Monkey Cute Viral Video : ಮಂಗಗಳೆಂದರೆ ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುತ್ತಾರೆ. ಮಂಗನನ್ನು ಮಾರುತಿ ಎಂದು ಪೂಜಿಸುವವರೂ ಇದ್ದಾರೆ. ಸಾಮಾನ್ಯವಾಗಿ ಕೆಲವು ಪ್ರದೇಶಗಳಿಗೆ ಪಿಕ್ ನಿಕ್ ಹೋಗುತ್ತಿದ್ದರೆ ದಾರಿ ಮಧ್ಯೆ ನೂರಾರು ಸಂಖ್ಯೆಯಲ್ಲಿ ಕೋತಿಗಳು ಕಾಣ ಸಿಗುತ್ತವೆ. ಪ್ರವಾಸಿಗಳು ಕೂಡಾ ತಮ್ಮ ವಾಹನಗಳನ್ನು ನಿಲ್ಲಿಸಿ ಹಣ್ಣು- ಆಹಾರ ನೀಡುತ್ತಾರೆ. ಆದರೆ ಒಮ್ಮೊಮ್ಮೆ ಇದು ಕೂಡಾ ಅಪಾಯಕಾರಿ. ಹೀಗೆ ಪ್ರವಾಸಿಗರ ಕೈಯ್ಯಲ್ಲಿ ಆಹಾರ ಇದೆ ಗೊತ್ತಾಗುತ್ತಿದ್ದಂತೆಯೇ ಕೋತಿಗಳು ನಮ್ಮ ಕೈಯ್ಯಲ್ಲಿ ಏನಿರುತ್ತವೆಯೂ ಅದನ್ನು ಕಿತ್ತು ಕೊಳ್ಳಲು ಯತ್ನಿಸುತ್ತವೆ. ಆದರೆ ಕೆಲವೊಮ್ಮೆ ನಾವು ನೀಡುವ ಆಹಾರಕ್ಕೆ ಅವುಗಳು ಬಹಳ ಕೃತಜ್ಞರಾಗಿ ಬಿಡುತ್ತವೆ.
ಜಗತ್ತಿನಲ್ಲಿ ಪ್ರಾಣಿಗಳು, ಪಕ್ಷಿಗಳು ಮತ್ತು ಮಾನವರು ಪರಸ್ಪರ ಪ್ರೀತಿಯಿಂದ ಬದುಕು ನಡೆಸುವುದು ಬಹಳ ಮುಖ್ಯ. ಪ್ರಾಣಿಗಳು ಮತ್ತು ಮನುಷ್ಯರು ಪರಸ್ಪರ ಸಹಾಯ ಮಾಡುವ ಅನೇಕ ವೀಡಿಯೊಗಳನ್ನು ಕಾಲಕಾಲಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತದೆ. ಇವು ಹೆಚ್ಚಾಗಿ ನಮ್ಮನ್ನು ಭಾವುಕರನ್ನಾಗಿಸುತ್ತವೆ.
ಇದನ್ನೂ ಓದಿ : ಇದು ವಿಶ್ವದ ಅತಿ ದೊಡ್ಡ ಆನೆ ! ದೈತ್ಯ ಗಾತ್ರ ಗಜರಾಜನ ವಿಡಿಯೋ
ಇತ್ತೀಚಿಗೆ ಇಂಥದ್ದೇ ಒಂದು ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಇದು ಮನಸ್ಸಿಗೆ ಮುದ ನೀಡುವ ವಿಡಿಯೋ. ನೀರು ಪ್ರತಿಯೊಬ್ಬರಿಗೂ ಬೇಕು. ಅದು ಮನುಷ್ಯರಾಗಲೀ, ಪ್ರಾಣಿಗಳಾಗಲೀ, ಪಕ್ಷಿಗಳಾಗಲೀ. ದಾಹವಾದಾಗ ನೀರು ಸಿಕ್ಕಿಲ್ಲ ಎಂದಾದರೆ ಪ್ರಾಣವೇ ಹೋದಂತೆ ಆಗುತ್ತದೆ. ಸುಡುಬಿಸಿಲಿಗೆ ಗಂಟಲು ಸಂಪೂರ್ಣ ಒಣಗಿರುವಾಗ ಯಾರಾದರೂ ಬಂದು ಒಂದು ತೊಟ್ಟು ನೀರು ಕೂಡಿಸಿದರೆ ಹಾಯ್ ಎಂದೆನಿಸುತ್ತದೆ. ಅದರಲ್ಲೂ ಪ್ರಾಣಿಗಳು ನೀರು ಅರಸಿ ಅವುಗಳಿಗೆ ನೀರುಣಿಸಿದರೆ ಅವುಗಳಿಗೆ ಆಗುವ ಆನಂದ ಹೇಳತೀರದು.
