Trending Video : ಕಾಡಿನಲ್ಲಿ ವಾಸಿಸುವ ಚಿರತೆಗಳು ಕೆಲವೊಮ್ಮೆ ಹಳ್ಳಿ ಅಥವಾ ಪಟ್ಟಣದಂತಹ ಸ್ಥಳಕ್ಕೆ ಪ್ರವೇಶಿಸುತ್ತವೆ. ಇದರ ನಂತರ ಅರಣ್ಯ ಇಲಾಖೆಯವರು ಹಿಡಿಯುತ್ತಾರೆ ಅವುಗಳನ್ನು ಕಾಡಿನಲ್ಲಿ ಬಿಡುತ್ತಾರೆ. ಇತ್ತೀಚೆಗಷ್ಟೇ ಗ್ರಾಮದ ಬದಿಯಲ್ಲಿ ನಿರ್ಮಿಸಿದ್ದ ರಸ್ತೆಗೆ ಚಿರತೆಯೊಂದು ನುಗ್ಗಿತ್ತು. ರಸ್ತೆಬದಿಯಲ್ಲಿ ಮೇಯುತ್ತಿರುವ ಹಸುವಿನ ಮೇಲೆ ದಾಳಿ ಮಾಡಲು ಸಂಚು ರೂಪಿಸುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.
ವಾಸ್ತವವಾಗಿ ಈ ವಿಡಿಯೋವನ್ನು Instagram ನಲ್ಲಿ ಬಳಕೆದಾರರು ಹಂಚಿಕೊಂಡಿದ್ದಾರೆ. ಸಂಜೆಯ ಸಮಯವಾಗಿದ್ದು, ರಸ್ತೆ ಬದಿಯಲ್ಲಿ ಹಸು ಮೇಯುತ್ತಿತ್ತು. ಆಶ್ಚರ್ಯಕರವಾಗಿ, ಚಿರತೆಯೊಂದು ರಹಸ್ಯವಾಗಿ ಹಿಂದೆ ಬಂದಿತು. ಚಿರತೆ ಬಂದರೂ ಹಸುವಿಗೆ ಅದು ಕಾಣಲಿಲ್ಲ.
ಇದನ್ನೂ ಓದಿ : WATCH : ಹೆತ್ತವ್ವನ ಕೊನೆಯಾಸೆ ಈಡೇರಿಸಲು ICUನಲ್ಲಿ ಮದುವೆಯಾದ ಮಗಳು, ಕಣ್ಣೀರು ತರಿಸುತ್ತೆ ವಿಡಿಯೋ
ಇಬ್ಬರ ಮೇಲೂ ಮುಂಭಾಗದಿಂದ ಪ್ರಖರ ಬೆಳಕು ಬೀಳುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಈಗ ಈ ಬೆಳಕು ವಾಹನ ಅಥವಾ ಇನ್ನಾವುದೇ ವಸ್ತುವಾಗಿರಬಹುದು. ಇನ್ನೇನೂ ಕೆಲವೇ ಕ್ಷಣಗಳಲ್ಲಿ ಚಿರತೆ ಹಸುವಿನ ಮೇಲೆ ದಾಳಿ ಮಾಡಬೇಕು ಎನ್ನುವಷ್ಟರಲ್ಲಿ ಮುಂಭಾಗದಿಂದ ಬಂದ ಬೆಳಕು ಹಸುವಿನ ಪ್ರಾಣ ಉಳಿಸಿದೆ. ಈ ಬೆಳಕು ಕಂಡ ಚಿರತೆ ಕಾಡಿನತ್ತ ಓಡಿ ಹೋಗಿದೆ.
ಚಿರತೆ ಎದುರಿಗೆ ಬಂದಾಗ ಹಸು ಹೋಗುವುದನ್ನು ನೋಡಿದೆ. ಆಗ ಗಾಬರಿ ಕೂಡ ಆಗಿದೆ. ಆದರೆ ಅಷ್ಟರೊಳಗೆ ಚಿರತೆ ಬಹಳ ಮುಂದೆ ಹೋಗಿತ್ತು ಮತ್ತು ಹಸು ಮತ್ತೆ ಹುಲ್ಲು ಮೇಯಲು ಪ್ರಾರಂಭಿಸಿತು. ಆ ನಂತರ ಹಿಂಬದಿಯಿಂದ ಬಂದು ಹಸುವಿನ ಮೇಲೆ ದಾಳಿ ಮಾಡಲು ಚಿರತೆ ಪ್ಲ್ಯಾನ್ ಮಾಡಿದೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.
ಇದನ್ನೂ ಓದಿ : ಆಂಟಿ ಪ್ರೀತ್ಸೆ ಅಂತ ಹಿಂದೆ ಬಿದ್ದ ಪಾಗಲ್ ಪ್ರೇಮಿ! ಒಪ್ಪದ ಮಹಿಳೆಯ ಕೊಲ್ಲಲು ಮಿಕ್ಸಿಲ್ಲಿಟ್ಟ ಬಾಂಬ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.