Video: ನದಿಗೆ ಹಾರಿ ಪ್ರಾಣಬಿಟ್ಟ ಮಾಲೀಕ, ಚಪ್ಪಲಿ ಬಳಿ ಕಾದು ಕುಳಿತ ನಾಯಿ.. ನಿಯತ್ತು ಅಂದ್ರೆ ಇದಲ್ಲವೇ! ಕಣ್ಣೀರು ತರಿಸುತ್ತೆ ಶ್ವಾನದ ರೋಧನೆ

Dog waiting for owner video: ನದಿಗೆ ಹಾರಿ ಪ್ರಾಣಬಿಟ್ಟ ಮಾಲೀಕರ ಚಪ್ಪಲಿ ಬಳಿ ಕಾದು ಕುಳಿತ ಶ್ವಾನದ ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ. ಈ ನಾಯಿಯ ಮೂಕ ರೋಧನೆ ಕಣ್ಣೀರು ತರಿಸುವಂತಿದೆ.   

Written by - Chetana Devarmani | Last Updated : Jul 18, 2023, 06:20 PM IST
  • ನದಿಗೆ ಹಾರಿ ಪ್ರಾಣಬಿಟ್ಟ ಮಾಲೀಕ
  • ಚಪ್ಪಲಿ ಬಳಿ ಕಾದು ಕುಳಿತ ನಾಯಿ
  • ಕಣ್ಣೀರು ತರಿಸುತ್ತೆ ಶ್ವಾನದ ರೋಧನೆ
Video: ನದಿಗೆ ಹಾರಿ ಪ್ರಾಣಬಿಟ್ಟ ಮಾಲೀಕ, ಚಪ್ಪಲಿ ಬಳಿ ಕಾದು ಕುಳಿತ ನಾಯಿ.. ನಿಯತ್ತು ಅಂದ್ರೆ ಇದಲ್ಲವೇ! ಕಣ್ಣೀರು ತರಿಸುತ್ತೆ ಶ್ವಾನದ ರೋಧನೆ   title=
dog

Dog Viral Video: ನಾವು ಸಾಕುಪ್ರಾಣಿಗಳನ್ನು ಹೊಂದಲು ಅನೇಕರು ಇಷ್ಟಪಡುತ್ತಾರೆ. ನಾಯಿ, ಬೆಕ್ಕು ಮತ್ತು ಪಕ್ಷಿಗಳನ್ನು ಮನೆಯಲ್ಲಿ ಸಾಕುತ್ತಾರೆ. ನಮ್ಮ ಸಾಕುಪ್ರಾಣಿಗಳು ನಮ್ಮ ಅತ್ಯುತ್ತಮ, ಆತ್ಮೀಯ ಸ್ನೇಹಿತರು. ಕುಟುಂಬದ ಅವಿಭಾಜ್ಯ ಅಂಗವಾಗಿ ಬಿಡುತ್ತವೆ. ಅದರಲ್ಲೂ ಶ್ವಾನ ನಿಯತ್ತಿಗೆ ಉದಾಹರಣೆ. ನಾಯಿಯ ಪ್ರೀತಿಗೆ ಈ ವಿಡಿಯೋ ಸಾಕ್ಷಿಯಾಗಿದೆ. ಈ ನಾಯಿಯ ವಿಡಿಯೋ ಕಲ್ಲು ಮನಸ್ಸನ್ನೂ ಕರಗಿಸುವಂತಿದೆ. ಎಂಥವರ ಕಣ್ಣಾಲೆಗಳು ಸಹ ಒದ್ದೆಯಾಗುತ್ತವೆ. 

ಆಂಧ್ರಪ್ರದೇಶದ ಅಂಬೇಡ್ಕರ್ ಕೋನಸೀಮಾ ಜಿಲ್ಲೆಯಲ್ಲಿ ಗೋದಾವರಿ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಅವರ ಸಾಕು ನಾಯಿ ಸೇತುವೆಯ ಮೇಲೆ ಮಹಿಳೆಯ ಬಿಟ್ಟ ಪಾದರಕ್ಷೆಗಳ ಬಳಿ ಕಾಯುತ್ತ ಕುಳಿತಿದೆ. ಈ ಶ್ವಾನದ ಮೂಕ ರೋಧನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಶ್ರೀಲಕ್ಷ್ಮಿ ಮುತ್ತೇವಿ @SriLakshmi_10 ಎಂಬ ಟ್ವಿಟರ್‌ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. “ಭಾನುವಾರ ರಾತ್ರಿ 8 ನೇ ಪಿಲ್ಲರ್‌ನಲ್ಲಿರುವ ಸೇತುವೆಯ ನಡುವಿನ ಗೋದಾವರಿ ನದಿಗೆ ಹಾರಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡರು. ಅವರ ಸಾಕು ನಾಯಿ ರಾತ್ರಿಯಿಡೀ ಮಾಲೀಕರಿಗಾಗಿ ಕಾಯುತ್ತಿತ್ತು. ಪಾದರಕ್ಷೆಗಳ ಬಳಿ ಕುಳಿತು ದಾರಿ ನೋಡುತ್ತಿತ್ತು. ಸಾಕು ಪ್ರಾಣಿ ಬೊಗಳುವುದನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ" ಎಂದು ಅವರು ಬರೆದಿದ್ದಾರೆ.

