ಅಜ್ಜಿಯೊಂದಿಗೆ ಶಾಸಕರ ಅಪರೂಪದ ಸಂದರ್ಶನ: ಅಜ್ಜಿ ಹೇಳಿದ್ದೇನು ಗೊತ್ತಾ! ಈ ವಿಡಿಯೋ ನೋಡಿ

MLA Viral Video:  ಸಾಗರ ತಾಲ್ಲೂಕಿನಲ್ಲಿ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಶಾಸಕ ಬೇಳೂರು ಗೋಪಾಲಕೃಷ್ಣ, ಈ ಸಂದರ್ಭದಲ್ಲಿ ದಾರಿಯಲ್ಲಿ ಕುಳಿತಿದ್ದ ಅಜ್ಜಿಯೊಬ್ಬಳ ಜೊತೆಗೆ ಮಾತುಕತೆ ನಡೆಸಿದ್ದಾರೆ. 

Written by - Yashaswini V | Last Updated : Jul 31, 2023, 12:19 PM IST
  • ಜನರಿಂದ ಆಯ್ಕೆಯಾಗಿ ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗಬೇಕಾದ ಜನಪ್ರತಿನಿಧಿಗಳು ಜನರ ಕೈಗೆ ಸಿಗುವುದೇ ಕಷ್ಟ
  • ಈ ಕಾಲದಲ್ಲಿ ದಾರಿಯಲ್ಲಿ ಕುಳಿತಿದ್ದ ಅಜ್ಜಿಯೊಂದಿಗೆ ಹರಟೆ ಹೊಡೆದ ಅಪರೂಪದ ಶಾಸಕರೊಬ್ಬರ ವಿಡಿಯೋ
ಅಜ್ಜಿಯೊಂದಿಗೆ ಶಾಸಕರ ಅಪರೂಪದ ಸಂದರ್ಶನ: ಅಜ್ಜಿ ಹೇಳಿದ್ದೇನು ಗೊತ್ತಾ! ಈ ವಿಡಿಯೋ ನೋಡಿ  title=

Viral Video: ರಾಜಕೀಯ ವ್ಯಕ್ತಿಗಳು ಎಂದರೆ ಸಾಮಾನ್ಯವಾಗಿ ಜನ ಸಾಮಾನ್ಯರಿಗೆ ಸುಲಭವಾಗಿ ಸಿಗುವುದೇ ಇಲ್ಲ ಎಂಬ ಅಪವಾಡವಿದೆ. ಇದಕ್ಕೆ ತದ್ವಿರುದ್ಧ ಎಂಬಂತೆ ಅಜ್ಜಿಯೊಂದಿಗೆ ಶಾಸಕರೊಬ್ಬರ ಅಪರೂಪದ ಸಂದರ್ಶನದ ವಿಡಿಯೋ ಸದ್ಯ ಸಖತ್ ವೈರಲ್ ಆಗುತ್ತಿದೆ. 

ಪ್ರಸ್ತುತ, ಸಾಗರ ತಾಲ್ಲೂಕಿನಲ್ಲಿ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಶಾಸಕ ಬೇಳೂರು ಗೋಪಾಲಕೃಷ್ಣ, ಈ ಸಂದರ್ಭದಲ್ಲಿ ದಾರಿಯಲ್ಲಿ ಕುಳಿತಿದ್ದ ಅಜ್ಜಿಯೊಬ್ಬಳ ಜೊತೆಗೆ ಮಾತುಕತೆ ನಡೆಸಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ ಯಾರನ್ನೇ ಕಂಡರೂ ಎಂತದಾ ಸಮಾಚಾರ ಎಂದು ಮಾತಿಗಿಳಿಯುವ ಶಾಸಕ ಬೇಳೂರು ಗೋಪಾಲಕೃಷ್ಣ ಅಜ್ಜಿಯನ್ನು ಕಂಡು  ಎಲ್ಲಿಗೆ ಹೊಗ್ತಿದ್ದಿ, ನಟ್ಟಿಗೆ(ನಾಟಿ ಹಾಕೋಕೆ) ಬಂದಿದ್ಯಾ ಎಂದು ವಿಚಾರಿಸಿದ್ಧಾರೆ. 

ಅಷ್ಟೇ ಅಲ್ಲ, ದಾರಿಯಲ್ಲಿ ರಸ್ತೆ ಬದಿಯ ಕಟ್ಟೆಯ ಮೇಲೆ ಕುಳಿತಿದ್ದ ಅಜ್ಜಿ ಪಕ್ಕದಲ್ಲೇ ಕುಳಿತು ಕುಶಲೋಪರಿ ವಿಚಾರಿಸಿದ್ದಾರೆ. ಪ್ರೀತಿಯಿಂದ ಮಾತನಾಡಿದ ಶಾಸಕರ ಜೊತೆಗೆ ತನ್ನ ಸ್ಥಿತಿಯ ಬಗ್ಗೆ ಕೆಲವೊಂದು ಮಾಹಿತಿ ಹಂಚಿಕೊಂಡ ವೃದ್ದೆ, ತಾನು ಹೀಗೆ ಆಗಾಗ್ಗೆ ಅಡ್ಡಾಡುತ್ತಿರುತ್ತೇನೆ. ವಯಸ್ಸಾಯ್ತು, ಹಾಗಾಗಿ ನಟ್ಟಿ (ನಾಟಿ)  ಮಾಡೋಕೆ ಆಗಿಲ್ಲ ಎಂದಿದ್ದಾರೆ. 

