ಶುಂಠಿ ಟೀ, ಪೆಪ್ಪರ್ ಟೀ ಓಕೆ.. ಆದ್ರೆ ಮೊಮೊಸ್ ಟೀ ಕುಡಿದಿದ್ದೀರಾ? ಈ ವಿಡಿಯೋ ನೋಡಿ

Momos Tea : ನಾವೆಲ್ಲರೂ ಮಸಾಲೆ, ನಿಂಬೆ, ಶುಂಠಿ, ಏಲಕ್ಕಿ, ತುಳಸಿ ಇತ್ಯಾದಿಗಳೊಂದಿಗೆ ಚಹಾವನ್ನು ಕುಡಿದಿದ್ದೇವೆ. ಆದರೆ ನೀವು ಎಂದಾದರೂ ಮೊಮೊಸ್ ಚಹಾವನ್ನು ಕುಡಿದಿದ್ದೀರಾ?   

Written by - Chetana Devarmani | Last Updated : Nov 4, 2023, 02:03 PM IST
  • ಮೊಮೊಸ್ ಟೀ ಕುಡಿದಿದ್ದೀರಾ?
  • ಮೊಮೊಸ್ ಟೀ ಮಾಡುವ ವಿಡಿಯೋ ವೈರಲ್‌
  • ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋ
ಶುಂಠಿ ಟೀ, ಪೆಪ್ಪರ್ ಟೀ ಓಕೆ.. ಆದ್ರೆ ಮೊಮೊಸ್ ಟೀ ಕುಡಿದಿದ್ದೀರಾ? ಈ ವಿಡಿಯೋ ನೋಡಿ  title=

Momos Tea Video : ಕೆಲವರಿಗೆ ಬೆಳಿಗ್ಗೆ ಒಂದು ಕಪ್ ಚಹಾ ಇಲ್ಲದೆ ದಿನ ಶುರುವಾಗುವುದಿಲ್ಲ. ಇದಲ್ಲದೇ ಸಂಜೆಯ ವೇಳೆಯೂ ಟೀ ಕುಡಿಯುವ ಅಭ್ಯಾಸ ಅನೇಕರಿಗೆ ಇರುತ್ತದೆ. ಸಾಮಾನ್ಯವಾಗಿ ಹಾಲಿನ ಚಹಾವನ್ನು ಹೊರತುಪಡಿಸಿ ನೀವೆಲ್ಲರೂ ಮಸಾಲಾ ಚಹಾ, ನಿಂಬೆ ಚಹಾದ ರುಚಿಯನ್ನು ಪ್ರಯತ್ನಿಸಿರಬೇಕು. ಆದರೆ ನೀವು ಎಂದಾದರೂ ಮೊಮೊಸ್ ಟೀ ಸೇವಿಸಿದ್ದೀರಾ? ಅಂತಹ ಚಹಾದ ಹೆಸರನ್ನು ನೀವು ಈಗ ಮೊದಲ ಬಾರಿಗೆ ಕೇಳಿರಬೇಕು. ಏಕೆಂದರೆ ಇಲ್ಲಿ ಫುಡ್ ಬ್ಲಾಗರ್ ಒಬ್ಬರು ಈ ಚಹಾ ಕುಡಿದಿದ್ದಾರೆ. ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  

ಇದನ್ನೂ ಓದಿ : ಚಾಕಲೇಟ್‌ ಐಸ್ ಕ್ರೀಮ್ ಬಾಯಿ ಚಪ್ಪರಿಸಿ ತಿಂತೀರಾ? ಹಾಗಿದ್ರೆ ಒಮ್ಮೆ ಈ ವಿಡಿಯೋ ನೋಡಿ 

ಮೊಮೊಸ್ ಟೀ ವಿಡಿಯೋ Instagram ನಲ್ಲಿ @foodiekashif ಎಂಬ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ವ್ಯಕ್ತಿಯು ಮೊದಲು ಹಾಲು, ನೀರು, ಚಹಾ ಮತ್ತು ಸಕ್ಕರೆಯನ್ನು ಚೆನ್ನಾಗಿ ಕುದಿಸುವುದನ್ನು ನೀವು ನೋಡಬಹುದು. ಅದು ಕುದಿಯುವಾಗ, ವ್ಯಕ್ತಿಯು ಮೊಮೊಸ್ ಅನ್ನು ಮುರಿದು ಅದರಲ್ಲಿ ಹಾಕುತ್ತಾನೆ. ಇಷ್ಟು ಮಾತ್ರವಲ್ಲದೆ ವ್ಯಕ್ತಿಯು ಮಯೋನೇಸ್ ಮತ್ತು ಮೊಮೊಸ್ ಕೆಂಪು ಚಟ್ನಿಯನ್ನು ಸಹ ಚಹಾಕ್ಕೆ ಸೇರಿಸುತ್ತಾನೆ. ನಂತರ ಒಂದು ಕಪ್ ಚಹಾವನ್ನು ಸೋಸಿಕೊಂಡು ರುಚಿ ನೋಡುತ್ತಾನೆ. ಆದರೆ ರುಚಿ ತುಂಬಾ ಕೆಟ್ಟದಾಗಿರುತ್ತದೆ ಎನಿಸುತ್ತದೆ. ಆತ ತಕ್ಷಣ ಅದನ್ನು ಉಗುಳುತ್ತಾನೆ. 

 

 

ಸೋಶಿಯಲ್ ಮೀಡಿಯಾದಲ್ಲಿ ಮೊಮೊಸ್ ಟೀ ವಿಡಿಯೋ ನೋಡಿದ ನೆಟಿಜನ್‌ಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ಜನರು ಬ್ಲಾಗರ್ ಬಗ್ಗೆ ಒಳ್ಳೆಯದು ಮತ್ತು ಕೆಟ್ಟದ್ದು ಎರಡನ್ನೂ ಮಾತನಾಡುತ್ತಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ವಿಡಿಯೋ ವೈರಲ್ ಆಗಿದೆ. 1.2 ದಶಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. 

ಇದನ್ನೂ ಓದಿ : ತೂಕ ಇಳಿಕೆಗೆ ಬ್ರೌನ್‌ ಬ್ರೆಡ್‌ ತಿಂತೀರಾ? ಒಮ್ಮೆ ಈ ವಿಡಿಯೋ ನೋಡಿ ಜನ್ಮದಲ್ಲೇ ಮುಟ್ಟಲ್ಲ!

(ಸೂಚನೆ: ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊ ಮತ್ತು ನೀಡಿರುವ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಿಂದ ತೆಗೆದುಕೊಳ್ಳಲಾಗಿದೆ. Zee ಕನ್ನಡ ನ್ಯೂಸ್ ಇವುಗಳನ್ನು ಯಾವುದೇ ರೀತಿಯಲ್ಲಿ ಅನುಮೋದಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News