ಇದನ್ನೂ ಓದಿ: Sonia Gandhi Dance: ರೈತರೊಂದಿಗೆ ಸೋನಿಯಾ ಗಾಂಧಿ ಡ್ಯಾನ್ಸ್, ವಿಡಿಯೋ ವೈರಲ್

ವರದಿಗಳ ಪ್ರಕಾರ, 22 ವರ್ಷದ ಯುವತಿ ಈ ನಾಯಿಯನ್ನು ಸಾಕಿದ್ದರು. ಭಾನುವಾರ ರಾತ್ರಿ (ಜುಲೈ 16) ತನ್ನ ಚಪ್ಪಲಿಯನ್ನು ಬಿಟ್ಟು ಸೇತುವೆಯಿಂದ ಜಿಗಿದಿದ್ದಾರೆ. ನಾಯಿ ಅವಳಿಗಾಗಿ ಗಂಟೆಗಟ್ಟಲೆ ಕಾದಿತ್ತು ಮತ್ತು ಅವಳು ಬಂದು ಕರೆದುಕೊಂಡು ಹೋಗುತ್ತಾಳೆ ಎಂದು ಆಶಿಸುತ್ತಾ ಮಲಗಿತ್ತು. ಸಾಕು ನಾಯಿ ತನ್ನ ಮಾಲೀಕರ ಪಾದರಕ್ಷೆಗಳ ಬಳಿ ಇರುವ ಹೃದಯವಿದ್ರಾವಕ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ವರದಿಗಳ ಪ್ರಕಾರ, ಮಹಿಳೆ ಭಾನುವಾರ ಸಂಜೆ ಸೇತುವೆಯಿಂದ ನದಿಗೆ ಹಾರಿದ್ದಾಳೆ. ಸೂರ್ಯಾಸ್ತವನ್ನು ಆನಂದಿಸಲು ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಈ ಪ್ರದೇಶಕ್ಕೆ ಸೇರುತ್ತಿದ್ದಾಗ ಈ ಘಟನೆ ಸಂಭವಿಸಿದೆ. 

ಮಹಿಳೆ ತನ್ನ ನಾಯಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ನದಿಗೆ ಹಾರಿದ್ದಾಳೆ. ದಾರಿಹೋಕರು ಕೂಗಿದಾಗ ದೋಣಿಯಲ್ಲಿದ್ದ ಮೀನುಗಾರರು ಅವಳನ್ನು ಉಳಿಸಲು ಪ್ರಯತ್ನಿಸಿದರು, ಆದರೆ ಅವಳು ನದಿಯಲ್ಲಿ ಕೊಚ್ಚಿಹೋದಳು.

 

 

ಇದು ಜನರಿಗೆ ಆಘಾತಕಾರಿ ಕ್ಷಣವಾಗಿತ್ತು ಮತ್ತು ಸೇತುವೆಯ ಉದ್ದಕ್ಕೂ ಉದ್ರಿಕ್ತವಾಗಿ ಚಲಿಸುವ, ನದಿಯತ್ತ ನೋಡುತ್ತಿದ್ದ ಬಡ ಪ್ರಾಣಿಯ ಮೂಕ ರೋಧನೆ ಹೃದಯ ವಿದ್ರಾವಕವಾಗಿತ್ತು. ಅದು ಮತ್ತೆ ತನ್ನ ಯಜಮಾನನ ಪಾದರಕ್ಷೆಯ ಬಳಿ ಕುಳಿತು ರಾತ್ರಿಯಿಡೀ ಕಾದು ಮಲಗಿತು. ಸೋಮವಾರ ಬೆಳಿಗ್ಗೆ, ಅದು ಅಂತಿಮವಾಗಿ ಯುವತಿಯ ತಾಯಿಯೊಂದಿಗೆ ಹೊರಟುಹೋಯಿತು.

ಯುವತಿಯನ್ನು ಯಾನಂ ಫೆರಿ ರಸ್ತೆ ನಿವಾಸಿ ಮಂಡಂಗಿ ಕಾಂಚನಾ (22) ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ಕಾರಣವೇನು ಎಂಬುದನ್ನು ತನಿಖೆ ನಡೆಸಲಾಗುತ್ತಿದೆ ಎಂದು ಯಾನಂ ಪೊಲೀಸರು ತಿಳಿಸಿದ್ದಾರೆ. ಯಾನಂ ಆಂಧ್ರಪ್ರದೇಶದೊಳಗಿರುವ ಪುದುಚೇರಿಯ ಕೇಂದ್ರಾಡಳಿತ ಪ್ರದೇಶವಾಗಿದೆ.

ಇದನ್ನೂ ಓದಿ: Viral Video: ಮಗನ ಶಿಕ್ಷಣಕ್ಕೆ ಹಣ ಹೊಂದಿಸಲು ಆತ್ಮಹತ್ಯೆಗೆ ಶರಣಾದ ತಾಯಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News