ಐಸ್ ಕ್ರೀಂ, ಐಸ್ ಕ್ಯಾಂಡಿ ಎಷ್ಟು ಜನರಿಗೆ ಇಷ್ಟ ? ಅದನ್ನು ತಯಾರು ಮಾಡುವ ವಿಡಿಯೋ ಕೂಡಾ ಒಮ್ಮೆ ನೋಡಿ

Ice candy making video : ಇತ್ತೀಚಿನ ದಿನಗಳಲ್ಲಿ ಐಸ್ ಕ್ರೀಂನಂತೆ ಐಸ್ ಕ್ಯಾಂಡಿಗಳು ಕೂಡಾ ನೂರಾರು ಫ್ಲೇವರ್ ಗಳಲ್ಲಿ ಲಭ್ಯವಿದೆ.  ಅಲ್ಲದೆ ಈ ಕ್ಯಾಂಡಿಗಳಿಗೂ ಬೇರೆ ಬೇರೆ ರೀತಿಯ ಹೆಸರನ್ನಿಟ್ಟು ಮಕ್ಕಳನ್ನು ಆಕರ್ಷಿಸಲಾಗುತ್ತದೆ.

Written by - Ranjitha R K | Last Updated : Nov 27, 2023, 02:42 PM IST
  • ಐಸ್ ಕ್ರೀಂ ಐಸ್, ಕ್ಯಾಂಡಿಗಳನ್ನು ಇಷ್ಟ ಪಡದವರು ಯಾರಿದ್ದಾರೆ?
  • ಐಸ್ ಕ್ರೀಂನಂತೆ ಐಸ್ ಕ್ಯಾಂಡಿಗಳು ಕೂಡಾ ನೂರಾರು ಫ್ಲೇವರ್ ಗಳಲ್ಲಿ ಲಭ್ಯವಿದೆ.
  • ಈ ಕ್ಯಾಂಡಿಗಳನ್ನು ಹೇಗೆ ತಯಾರಿಸಲಾಗುತ್ತದೆ ಇಲ್ಲಿದೆ ವಿಡಿಯೋ
ಐಸ್ ಕ್ರೀಂ, ಐಸ್ ಕ್ಯಾಂಡಿ ಎಷ್ಟು ಜನರಿಗೆ ಇಷ್ಟ ? ಅದನ್ನು ತಯಾರು ಮಾಡುವ ವಿಡಿಯೋ ಕೂಡಾ ಒಮ್ಮೆ ನೋಡಿ  title=

Ice candy making video : ಐಸ್ ಕ್ರೀಂ ಐಸ್,  ಕ್ಯಾಂಡಿಗಳನ್ನು ಇಷ್ಟ ಪಡದವರು ಯಾರಿದ್ದಾರೆ? ಮಕ್ಕಳಿಂದ ಮುದುಕರವರೆಗೆ ಬಹುತೇಕ ಮಂದಿ ಐಸ್ ಕ್ರೀಂ ಐಸ್, ಕ್ಯಾಂಡಿಗಳನ್ನು ಇಷ್ಟ ಪಟ್ಟು ತಿನ್ನುತ್ತಾರೆ. ಇತ್ತೀಚಿನ ದಿನಗಳಲ್ಲಿ ಐಸ್ ಕ್ರೀಂನಂತೆ ಐಸ್ ಕ್ಯಾಂಡಿಗಳು  ಕೂಡಾ ನೂರಾರು ಫ್ಲೇವರ್ ಗಳಲ್ಲಿ ಲಭ್ಯವಿದೆ. ಅಲ್ಲದೆ ಈ ಕ್ಯಾಂಡಿಗಳಿಗೂ ಬೇರೆ ಬೇರೆ ರೀತಿಯ ಹೆಸರನ್ನಿಟ್ಟು ಮಕ್ಕಳನ್ನು ಆಕರ್ಷಿಸಲಾಗುತ್ತದೆ. ಅದರಲ್ಲಿ ಹಣ್ಣುಗಳ ಅಂಶವಿದೆ ಎಂದು ಹೇಳುವ ಮೂಲಕ ಹೆಲ್ದಿ ಕಾನ್ಸೆಪ್ಟ್ ಅನ್ನು ಕೂಡಾ ಹಾಕಲಾಗುತ್ತದೆ. 

