ಇಂಧನ ಏರಿಕೆ ವಿಷಯದಲ್ಲಿ ತಪ್ಪು ಮಾಹಿತಿಯನ್ನು ಬಿತ್ತರಿಸುವುದು ಕಾಂಗ್ರೆಸ್ ಪಕ್ಷದ ಕಪಟ ನಾಟಕ- ಯತ್ನಾಳ್ ವಾಗ್ದಾಳಿ 

ಇಂಧನ ಏರಿಕೆ ವಿಷಯದಲ್ಲಿ ಸುಳ್ಳಿನ ಸರಮಾಲೆ/ತಪ್ಪು ಮಾಹಿತಿಯನ್ನು ಬಿತ್ತರಿಸುವುದು ಕಾಂಗ್ರೆಸ್ ಪಕ್ಷದ ಕಪಟ ನಾಟಕವಾಗಿದೆ ಎಂದು ಬಿಜೆಪಿ ಪಕ್ಷದ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.

Last Updated : Jun 17, 2024, 12:23 PM IST
  • ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಕೇಂದ್ರ ಸರ್ಕಾರ ವಿಧಿಸುವ ಅಬಕಾರಿ ಸುಂಕ [Excise Duty] ರೂ.19.90/- (ಪ್ರತಿ ಲೀಟರ್ ಮೇಲೆ) ಆಗಿದೆ
  • ಅದೇ ಕಾಂಗ್ರೆಸ್ ಸರ್ಕಾರದ VAT 24.17/- (ಪ್ರತಿ ಲೀಟರ್) ಆಗಿದೆ
  • ಪೆಟ್ರೋಲ್ ಮೇಲೆ ರಾಜ್ಯ ಸರ್ಕಾರ ಹಾಕುವ VAT ಕೇಂದ್ರ ಸರ್ಕಾರದ ಎಕ್ಸೈಸ್ ಡ್ಯೂಟಿ ಕ್ಕಿಂತ ಹೆಚ್ಚಾಗಿದೆ ಎಂದು ಅವರು ಕಿಡಿ ಕಾರಿದ್ದಾರೆ
 ಇಂಧನ ಏರಿಕೆ ವಿಷಯದಲ್ಲಿ ತಪ್ಪು ಮಾಹಿತಿಯನ್ನು ಬಿತ್ತರಿಸುವುದು ಕಾಂಗ್ರೆಸ್ ಪಕ್ಷದ ಕಪಟ ನಾಟಕ- ಯತ್ನಾಳ್ ವಾಗ್ದಾಳಿ  title=

ಬೆಂಗಳೂರು: ಇಂಧನ ಏರಿಕೆ ವಿಷಯದಲ್ಲಿ ಸುಳ್ಳಿನ ಸರಮಾಲೆ/ತಪ್ಪು ಮಾಹಿತಿಯನ್ನು ಬಿತ್ತರಿಸುವುದು ಕಾಂಗ್ರೆಸ್ ಪಕ್ಷದ ಕಪಟ ನಾಟಕವಾಗಿದೆ ಎಂದು ಬಿಜೆಪಿ ಪಕ್ಷದ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.

