Couple video : ಪ್ರತಿದಿನ ಒಂದಲ್ಲ ಒಂದು ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿರುತ್ತದೆ.ಕಳೆದ ಕೆಲವು ದಿನಗಳಿಂದ ಇಂತಹದೊಂದು ವಿಡಿಯೋ ನೆಟ್ಟಿಗರ ಗಮನ ಸೆಳೆಯುತ್ತಿದೆ.ಈ ವಿಡಿಯೋದಲ್ಲಿ ಹೆಣ್ಣು ಮತ್ತು ಗಂಡಿನ ಜೋಡಿಯನ್ನು ಕಾಣಬಹುದು. ಮಧ್ಯರಾತ್ರಿಯಲ್ಲಿ ಈ ಜೋಡಿ ಮಾರ್ಗ ಮಧ್ಯೆ ಇರುವ ವಿಡಿಯೋ ಅದು. ಈ ವಿಡಿಯೋ ಅತಿ ವೇಗವಾಗಿ ವೈರಲ್ ಆಗಿದೆ.
ವಿಡಿಯೋದಲ್ಲಿ ದಂಪತಿ ಬೀದಿಯಲ್ಲಿ ಸಾಂದರ್ಭಿಕವಾಗಿ ನೃತ್ಯ ಮಾಡುತ್ತಿರುವುದನ್ನು ಕಾಣಬಹುದು. ವಿಡಿಯೋ ನೋಡಿದ ನೆಟಿಜನ್‌ಗಳು ಈ ದಂಪತಿ ಬಗ್ಗೆ ಫುಲ್ ಫಿದಾ ಆಗಿದ್ದಾರೆ. ನೃತ್ಯದ ಮೂಲಕ ಇಬ್ಬರೂ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ ಎನ್ನುವ ಅಭಿಪ್ರಾಯ ಹಲವರದ್ದು. ಇನ್ನು ಕೆಲವರು ಕಲೆ ಪ್ರದರ್ಶಿಸಲು ವೇದಿಕೆಯೇ ಬೇಕಾಗಿಲ್ಲ ಎಂದು ಹೇಳಿದ್ದಾರೆ.ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ಟ್ರೆಂಡ್ ಆಗಿದೆ.
ಇದನ್ನೂ ಓದಿ : Viral video: ಒಂದಲ್ಲ..ಎರಡಲ್ಲ..ಆಕಾಶದಲ್ಲಿ ಗೋಚರವಾಯ್ತು ಏಳು ಗ್ರಹಗಳು! ಅದ್ಭುತ ದೃಶ್ಯ ಕಣ್ತುಂಬಿಕೊಂಡ ನೆಟ್ಟಿಜನ್‌ಗಳು
ಈ ವೀಡಿಯೊವನ್ನು ಪ್ರೇರಣಾ ಮಹೇಶ್ವರಿ ಎಂಬ ಬಳಕೆದಾರರು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿದ್ದಾರೆ. ದಂಪತಿಗಳು ಬೀದಿ ದೀಪದ ಕೆಳಗೆ ಆರಾಮವಾಗಿ ನೃತ್ಯ ಮಾಡುತ್ತಿರುವುದು ಕಂಡುಬರುತ್ತದೆ.ಆದ್ರೆ ಇದನ್ನು ಯಾರೋ ವಿಡಿಯೋ ಮಾಡುತ್ತಿದ್ದಾರೆ ಎನ್ನುವ ಕಲ್ಪನೆ ಕೂಡಾ ಅವರಿಗೆ ಇರಲಿಲ್ಲ.ಈ ವೀಡಿಯೊವನ್ನು ಯಾವುದೇ ಬಿಲ್ಡಿಂಗ್ ಮೇಲಿಂದ ಮಾಡಲಾಗಿದೆ.
This ❤️🫶🏻 pic.twitter.com/msaur0JvyF
— Prerna Maheshwari (@prernadaga21) September 5, 2022
ಇದನ್ನೂ ಓದಿ : Viral Video: ಅಂಗಡಿ ಮಾಲೀಕನಿಗೆ ಹಿಗ್ಗಾಮುಗ್ಗಾ ಥಳಿಸಿ ʼರೀಚಾರ್ಜ್ʼ ಮಾಡಿದ ಸ್ಕೂಲ್ ಹುಡ್ಗೀರು!
ಈ 16 ಸೆಕೆಂಡ್ ವೀಡಿಯೋವನ್ನು ಬಹಳಷ್ಟು ಮಂದಿ ಇಷ್ಟಪಟ್ಟಿದ್ದಾರೆ. ವಿಡಿಯೋವನ್ನು ಸಾವಿರಾರು ಮಂದಿ ರಿಟ್ವೀಟ್ ಕೂಡಾ ಮಾಡಿದ್ದಾರೆ. ಇನ್ನು ವೀಡಿಯೊ ಕುರಿತು ಕಾಮೆಂಟ್ ಮಾಡಿದ ನೆಟ್ಟಿಗರು, ಇಬ್ಬರೂ ಯಾವುದೋ ನೃತ್ಯ ಕಾರ್ಯಕ್ರಮಕ್ಕೆ ಅಭ್ಯಾಸ ಮಾಡುತ್ತಿರುವುದರಲ್ಲಿ ತಲ್ಲೀನರಾಗಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.