ಮಂಗಗಳಿಗೆ ನೀರು ಕೊಟ್ಟ ವ್ಯಕ್ತಿ :
ಮರಿಗಳೊಂದಿಗೆ ಮಂಗವೊಂದು ರಸ್ತೆಯಲ್ಲಿ ಕುಳಿತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ದಾರಿಹೋಕನೊಬ್ಬ ನೀರಿನ ಬಾಟಲಿಯೊಂದಿಗೆ ಮಂಗಗಳ ಮುಂದೆ ಬರುತ್ತಾನೆ. ಆತ ಕೋತಿಯ ಮುಂದೆ ಬಾಟಲಿಯನ್ನು ತೋರಿಸುತ್ತಾನೆ. ಕೋತಿ ಜಿಗಿದು ನೀರು ಕುಡಿಯಲು ಪ್ರಾರಂಭಿಸುತ್ತದೆ. ಮೊದಲು ಆ ಕೋತಿಗಳು ನೀರು ಕುಡಿಯಲು ಭಯ ಪಡುತ್ತವೆ. ಆದರೆ ಯಾವಾಗ ಆ ವ್ಯಕ್ತಿ ನಿಜವಾಗಿಯೂ ನೀರುಣಿಸುತ್ತಿದ್ದಾನೆ ಎನ್ನುವುದು ಗ್ಯಾರಂಟಿಯಾಗುತ್ತದೆಯೋ ಒಂದೊದೇ ಕೋತಿಗಳು ಸಾಲಿನಲ್ಲಿ ಬರುವುದಕ್ಕೆ ಆರಂಭಿಸುತ್ತವೆ.
ವೈರಲ್ ವೀಡಿಯೊವನ್ನು ಇಲ್ಲಿ ನೋಡಿ:
ಇದನ್ನೂ ಓದಿ : ಕೊಳದ ನೀರಿಗೆ ಸೊಂಡಿಲು ಇಳಿಸಿ ಆಳ ಚೆಕ್ ಮಾಡುತ್ತಿರುವ ಮರಿ ಆನೆ ವಿಡಿಯೋ
ಈ ವಿಡಿಯೋ ಅಂತರ್ಜಾಲದಲ್ಲಿ ವೈರಲ್ :
ಈ ವಿಡಿಯೋವನ್ನುviralbhayani ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ಜೈ ಬಜರಂಗ್ ಬಲಿ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಎರಡು ದಿನಗಳ ಹಿಂದೆ ಪೋಸ್ಟ್ ಮಾಡಲಾದ ಈ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ 12 ಲಕ್ಷಕ್ಕೂ ಹೆಚ್ಚು ಲೈಕ್ಸ್ ಮತ್ತು ಲೆಕ್ಕವಿಲ್ಲದಷ್ಟು ವೀಕ್ಷಣೆಗಳನ್ನು ಗಳಿಸಿದೆ. ಈ ಬಗ್ಗೆ ನೆಟಿಜನ್‌ಗಳು ಕೂಡ ಸಾಕಷ್ಟು ಕಾಮೆಂಟ್‌ಗಳನ್ನು ನೀಡುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.