Company Giving Gold To Employee: ಇಂದಿನ ಕಾಲದಲ್ಲಿ ಸಣ್ಣ-ಪುಟ್ಟ ಕಂಪನಿಗಳು ಮತ್ತು ಕೆಲ ದೊಡ್ಡ ಕಂಪನಿಗಳೂ ಕೂಡ ತನ್ನ ನೌಕರರ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸುತ್ತಿವೆ. ಉತ್ತಮ ವೇತನ, ಉತ್ತಮ ಕೆಲಸದ ವಾತಾವರಣ ಹಾಗೂ ಉತ್ತಮ ಬಡ್ತಿಗಳು ಕಂಪನಿಗಳ ಈ ಆದ್ಯತೆಯಲ್ಲಿ ಸ್ಥಾನ ಪಡೆದುಕೊಂಡಿವೆ. ಕೆಲ ಸಂದರ್ಭಗಳಲ್ಲಿ ವೇತನದ ಜೊತೆಗೆ ಫುಡ್ ಕೂಪನ, ಪಾಸ್ ಹಾಗೂ ಇತರ ಹಲವು ಸೌಲಭ್ಯಗಳನ್ನು ಕಂಪನಿಗಳು ತಮ್ಮ ನೌಕರರಿಗೆ ನೀಡುತ್ತಿವೆ. ಆದರೆ, ಇಂಗ್ಲೆಂಡ್ ಮೂಲದ ಕಂಪನಿಯೊಂದು ತನ್ನ ನೌಕರರ ಕಾಳಜಿವಹಿಸುವ ನಿಟ್ಟಿನಲ್ಲಿ ಎರಡು ಅಡಿ ಮುಂದಕ್ಕೆ ಹೋಗಿದೆ ಎಂದರೆ ತಪ್ಪಾಗಲಾರದು. ಹೌದು, 'ಟೆಲಿಮನಿ' ಹೆಸರಿನ ಕಂಪನಿಯೊಂದು ತನ್ನ ನೌಕರರಿಗೆ ವೇತನದ ಬದಲು 'ಚಿನ್ನ' ಪಡೆದುಕೊಳ್ಳುವ ಅವಕಾಶ ನೀಡುತ್ತಿದೆ.
ಚಿನ್ನ ನೀಡಲು ಕಾರಣ?
ಲಂಡನ್ ನ CityAM.com ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಹಣಕಾಸು ಸೇವೆ ಒದಗಿಸುವ 'ಟೆಲಿಮನಿ' ಹೆಸರಿನ ಕಂಪನಿ ತನ್ನ ನೌಕರರ ವರ್ತಮಾನ ಹಾಗೂ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ವೇತನದ ಬದಲಿಗೆ ಚಿನ್ನವನ್ನು ನೀಡುತ್ತಿದೆ. ಆದರೆ, ಈ ಹೊಸ ವೇತನ ನೀತಿ ಇನ್ನೂ ಪರೀಕ್ಷೆಯ ಹಂತದಲ್ಲಿದೆ ಎಂಬುದು ಇಲ್ಲಿ ಉಲ್ಲೇಖನೀಯ. ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿರುವ 20 ಹಿರಿಯ ಅಧಿಕಾರಿಗಳಿಗೆ ಮಾತ್ರ ಈ ನೀತಿಯ ಲಾಭ ನೀಡಲಾಗುತ್ತಿದೆ. ಒಂದೊಮ್ಮೆ ಈ ಯೋಜನೆಯಿಂದ ನೌಕರರಿಗೆ ಲಾಭವಾದರೆ, ಕಂಪನಿ ಈ ನೀತಿಯನ್ನು ತನ್ನೆಲ್ಲಾ ನೌಕರರಿಗೆ ಜಾರಿಗೊಳಿಸುವ ಚಿಂತನೆ ನಡೆಸುತ್ತಿದೆ.
