವೀಡಿಯೋಗೆ ಶೀರ್ಷಿಕೆಯನ್ನು ನೀಡಲಾಗಿದ್ದು, "ಗಂಡು ಸಿಂಹವು ಎಮ್ಮೆಗಳ ಹಿಂಡಿನ ನಡುವೆ ಸಿಕ್ಕಿಹಾಕಿಕೊಂಡು ತನ್ನ ಪ್ರಾಣ ಕಾಪಾಡಿಕೊಳ್ಳಲು ಹೋರಾಡುತ್ತಿದೆ" ಎಂದು ಬರೆಯಲಾಗಿದೆ.

Written by - Bhavishya Shetty | Last Updated : Nov 25, 2022, 08:17 AM IST
    • ಸಿಂಹವನ್ನು ಕಾಡೆಮ್ಮೆಗಳ ಹಿಂಡು ಕೊಂಬಿನಲ್ಲಿ ತಿವಿದು ಮಾರುದ್ದ ಎಸೆದಿದೆ
    • ದಾಳಿಯ ಮೂರು ದಿನಗಳ ನಂತರ ಸಿಂಹವು ಸಾವನ್ನಪ್ಪಿದೆ
    • ಈ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ 1.5 ಮಿಲಿಯನ್‌ಗೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ
Buffaloes attacking lion Video: ಕಾಡಿನ ರಾಜನನ್ನು ಕೊಂಬಿನಲ್ಲಿ ತಿವಿದು ಮಾರುದ್ದ ಎಸೆದ ಕಾಡೆಮ್ಮೆ ಹಿಂಡು: ವಿಡಿಯೋ ನೋಡಿ title=
Buffaloes attacking lion

Buffaloes attacking lion Video: ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಸಿಂಹವನ್ನು ಕಾಡೆಮ್ಮೆಗಳ ಹಿಂಡು ಕೊಂಬಿನಲ್ಲಿ ತಿವಿದು, ಮಾರುದ್ದ ಎಸೆದಿರುವ ದೃಶ್ಯ ಕಾಣಿಸುತ್ತದೆ. ಘಟನೆಯ ವಿಡಿಯೋ ಕ್ಲಿಪ್ ಅನ್ನು ಡಿಯೋನ್ ಕೆಲ್‌ಬ್ರಿಕ್ ಎಂಬ ಛಾಯಾಗ್ರಾಹಕ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಎಮ್ಮೆಗಳ ಹಿಂಡು ತಮ್ಮ ಕೊಂಬುಗಳ ಸಹಾಯದಿಂದ ಸಿಂಹದ ಮೇಲೆ ದಾಳಿ ಮಾಡುವುದನ್ನು ವೀಡಿಯೋದಲ್ಲಿ ಕಾಣಬಹುದು. ಇನ್ನು ಈ ವೀಡಿಯೋಗೆ ಶೀರ್ಷಿಕೆಯನ್ನು ನೀಡಲಾಗಿದ್ದು, "ಗಂಡು ಸಿಂಹವು ಎಮ್ಮೆಗಳ ಹಿಂಡಿನ ನಡುವೆ ಸಿಕ್ಕಿಹಾಕಿಕೊಂಡು ತನ್ನ ಪ್ರಾಣ ಕಾಪಾಡಿಕೊಳ್ಳಲು ಹೋರಾಡುತ್ತಿದೆ" ಎಂದು ಬರೆಯಲಾಗಿದೆ.

ಇದನ್ನೂ ಓದಿ: Viral video : ತರಗತಿ ತುಂಬಾ ವಿದ್ಯಾರ್ಥಿಗಳ ಮಧ್ಯೆ ಬೆಚ್ಚಿ ಬೀಳಿಸುವಂತಿದೆ ಈ ಯುವಕ ಯುವತಿಯ ವರ್ತನೆ

"ಸಿಂಹವು ಗರ್ವದಿಂದ ಎಮ್ಮೆಗಳ ಹಿಂಡಿನ ಮೇಲೆ ದಾಳಿ ಮಾಡಿ ಬೇಟೆಯಾಡಲು ಪ್ರಯತ್ನಿಸಿತು. ಆದರೆ ಇಡೀ ಹಿಂಡು ಸಿಂಹದ ಕಡೆಗೆ ಮುಖ ಮಾಡಿ ಪ್ರತೀಕಾರ ತೀರಿಸಿಕೊಂಡಾಗ, ದುರದೃಷ್ಟವಶಾತ್ ವಯಸ್ಸಾದ ಗಂಡು ಸಿಂಹವು ತುಂಬಾ ಗಾಯದಿಂದಾಗಿ ವೇಗವಾಗಿ ದಾಳಿಯಿಂದ ಹೊರಬರಲು ಸಾಧ್ಯವಾಗಲಿಲ್ಲ" ಎಂದು ಹೇಳಿದ್ದಾರೆ.