ಹಿಂದೆ ಕ್ಯಾಂಡಿ ಎಂದ ಕೂಡಲೇ ಆರೆಂಜ್ ಅಥವಾ ಬೆಲ್ಲ ಕ್ಯಾಂಡಿ ಹೀಗೆ ಎರಡೇ ಫ್ಲೇವರ್ ಇರುತ್ತಿತ್ತು. ಈಗ ಹಾಗಲ್ಲ ಮ್ಯಾಂಗೋ, ಗ್ರೇಪ್ಸ್, ಬೇರಿಸ್, ಚೋಕೊಬಾರ್, ಚಾಕಲೇಟ್ ಹೀಗೆ ಜ್ಯೂಸ್ ಗಳಂತೆ ಕ್ಯಾಂಡಿಗಳಲ್ಲೂ ಬಹಳಷ್ಟು ವಿಧ. ಇನ್ನು ಕೆಲವು ಕ್ಯಾಂಡಿ ಗಳಲ್ಲಿ ಒಣ ಹಣ್ಣುಗಳನ್ನು ಕೂಡಾ ಹಾಕಲಾಗುತ್ತದೆ. ರುಚಿ ಇದೆ ಎನ್ನುವ ಕಾರಣಕ್ಕೆ ನಾವು ಕೂಡಾ ಈ ಕ್ಯಾಂಡಿಗಳನ್ನು ಚಪ್ಪರಿಸಿಕೊಂಡು ತಿನ್ನುತ್ತೇವೆ. ಆದರೆ, ಈ ಕ್ಯಾಂಡಿಗಳನ್ನು ಹೇಗೆ ತಯಾರಿಸಲಾಗುತ್ತದೆ ಎನ್ನುವುದನ್ನು ಎಂದಾದರೂ ಯೋಚಿಸಿದ್ದೀರಾ ?  

ಇದನ್ನೂ ಓದಿ : IQ Test : ಸಿಂಹದ ಮುಖದಲ್ಲಿ ಅಡಗಿದೆ ಇಲಿ.. ಚುರುಕು ಬುದ್ಧಿಯಿದ್ದರೆ ಉತ್ತರಿಸಲು 5 ಸೆಕೆಂಡ್‌ ಸಾಕು!

ಇಲ್ಲಿ ದೊಡ್ಡದಾದ ಕ್ಯಾನಿನಲ್ಲಿ ನೀರನ್ನು ತೆಗೆದುಕೊಳ್ಳಲಾಗಿದೆ. ಆ ನೀರಿಗೆ ಫ್ಲೇವರ್ಡ್ ಕಲರ್ ಸೇರಿಸಲಾಗುತ್ತದೆ. ಅಲ್ಲದೆ ಮತ್ತೆ ಅದನ್ನು ದಪ್ಪಗೊಳಿಸಲು ದ್ರಾವಣವನ್ನು ಸೇರಿಸಲಾಗುತ್ತದೆ. ಇದರ ಜೊತೆಗೆ ಸಿಹಿಗಾಗಿ ಸಕ್ಕರೆ. ಈ ಎಲ್ಲಾ  ವಸ್ತುಗಳನ್ನು ಮಿಶ್ರಣ ಮಾಡಿ ಕ್ಯಾಂಡಿ ಅಚ್ಚಿನಲ್ಲಿ ಹುಯ್ಯಲಾಗುತ್ತದೆ. ನಂತರ ಲಕೋಟೆಯಲ್ಲಿ ನೀಟಾಗಿ ಪ್ಯಾಕ್ ಆಗಿ ಬರುತ್ತದೆ.  

ಐಸ್ ಕ್ಯಾಂಡಿ ತಯಾರಿಸುವ ವಿಡಿಯೋ ಇಲ್ಲಿದೆ. :

 

ಇದನ್ನೂ ಓದಿ : ನಡು ರಸ್ತೆಯಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿರುವ ಲಲನೆಯರು, ತುಂಟ ನಾಯಿ ಮಾಡಿದ್ದೇನು ನೀವೇ ನೋಡಿ!

ಅಲ್ಲಿಗೆ ಹೊರಗಡೆ ಬಹಳ ನೀಟಾಗಿ ಕಾಣುವಂತೆ ಬಣ್ಣದ ಐಸ್ ಕಡ್ಡಿ ನಮ್ಮ ಕೈ ಸೇರುತ್ತದೆ. ಎಷ್ಟೋ ಬಾರಿ ಅದರ ಪ್ಯಾಕಿಂಗ್ ಗೆ ಮರುಳಾಗಿಯೇ ನಾವು ಬಹಳ ಹೈಜೀನ್ ಎಂದುಕೊಂಡು ಖರೀದಿಸುತ್ತೇವೆ. ಮಕ್ಕಳಿಗೂ ತಿನ್ನಲು ನೀಡುತ್ತೇವೆ. 

ಈ ವಿಡಿಯೋವನ್ನು foodie_incarnate ಎನ್ನುವ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಲಾಗಿದೆ. ಈ  ವೀಡಿಯೊ ಶೇರ್ ಆಗುತ್ತಿದ್ದಂತೆಯೇ ಅನೇಕ ಮಂದಿ ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News