Elephant Viral Video : ಆನೆ ಅತಿ ಬುದ್ದಿವಂತ ಪ್ರಾಣಿ. ಆನೆ ಮತ್ತು ಮನುಷ್ಯನ ನಡುವೆ ಅವಿನಾಭಾವ ಸಂಬಂಧವಿದೆ. ಆನೆ ತನ್ನನ್ನು ಸಾಕುವ ಮಾವುತನ ಮೇಲೆ ಅತಿಯಾದ ಪ್ರೀತಿ ಕಾಳಜಿ ಹೊಂದಿರುತ್ತದೆ. ತನ್ನ ಮಾಲೀಕನಿಗೆ ಕಿಂಚಿತ್ತೂ ತೊಂದರೆಯಾಗದಂತೆ ನೋಡಿಕೊಳ್ಳುತ್ತದೆ. ಇನ್ನು ಆನೆಯನ್ನು ಭಾವನಾತ್ಮಕ ಜೀವಿ ಎಂದರೆ ತಪ್ಪಾಗಲಾರದು. ಅದೆಷ್ಟೋ ಸಲ ನೊಂದ ಆನೆ ಕಣ್ಣೀರು ಹಾಕುವುದನ್ನು ನಾವು ನೋಡಿರುತ್ತೇವೆ. ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವಿದಿಯೋವೊಂದು ಹರಿದಾಡುತ್ತಿದೆ. ಈ ವಿಡಿಯೋ ಆನೆ ತನ್ನ ಪಾಲಕನ ಜೊತೆಗೆ ಅಂದೆಂಥಾ ಸಂಬಂಧ ಇರಿಸಿಕೊಂಡಿದೆ ಎನ್ನುವುದನ್ನು ಸಾಬೀತು ಮಾಡುತ್ತದೆ.
ಅಂದ ಹಾಗೆ ಈ ಆನೆಯ ಹೆಸರು ಖಮ್ ಮಿಂಗ್. ಮೂರು ತಿಂಗಳ ಹಿಂದೆಯಷ್ಟೇ ಈ ಆನೆಯನ್ನು ರಕ್ಷಿಸಿ ಈ ಅಭಯಾರಣ್ಯಕ್ಕೆ ಸ್ಥಳಾಂತರಿಸಲಾಗಿತ್ತು. ಆನೆಯನ್ನು ರಕ್ಷಿಸಿದ ನಂತರ ಆಕೆಯನ್ನು ಫ್ಲೋ ಎನ್ನುವ ವ್ಯಕ್ತಿ ನೋಡಿಕೊಳ್ಳುತ್ತಿದ್ದಾರೆ. ಅಂದಿನಿಂದ ಈ ಆನೆ ಫ್ಲೋ ಜೊತೆ ಅಗಾಧ ಸಂಬಂಧ ಬೆಳೆಸಿಕೊಂಡಿದ್ದಾಳೆ.
ಇದನ್ನೂ ಓದಿ : Shocking video: 210 ಕೆಜಿ ಭಾರ ಎತ್ತುವಾಗ ಕುತ್ತಿಗೆ ಮುರಿದು ಫಿಟ್ನೆಸ್ ಟ್ರೈನರ್ ಸಾವು!
ಇಲ್ಲಿ ಆನೆಗಳು ಮತ್ತು ಅದರ ಮಾಲೀಕ ಫ್ಲೋ ನೀರಿನಲ್ಲಿರುವುದನ್ನು ಗಮನಿಸಬಹುದು. ಆನೆಗಳು ನೀರಿನಲ್ಲಿ ಆಟವಾಡುತ್ತಿರುವಂತೆಯೇ, ಆ ವ್ಯಕ್ತಿ ನದಿಯ ಮಧ್ಯೆ ಹೋಗುತ್ತಾನೆ. ಆದರೆ ನದಿ ನೀರಿನ ರಭಸವನ್ನು ಅರಿತ ಆನೆ ವ್ಯಕ್ತಿಯ ಕೈಯನ್ನು ಸೊಂಡಿಲಿನಿಂದ ಹಿಡಿದು ಎಳೆದು ತರುತ್ತದೆ. ಫ್ಲೋವನ್ನು ತನ್ನ ಹಿಂಡಿನ ಹತ್ತಿರವೇ ಇಟ್ಟುಕೊಂಡು ಕಾಳಜಿ ಮೆರೆಯುತ್ತದೆ.
ಮಾತ್ರವಲ್ಲ ಎಲ್ಲ ಆ ವ್ಯಕ್ತಿ ತನ್ನಿಂದ ದೂರ ತೆರಳುವನೋ ಎನ್ನುವ ಭಯ ಆನೆಯನ್ನು ಆವರಿಸಿರುವುದನ್ನು ಇಲ್ಲಿ ಗಮನಿಸಬಹುದು. ಹೀಗಾಗಿ ಆ ವ್ಯಕ್ತಿಯನ್ನು ತನ್ನ ಬಳಿಯಿಂದ ಕದಲಲು ಕೂಡಾ ಆನೆ ಬಿಡುವುದಿಲ್ಲ.
Elephant reaches back to protect and help caretaker as they cross the river. The elephant refuses to leave him, keeping him close to the herd to protect him. 🐘❤️😭
The elephant named Kham Ming was rescued and moved to this santuary only three months ago. Her caretaker Flo has… pic.twitter.com/wodT3XAZE8
— GoodNewsMovement (@GoodNewsMVT) July 19, 2023
ಇದನ್ನೂ ಓದಿ : Viral News: ಊರಿನ ಕರೆಂಟ್ ತೆಗೆದಿದ್ದು ಹುಡುಗಿ, ಹೊಡೆತ ತಿಂದಿದ್ದು ಹುಡುಗ!
ಈ ವಿಡಿಯೋವನ್ನು GoodNewsMovement ಎನ್ನುವ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಸಾವಿರಾರು ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಆನೆಯ ಕಾಳಜಿಯನ್ನು ಮೆಚ್ಚಿದ ನೆಟ್ಟಿಗರು ವಿವಿಧ ರೀತಿಯಲ್ಲಿ ಕಾಮೆಂಟ್ ಕೂಡಾ ಮಾಡುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.