ಡಾರ್ಕ್ ಮೇನ್ ಅವೊಕಾ ಎಂಬ ವಯಸ್ಸಾದ ಸಿಂಹವನ್ನು ಸುಮಾರು 15 ನಿಮಿಷಗಳ ಕಾಲ ಕಾಡೆಮ್ಮೆಗಳ ಹಿಂಡು ಫುಟ್ ಬಾಲ್ ನಂತೆ ಕೊಂಬಿನಿಂದ ಎಸೆದಿವೆ. ಈ ಸಂದರ್ಭದಲ್ಲಿ ಬೇರೆ ಕೆಲ ಸಿಂಹಗಳು ಅಲ್ಲಿಗೆ ಬಂದು ಕಾಡೆಮ್ಮೆಗಳ ಹಿಂಡನ್ನು ಅಲ್ಲಿಂದ ಓಡಿಸಿವೆ.

ದಾಳಿಯ ಮೂರು ದಿನಗಳ ನಂತರ ಸಿಂಹವು ಸಾವನ್ನಪ್ಪಿದೆ ಎಂದು ಫೋಟೋಗ್ರಾಫರ್ ನೆಟಿಜನ್‌ಗಳಿಗೆ ಕಾಮೆಂಟ್‌ ಮೂಲಕ ತಿಳಿಸಿದ್ದಾರೆ.

ವೀಡಿಯೋ ನೋಡಿ: 

 

 

ಈ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ 1.5 ಮಿಲಿಯನ್‌ಗೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಸಿಂಹದ ಪರಿಸ್ಥಿತಿ ನೋಡಿ ಸೋಷಿಯಲ್ ಮೀಡಿಯಾ ಬಳಕೆದಾರರು ಬೇಸರ ವ್ಯಕ್ತಪಡಿಸಿದ್ದಾರೆ.

"ಈ ವಿಡಿಯೋ ನೋಡಲು ತುಂಬಾ ಕಷ್ಟವಾಗಿತ್ತು. ವಿಡಿಯೋ ಮಾಡುವಾಗ ಕಣ್ಣಾರೆ ಈ ದೃಶ್ಯ ಕಂಡ ನಿಮಗೆ ಎಷ್ಟು ನೋವಾಗಿರಬಹುದು ಎಂದು ಊಹಿಸಲು ಸಾಧ್ಯವಿಲ್ಲ. ಸಿಂಹ ಎಲ್ಲಾ ಕಷ್ಟಗಳನ್ನು ಮೀರಿ ನಿಲ್ಲುತ್ತದೆ ಎಂದು ಭಾವಿಸುತ್ತೇನೆ.  ವಿಡಿಯೋ ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು" ಎಂದು ಸೋಶಿಯಲ್ ಮೀಡಿಯಾ ಬಳಕೆದಾರರು ಬರೆದಿದ್ದಾರೆ.

ಇದನ್ನೂ ಓದಿ: Funny Monkey Video : ಬೈಕ್‌ ಕನ್ನಡಿಯಲ್ಲಿ ಮುಖ ನೋಡಿಕೊಂಡ ಈ ಮಂಗನ ರಿಯಾಕ್ಷನ್‌ ನೋಡಿ!

ಇನ್ನೊಬ್ಬರು "ಯಾಕೆ ಯಾರೂ ಸಿಂಹಕ್ಕೆ ಸಹಾಯ ಮಾಡುವುದಿಲ್ಲ.ಆದರೆ ಆ ಎಮ್ಮೆಗಳು ಅವನನ್ನು ತಿನ್ನಲು ಬಯಸಲಿಲ್ಲ, ಕೊಲ್ಲಲು ಬಯಸಿದ್ದವು. ಈ ಸಿಂಹವು ದಣಿದಿದೆ" ಎಂದು ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News