ಪೆಟ್ರೋಲ್/ಡೀಸೆಲ್ ದರ ಏರಿಕೆಯನ್ನು ಸಮರ್ಥಿಸಿಕೊಂಡಿರುವ ಮಾನ್ಯ ಸಚಿವರಾದ ಶ್ರೀ ಎಂ.ಬಿ.ಪಾಟೀಲರು ಜನರಿಗೆ ಗ್ಯಾರಂಟಿ ನೀಡಲು ಈ ರೀತಿಯಾದ ದರ ಏರಿಕೆ ಅನಿವಾರ್ಯ ಎಂದು ಹೇಳಿದ್ದಾರೆ; ಮುಂದುವರೆದು, ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಪೆಟ್ರೋಲ್/ಡೀಸೆಲ್ ದರ ಕಡಿಮೆ ಎಂದು ತಪ್ಪು ಮಾಹಿತಿ ನೀಡಿದ್ದಾರೆ ಅಂಡಮಾನ್ ದ್ವೀಪದಲ್ಲಿ ಪೆಟ್ರೋಲ್ ದರ ಅತ್ಯಂತ ಕಡಿಮೆ ಇದೆ ಹಾಗೂ ಆಂಧ್ರ ಮತ್ತು ತೆಲಂಗಾಣದಲ್ಲಿ ಅತ್ಯಂತ ಹೆಚ್ಚಾಗಿದೆ.ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಕೇಂದ್ರ ಸರ್ಕಾರ ವಿಧಿಸುವ ಅಬಕಾರಿ ಸುಂಕ [Excise Duty] ರೂ.19.90/- (ಪ್ರತಿ ಲೀಟರ್ ಮೇಲೆ) ಆಗಿದೆ, ಅದೇ ಕಾಂಗ್ರೆಸ್ ಸರ್ಕಾರದ VAT 24.17/- (ಪ್ರತಿ ಲೀಟರ್) ಆಗಿದೆ. ಪೆಟ್ರೋಲ್ ಮೇಲೆ ರಾಜ್ಯ ಸರ್ಕಾರ ಹಾಕುವ VAT ಕೇಂದ್ರ ಸರ್ಕಾರದ ಎಕ್ಸೈಸ್ ಡ್ಯೂಟಿ ಕ್ಕಿಂತ ಹೆಚ್ಚಾಗಿದೆ ಎಂದು ಅವರು ಕಿಡಿ ಕಾರಿದ್ದಾರೆ.

ಇಂದು ತಮ್ಮ ಬಿಟ್ಟಿ ಭಾಗ್ಯಗಳಿಗೆ ಹಣವನ್ನು ಹೊಂದಿಸಲು ಪೆಟ್ರೋಲ್ ಮೇಲಿನ VAT ಹೆಚ್ಚಳ ಮಾಡಿರುವ ಕಾಂಗ್ರೆಸ್ ಸರ್ಕಾರ 2022 ರಲ್ಲಿ ಹಾಗೂ 2000 ಇಸವಿಯಲ್ಲಿ ಏರುತ್ತಿರುವ ಇಂಧನ ದರಗಳ ಮೇಲೆ ಸ್ಪೀಕ್ ಅಪ್ ಇಂಡಿಯಾ ಎಂಬ ಬೃಹತ್ ಚಳುವಳಿಯನ್ನು ಕೇಂದ್ರ ಸರ್ಕಾರದ ವಿರುದ್ಧ ಹಮ್ಮಿಕೊಂಡಿತ್ತು. ಅಸಲೀಗೆ, 2000 ಹಾಗೂ 2022 ರಲ್ಲಿ ಕೋವಿಡ್ ಸೇರಿದಂತೆ, ರಶಿಯಾ-ಯುಕ್ರೇನ್ ಬಿಕ್ಕಟಿನಿಂದ ಇಂಧನ ಮೇಲಿನ ಆಮದು ಬೆಲೆ [Import Prices] ಹೆಚ್ಚಾಗಿದ್ದರಿಂದ ಕೇಂದ್ರ ಸರ್ಕಾರ ಅನಿವಾರ್ಯವಾಗಿ ಇಂಧನ ಬೆಲೆ ಹೆಚ್ಚಿಸಬೇಕಾಗಿತ್ತು ಹೊರತು ಬಡವರಿಗೆ, ಮಾಧ್ಯಮ ವರ್ಗದವರಿಗೆ ಅನಾವಶ್ಯಕವಾಗಿ ಹೊರೆ ಹಾಕಲು ಅಲ್ಲ. ಹೊಣೆಗೇಡಿತನಕ್ಕೆ ಮತ್ತೊಂದು ಹೆಸರೇ ಕಾಂಗ್ರೆಸ್ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News