ಇದನ್ನೂ ಓದಿ- ಪಾರ್ಕ್‌ ಬಿಟ್ಟು ಮೆಟ್ರೋದಲ್ಲಿ ರೋಮ್ಯಾನ್ಸ್ ಶುರು ಮಾಡಿದ ಲವ್‌ ಬರ್ಡ್ಸ್‌..! ವಿಡಿಯೋ ವೈರಲ್..

ನೀ ಯಾರೆಂದು ಗೊತ್ತಾಗಿಲ್ಲಪ್ಪ!
ಈ ಸಂದರ್ಭದಲ್ಲಿ, ಕುತೂಹಲಕ್ಕೆ ಶಾಸಕ ನಾನ್ಯಾರು ಅಂತ ಗೊತ್ತಾ ನಿನಗೆ ಎಂದು ಪ್ರಶ್ನಿಸಿದ್ದಾರೆ. ಶಾಸಕರ ಪ್ರಶ್ನೆಗೆ ಸರಳವಾಗಿಯೇ ಪ್ರತಿಕ್ರಿಯಿಸಿದ ಅಜ್ಜಿ, ನೀ ಯಾರೆಂದು ಗೊತ್ತಾಗ್ಲ ನಂಗೆ (ನೀ ಯಾರೆಂದು ಗೊತ್ತಾಗಿಲ್ಲಪ್ಪ!) ಎಂದಿದ್ದಾರೆ. ಈ ವೇಳೆ ನಗುತ್ತಲೇ ಅಜ್ಜಿಗೆ ತನ್ನನ್ನು ಪರಿಚಯಿಸಿಕೊಂಡ ಗೋಪಾಲಕೃಷ್ಣ ಬೇಳೂರು ನಾನು ನಿಮ್ಮ ಕ್ಷೇತ್ರದ ಶಾಸಕ ಎಂದಿದ್ದಾರೆ. ಶಾಸಕರ ಹೆಸರಷ್ಟೇ ತಿಳಿದಿದ್ದ ಅಜ್ಜಿ, ಬೇಳೂರು ಗೋಪಾಲಕೃಷ್ಣ ಅವರಿಗೆ, ದೇವರು ನಿನಗೆ ಒಳ್ಳೆಯದು ಮಾಡ್ಲಪ್ಪ ಎಂದು ಆಶೀರ್ವದಿಸಿದ್ದಾರೆ. 

ಯಾರಿಗೆ ವೋಟು ಹಾಕಿದ್ದಿ!
ಈ ಸಂದರ್ಭದಲ್ಲಿ ಅಜ್ಜಿ ಜೊತೆಗೆ ಇನ್ನಷ್ಟು ಮಾತನಾಡಿದ ಶಾಸಕರು ನಗುತ್ತಲೇ ಹೋಗಲಿ ವೋಟು ಯಾರಿಗೆ ಹಾಕಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಅಜ್ಜಿ ತನ್ನ ಕೈ ತೋರಿಸುತ್ತಾ ಅಭಯಹಸ್ತವನ್ನು ತೋರಿಸಿದ್ದಾಳೆ. ನನಗೆ ಹಾಕಿದ್ಧಾಳಂತೆ ಕಣ್ರೋ ಎಂದು ಶಾಸಕರು ತಮ್ಮವರಿಗೆ ಹೇಳಿದ್ಧಾರೆ. ಈ ಮಧ್ಯೆ ಮಾತು ಮುಂದುವರಿಸಿದ ಅಜ್ಜಿ, ನಾನು ಎಲ್ಲಿಯಾದರೂ ನಿಂತು ಈ ಮಾತನ್ನ ಹೇಳ್ತೀನಿ ಎಂದರು.  ಅದೇ ಸಂದರ್ಭದಲ್ಲಿ ಅಲ್ಲಿದ್ದ ಕಾರ್ಯಕರ್ತರು, ಶಾಸಕರು ಗೆದ್ದಿದ್ದಾರೆ ಎಂದು ವಿವರಿಸಿದರು. ಆಗ ಅಜ್ಜಿ ಹೌದು , ನಮ್ಮ ಊರೆಲ್ಲೆಲ್ಲಾ ಪಟಾಕಿ ಹೊಡೆದಿದ್ದಾರೆ ಎಂದಿದ್ದಾರೆ. 

ಇದನ್ನೂ ಓದಿ- ತನ್ನ ಮಾಲೀಕ ಕೊಚ್ಚಿ ಹೋಗುವನು ಎನ್ನುವ ಭೀತಿ ಈ ಆನೆಗೆ ! ಪಾಲಕನ ಬಗೆಗೆ ಕಾಳಜಿ ಮೆರೆಯುವ ಗಜರಾಣಿಯ ವಿಡಿಯೋ

ಒಟ್ಟಿನಲ್ಲಿ ಜನರಿಂದ ಆಯ್ಕೆಯಾಗಿ ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗಬೇಕಾದ ಜನಪ್ರತಿನಿಧಿಗಳು ಜನರ ಕೈಗೆ ಸಿಗುವುದೇ ಕಷ್ಟ ಎಂಬ ಈ ಕಾಲದಲ್ಲಿ ದಾರಿಯಲ್ಲಿ ಕುಳಿತಿದ್ದ ಅಜ್ಜಿಯೊಂದಿಗೆ ಹರಟೆ ಹೊಡೆದ ಅಪರೂಪದ ಶಾಸಕರೊಬ್ಬರ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. 

ಈ ವೈರಲ್ ವಿಡಿಯೋವನ್ನು ನೀವೂ ಒಮ್ಮೆ ವೀಕ್ಷಿಸಿ: 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News