Shocking Video: ಇತ್ತೀಚಿನ ದಿನಗಳಲ್ಲಿ ಜನರು ವೈರಲ್ ವೀಡಿಯೊಗಳನ್ನು ಜನರು ತುಂಬಾ ಇಷ್ಟಪಡುತ್ತಿದ್ದಾರೆ. ಇದೇ ಕಾರಣದಿಂದ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿದಿನ ನೂರಾರು ವೀಡಿಯೊಗಳನ್ನು ಹಂಚಿಕೊಳ್ಳಲಾಗುತ್ತಿದೆ. ಇವುಗಳಲ್ಲಿ ಕೆಲ ವೀಡಿಯೊಗಳು ನೋಡಿದಾಕ್ಷಣ ಜನರಲ್ಲಿ ಭಾರಿ ವೈರಲ್ ಆಗುತ್ತವೆ. ಇವುಗಳಲ್ಲಿ ಕೆಲ ವಿಡಿಯೋಗಳು ತಮಾಷೆಯಿಂದ ಕೂಡಿದ್ದರೆ,ಉಳಿತ ಕೆಲ ವಿಡಿಯೋಗಳು ಆಘಾತಕಾರಿಯಾಗಿರುತ್ತವೆ. ಅಂತಹುದ್ದೆ ಒಂದು ಹಾವು ಮತ್ತು ಕೋತಿಯ ತಮಾಷೆಯ ವಿಡಿಯೋವೊಂದು ಹೊರಹೊಮ್ಮಿದ್ದು, ಇದನ್ನು ನೋಡಿ ಅಚ್ಚರಿಯ ಜೊತೆಗೆ ನಗುವೂ ಕೂಡ ಬರುತ್ತದೆ. ಏಕೆಂದರೆ, ಈ ವಿಡಿಯೋದಲ್ಲಿ ಒಂದು ಕೋತಿಯು ದೈತ್ಯ ಹಾವಿನ ಹವಾ ತೆಗೆದುಹಾಕಿದೆ.
ಇದನ್ನೂ ಓದಿ-OMG! ಮುಂದಿನ 12 ವರ್ಷಗಳಲ್ಲಿ ಮನುಷ್ಯ ತನ್ನ ಯೋಚನೆ ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಕಳೆದುಕೊಳ್ಳುತ್ತಾನಂತೆ!
ಸಾಮಾನ್ಯವಾಗಿ ದೊಡ್ಡ ದೊಡ್ಡ ಪ್ರಾಣಿಗಳು ಹಾವಿನಿಂದ ಅಂತರವನ್ನು ಕಾಯ್ದುಕೊಳ್ಳುತ್ತವೆ. ಏಕೆಂದರೆ, ಹಾವು ಯಾರ ಮೇಲೂ ಕೂಡ ಅಪಾಯಕಾರಿಯಾಗಿ ದಾಳಿ ನಡೆಸಬಹುದು. ನೀವು ಕೂಡ ಇಂತಹ ಹಲವು ವಿಡಿಯೋಗಳನ್ನು ನೋಡಿರಬೇಕು. ಆದರೆ, ಈ ವೈರಲ್ ವೀಡಿಯೊದಲ್ಲಿ, ಸಣ್ಣ ಕೋತಿಯೊಂದು ದೈತ್ಯ ಹಾವಿನ ಹವಾ ಟೈಟ್ ಮಾಡಿದೆ. ವಿಡಿಯೊದಲ್ಲಿ ಹಾವೊಂದು ಖಾಲಿ ಜಾಗದಲ್ಲಿ ಕುಳಿತು ಮಾಡು ಮಾಡುತ್ತಿರುವುದನ್ನು ನೀವು ನೋಡಬಹುದು. ಆಗ ಇದ್ದಕ್ಕಿದ್ದ ಹಾಗೆ ಮಂಗವೊಂದು ಅಲ್ಲಿಗೆ ಎಂಟ್ರಿ ಹೊಡೆಯುತ್ತದೆ. ಮೊದಲಿಗೆ ಕೋತಿ ಶಾಂತವಾಗಿ ಹಾವಿನ ಪಕ್ಕದಲ್ಲಿ ನಿಲ್ಲುತ್ತದೆ. ಆದರೆ, ಮರು ಕ್ಷಣವೇ ಹಾವಿನೊಂದಿಗೆ ಚೆಲ್ಲಾಟವಾಡಲು ಆರಂಭಿಸುತ್ತದೆ. ಮಂಗ ಹಾವನ್ನು ಅದರ ಬಾಲದಿಂದ ಎಳೆಯಲು ಪ್ರಾರಂಭಿಸುತ್ತದೆ. ಮಂಗನ ಈ ತುಂಟಾಟ ಕಂಡು ಹಾವು ಕೂಡ ವಿಚಲಿತವಾಗುತ್ತದೆ. ಆದರೆ, ಕೋತಿ ತನ್ನ ಕಪಿಚೇಷ್ಟೆ ಹಾಗೆಯೇ ಮುಂದುವರೆಸುತ್ತದೆ. ಒಂದು ಅಥವಾ ಎರಡು ಬಾರಿ ಹಾವು ಕೋಟಿಯ ಮೇಲೆ ದಾಳಿ ಕೂಡ ನಡೆಸುತ್ತದೆ. ಕೊನೆಯಲ್ಲಿ ಏನಾಗುತ್ತದೆ ಎಂಬುದನ್ನು ತಿಳಿಯಲು ಮೊದಲು ನೀವು ಈ ವಿಡಿಯೋ ವೀಕ್ಷಿಸಲೇಬೇಕು.
ಹಾವಿನ ಬ್ಯಾಂಡ್ ಬಜಾಯಿಸಿದ ಕೋತಿ
ಚಿಕ್ಕ ಕೋತಿ ಯಾವ ರೀತಿ ಹಾವಿನ ಬ್ಯಾಂಡ್ ಬಜಾಯಿಸಿದೆ ಎಂಬುದನ್ನು ನೋಡಿದರಲ್ಲ. ಹಾವು ಕೋಟಿಯ ಈ ದೃಶ್ಯವನ್ನು ಯಾರೋ ತನ್ನ ಕ್ಯಾಮರಾದಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ. ಈ ವೀಡಿಯೊವನ್ನು Instagram ನಲ್ಲಿ '10_viper_21' ಹೆಸರಿನ ಖಾತೆಯೊಂದಿಗೆ ಹಂಚಿಕೊಳ್ಳಲಾಗಿದೆ. ಇದುವರೆಗೆ ಲಕ್ಷಾಂತರ ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಸಾವಿರಾರು ಮಂದಿ ಇದನ್ನು ಲೈಕ್ ಮಾಡಿದ್ದಾರೆ. ಇನ್ನೊಂದೆಡೆ ಜನರು ಈ ವೀಡಿಯೊಗೆ ತಮ್ಮದೇ ಆದ ಶೈಲಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.