Viral video : ಆನೆ ನೀರು ಕುಡಿಯುತ್ತಿದ್ದ ವೇಳೆ ಒಮ್ಮೆಲೇ ಮೇಲೆರಗಿದ ಮೊಸಳೆ..! ಮುಂದೆ..?

ತನ್ನ ಗುಂಪಿನೊಂದಿಗೆ ಬಂದು ನೀರು ಕುಡಿಯುತ್ತಿರುವ ಆನೆ, ಹೀಗೆ ಮೊಸಳೆ ದಾಳಿ ಮಾಡಿ ಬಿಡಬಹುದು ಎಂದು ಕಲ್ಪಿಸಿಯೂ ಇರಲಿಕ್ಕಿಲ್ಲ.  Wildlife_stories_ ಹೆಸರಿನ Instagram ಖಾತೆಯಲ್ಲಿ ಈ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ.

Written by - Ranjitha R K | Last Updated : Jun 8, 2022, 03:00 PM IST
  • ಆನೆ ಮೇಲೆ ಮೊಸಳೆ ದಾಳಿ
  • ಮರಿಯ ರಕ್ಷಣೆಗೆ ನಿಂತ ಇತರ ಆನೆ
  • ವೈರಲ್ ಆಯಿತು ವಿಡಿಯೋ
Viral video : ಆನೆ  ನೀರು ಕುಡಿಯುತ್ತಿದ್ದ ವೇಳೆ ಒಮ್ಮೆಲೇ ಮೇಲೆರಗಿದ ಮೊಸಳೆ..! ಮುಂದೆ..?  title=
Elephant viral video (photo instagram)

ಬೆಂಗಳೂರು : ವನ್ಯಜೀವಿಗಳಿಗೆ ಸಂಬಂಧಿಸಿದ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಬಹಳಷ್ಟು ಸಿಗುತ್ತವೆ. ಅವುಗಳಲ್ಲಿ ಕೆಲವು ವಿಡಿಯೋಗಳು ಭಯಾನಕವಾಗಿರುತ್ತವೆ. ಯಾಕೆಂದರೆ ಎರಡು ಪ್ರಾಣಿಗಳು ಘನಘೋರ ಯುದ್ದ ಮಾಡುವುದನ್ನು ಇಲ್ಲಿ ನೋಡಬಹುದಾಗಿರುತ್ತದೆ. ಇನ್ನು ಕೆಲವು ವಿಡಿಯೋಗಳನ್ನು   ನೋಡುತ್ತಿದ್ದರೆ ಪದೇ ಪದೇ ನೋಡುತ್ತಿರುವ ಮನಸ್ಸಾಗುತ್ತದೆ. ಕಾಡುಪ್ರಾಣಿಗಳ ಪ್ರತಿಯೊಂದು ಕ್ರಿಯೆಯೂ ಕೂಡಾ ನೋಡುಗರಿಗೆ ಖುಷಿ ನೀಡುತ್ತದೆ. 

ಇದೀಗ ಇಂಥದ್ದೇ ವಿಡಿಯೋವೊಂದು ಹೊರ ಬಿದ್ದಿದೆ. ಇದರಲ್ಲಿ ಕಾಡಿನ ಕೊಳದಲ್ಲಿ  ನೀರು ಕುಡಿಯಲು ಬಂದಿರುವ ಆನೆಗಳ ಗುಂಪನ್ನು ಕಾಣಬಹುದು. ಒಟ್ಟಾಗಿ ಬಂದು ಆನೆಗಳು ತಮ್ಮ ಪಾಡಿಗೆ ನೀರು ಕುಡಿಯುತ್ತಾ ಇರುತ್ತವೆ. ಅಷ್ಟರಲ್ಲಿಯೇ ನೀರಿನಲ್ಲಿ ಅವಿತುಕೊಂಡಿದ್ದ ಮೊಸಳೆ ಅಲ್ಲಿ ಪ್ರತ್ಯಕ್ಷವಾಗಿ ಬಿಡುತ್ತದೆ.  ತನ್ನ ಬಾಯಾರಿಕೆ ನೀಗಿಸುತ್ತಿದ್ದ ಆನೆಯ ಸೊಂಡಿಲಿಗೆ ಮೊಸಳೆ ಬಾಯಿ ಹಾಕಿ ಬಿಡುತ್ತದೆ.

ಇದನ್ನೂ ಓದಿ : Viral Video: ಅತಿವೇಗದಲ್ಲಿ ಸ್ಕೂಟಿಗೆ ಬೈಕ್ ಡಿಕ್ಕಿ, ಭಯಾನಕ ವಿಡಿಯೋ ವೈರಲ್

ಆನೆಯೊಂದಿಗೆ ಕಾಳಗಕ್ಕಿಳಿದ ಮೊಸಳೆ : 
ತನ್ನ ಗುಂಪಿನೊಂದಿಗೆ ಬಂದು ನೀರು ಕುಡಿಯುತ್ತಿರುವ ಆನೆ, ಹೀಗೆ ಮೊಸಳೆ ದಾಳಿ ಮಾಡಿ ಬಿಡಬಹುದು ಎಂದು ಕಲ್ಪಿಸಿಯೂ ಇರಲಿಕ್ಕಿಲ್ಲ. ಆದರೆ ಆನೆ ಕೂಡಾ ತನ್ನ ಸೊಂಡಿಲಿನಲ್ಲಿ ಸಿಲುಕಿಕೊಂಡಿದ್ದ ಮೊಸಳೆಯನ್ನು ಕಿತ್ತು ಎಸೆಯಲು ಪ್ರಯತ್ನಿಸುತ್ತದೆ.  ಮೊಸಳೆ ಆನೆಯ ಸೊಂಡಿಲಿನ ಮೇಲೆ ದಾಳಿ ಮಾಡಿರುವುದನ್ನು ಗುಂಪಿನ ಇತರ ಆನೆಗಳು ಕೂಡಾ ಸಹಿಸುವುದಿಲ್ಲ. ಆ ಆನೆಗಳು ಕೂಡಾ ಮೊಸಳೆಯ ಮೇಲೆ ದಾಳಿ ಮಾಡಿ ಬಿಡುತ್ತವೆ. ಹೀಗೆ ಎಲ್ಲಾ ಆನೆಗಳ ಒಗ್ಗಟ್ಟಿನಿಂದಾಗಿ ಮೊಸಳೆಯ ಬಾಯಿಯಿಂದ ಮರಿ  ಸುರಕ್ಷಿತವಾಗಿ ಹೊರ ಬರಲು ಸಾಧ್ಯವಾಗುತ್ತದೆ. 

 

ಇದನ್ನೂ ಓದಿ : Thirsty Cobra Video: ಬಾಯಾರಿಕೆಯಿಂದ ಬಳಲುತ್ತಿದ್ದ ಕಿಂಗ್ ಕೋಬ್ರಾಗೆ ನೀರು ಕುಡಿಸಿದ ಭೂಪ

Wildlife_stories_ ಹೆಸರಿನ Instagram ಖಾತೆಯಲ್ಲಿ ಈ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ. ಈ  ವೀಡಿಯೊ ಇದುವರೆಗೆ ಸಾವಿರಾರು ವ್ಯೂ ವ್ಸ್ ಮತ್ತು ಲೈಕ್‌ಗಳನ್ನು ಪಡೆದುಕೊಂಡಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News