ಇದನ್ನೂ ಓದಿ-Twin Sisters: ಒಂದೇ ರೀತಿ ಕಾಣುವ ಅವಳಿ ಸಹೋದರಿಯರ ಮಕ್ಕಳೂ ಕೂಡ ..!
ಈ ಕುರಿತು CityAM.comಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೇಮರೂನ್ ಪ್ಯಾರಿ, 'ಕೋರೋನಾ ಮಹಾಮಾರಿಯ ಕಾರಣ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಹೀಗಿರುವಾಗ ನೌಕರರಿಗೆ ಪೌಂಡ್ ನಲ್ಲಿ ವೇತನ ನೀಡುವಲ್ಲಿ ಯಾವುದೇ ಅರ್ಥವಿಲ್ಲ. ದಿನ ಕಳೆದಂತೆ ಪೌಂಡ್ ಮೌಲ್ಯ ಕುಸಿಯುತ್ತಲೇ ಇದೆ' ಎಂದಿದ್ದಾರೆ. ಈ ಕುರಿತು ನೌಕರರನ್ನುದ್ದೇಶಿಸಿ ಮಾತನಾಡಿರುವ ಅವರು, ಪೌಂಡ್ ಸತತವಾಗಿ ಮಾರುಕಟ್ಟೆಯಲ್ಲಿ ತನ್ನ ಖರೀದಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಲೇ ಇದೆ . ಹೀಗಿರುವಾಗ ಹಣದುಬ್ಬರದ ವಿಷಯದಲ್ಲಿ ಚಿನ್ನ ನಮ್ಮ ನೌಕರರನ್ನು ಯಾವಾಗಲೂ ಒಂದು ಹೆಜ್ಜೆ ಮುಂದೆಯೇ ಇಡಲಿದೆ. ಇದಕ್ಕೂ ಮುಂದುವರೆದು ಮಾತನಾಡುವ ಪ್ಯಾರಿ, ಆರ್ಥಿಕ ಸಂಕಷ್ಟದಿಂದ ನಮ್ಮ ನೌಕರರನ್ನು ರಕ್ಷಿಸಲು ನಾವು ಚಿನ್ನ ನೀಡುವ ನೀತಿಯನ್ನು ಜಾರಿಗೊಳಿಸಿದ್ದೇವೆ. ಆದರೆ, ಒಂದು ವೇಳೆ ಯಾವುದೇ ಯಾವುದೇ ನೌಕರ ನಗದು ರೂಪದಲ್ಲಿ ತನ್ನ ವೇತನ ಪಡೆದುಕೊಳ್ಳಲು ಬಯಸಿದರೆ ಅವರಿಗೆ ಆ ಆಯ್ಕೆಯನ್ನು ಕೂಡ ನೀಡಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ-Viral Video Today: ಹಾವಿನ ಜೊತೆ ಸುಂದರಿಯ ಚೆಲ್ಲಾಟ, ನಂತರ ನಡೆದಿದ್ದು ಯುವತಿ ಲೈಫಲ್ಲಿ ಮರೆಯಲ್ಲ
ಹೊಸ ವೇತನ ನೀತಿ ಕುರಿತು ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ
ಕಂಪನಿಯ ಈ ಹೊಸ ವೇತನ ನೀತಿಯ ಕುರಿತಾದ ಸುದ್ದಿ ಪ್ರಕಟವಾಗುತ್ತಿದ್ದಂತೆ, ಕಂಪನಿ ನಿರ್ಧಾರದ ಬಗ್ಗೆ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಜನರು ಕಂಪನಿಯ ಈ ನೂತನ ವೇತನ ನೀತಿಗೆ ಭೇಷ್ ಎನ್ನುತ್ತಿದ್ದಾರೆ. ಇನ್ನೊಂದೆಡೆ ಆರ್ಥಿಕ ಸಂಕಷ್ಟದಿಂದ ಪಾರಾಗಲು ಇದೊಂದು ಉತ್ತಮ ಮಾರ್ಗ ಎಂದು ಆರ್ಥಿಕ ತಜ್ಞರು ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.