ನವದೆಹಲಿ: ಆರೋಗ್ಯ ಇಲಾಖೆಯ ನಿರ್ಲಕ್ಷ್ಯದ ಮತ್ತೊಂದು ಆಘಾತಕಾರಿ ಪ್ರಕರಣ ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಆಗಾಗ ರಾಜ್ಯ ಆರೋಗ್ಯ ಇಲಾಖೆಯ ನಿರ್ಲಕ್ಷ್ಯದ ಘಟನೆಗಳು ಮುನ್ನೆಲೆಗೆ ಬರುತ್ತಲೇ ಇರುತ್ತವೆ. ಇದೀಗ ರಾಜ್ಯದ ಸಮುದಾಯ ಕೇಂದ್ರವೊಂದರಲ್ಲಿ ಗಾಯಗೊಂಡ ಮಹಿಳೆಯ ತಲೆಯ ಮೇಲಿನ ಗಾಯಕ್ಕೆ ಕಾಂಡೋಮ್ ಪ್ಯಾಕೆಟ್ ಹಚ್ಚಿ ಬ್ಯಾಂಡೇಜ್ ಮಾಡಲಾಗಿದೆ. ಈ ಸಂಪೂರ್ಣ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಕಾಂಡೋಮ್ ಪ್ಯಾಕೆಟ್ ತುಂಬಿ ಗಾಯಕ್ಕೆ ಡ್ರೆಸ್ಸಿಂಗ್!
ಕಳಪೆ ಗುಣಮಟ್ಟದ ಆರೋಗ್ಯ ಸೇವೆಯಿಂದ ಕುಖ್ಯಾತಿ ಗಳಿಸಿರುವ ಮಧ್ಯಪ್ರದೇಶವು ಹಲವಾರು ಬಾರಿ ಸುದ್ದಿಯಾಗಿದೆ. ಇಲ್ಲಿ ಗರ್ಭಿಣಿಯರನ್ನು ಮಂಚದ ಮೇಲೆ ಆಸ್ಪತ್ರೆಗೆ ಕರೆದೊಯ್ಯುವ ಸುದ್ದಿ ಸಾಮಾನ್ಯವಾಗಿದೆ. ಇದೀಗ ವೈದ್ಯಕೀಯ ನಿರ್ಲಕ್ಷ್ಯದ ಮತ್ತೊಂದು ಎದ್ದುಕಾಣುವ ಉದಾಹರಣೆ ಮುಂಚೂಣಿಗೆ ಬಂದಿದೆ. ಇದರಲ್ಲಿ ಮಹಿಳೆಯ ತಲೆಯ ಗಾಯಕ್ಕೆ ಕಾಂಡೋಮ್ ಪ್ಯಾಕೆಟ್ ತುಂಬಿ ಡ್ರೆಸ್ಸಿಂಗ್ ಮಾಡಲಾಗಿದೆ.
ಇದನ್ನೂ ಓದಿ: ಪುರುಷರು-ಮಹಿಳೆಯರಲ್ಲಿ ಯಾರಿಗೆ ಹೆಚ್ಚಿನ ಲೈಂಗಿಕ ಸಂಗಾತಿಗಳು? ಸಮೀಕ್ಷೆ ಹೇಳಿದ್ದೇನು!!
ಆರೋಗ್ಯ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯ
#MadhyaPradesh : If the alleged cotton was not found, then dressing the torn head of an elderly woman with a packet of #condom.
These are not jokes. The case of Morena district of MP.@KashifKakvi Video pic.twitter.com/dA5VetfNDS
— Siraj Noorani (@sirajnoorani) August 20, 2022
ರೇಷ್ಮಾ ಬಾಯಿ ಎಂಬ ಮಹಿಳೆಯ ತಲೆಗೆ ಗಾಯವಾಗಿ ರಕ್ತಸ್ರಾವವಾಗುತ್ತಿತ್ತು. ಇದನ್ನು ತಡೆಯಲು ಕಾಂಡೋಮ್ ಕವರ್ ಅನ್ನು ತಾತ್ಕಾಲಿಕ ಬ್ಯಾಂಡೇಜ್ ಆಗಿ ಬಳಸಿರುವ ಆಘಾತಕಾರಿ ಘಟನೆ ಮೊರೆನಾ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಸಮುದಾಯ ಆರೋಗ್ಯ ಕೇಂದ್ರದಿಂದ ಶಿಫಾರಸು ಮಾಡಲಾದ ರೇಷ್ಮಾ ಬಾಯಿ ಅವರ ಗಾಯದ ಡ್ರೆಸ್ಸಿಂಗ್ ಅನ್ನು ಮೊರೆನಾ ಜಿಲ್ಲಾಸ್ಪತ್ರೆಯ ವೈದ್ಯರು ಬದಲಾಯಿಸಲು ಪ್ರಾರಂಭಿಸಿದ ವೇಳೆ ಘಟನೆ ಬೆಳಕಿಗೆ ಬಂದಿದೆ. ರೇಷ್ಮಾ ಅವರ ತಲೆಗೆ ಗಾಯವಾಗಿದ್ದು, ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ತನಿಖೆ ನಡೆಸಲು ಆದೇಶ
ಜಿಲ್ಲಾಸ್ಪತ್ರೆಯ ವೈದ್ಯರು ತಲೆಯ ಮೇಲಿದ್ದ ಬ್ಯಾಂಡೇಜ್ ತೆರೆದಾಗ ಅದರೊಳಗೆ ಹತ್ತಿಯ ಜೊತೆಗೆ ಕಾಂಡೋಮ್ ಕವರ್ ಇರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಈ ಬಗ್ಗೆ ಮಾತನಾಡಿರುವ ಮೊರೆನಾ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಆರೋಗ್ಯ ಅಧಿಕಾರಿ (CHMO) ರಾಕೇಶ್ ಮಿಶ್ರಾ, ‘ಆರೋಗ್ಯ ಕೇಂದ್ರದಲ್ಲಿ ಮಹಿಳೆಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹತ್ತಿ ಪ್ಯಾಡ್‌ನ ಮೇಲೆ ಕೆಲವು ಕಾರ್ಡ್‌ಬೋರ್ಡ್‌ನಂತಹ ವಸ್ತುಗಳನ್ನು ಹಾಕುವಂತೆ ವಾರ್ಡ್ ಬಾಯ್‌ಗೆ ಕೇಳಿದ್ದರು. ಆದರೆ ಆತ ಕಾಂಡೋಮ್ ಪ್ಯಾಕೆಟ್ ಹಾಕಿದ್ದಾನೆ. ತಕ್ಷಣದಿಂದ ಜಾರಿಗೆ ಬರುವಂತೆ ವಾರ್ಡ್ ಬಾಯ್‍ಯನ್ನು ಸೇವೆಯಿಂದ ತೆಗೆದುಹಾಕಲಾಗಿದೆ. ಈ ಬಗ್ಗೆ ತನಿಖೆ ನಡೆಸಲು ಆದೇಶ ನೀಡಲಾಗಿದೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: Uttarakhand Cloudburst: ಡೆಹ್ರಾಡೂನ್ ನಲ್ಲಿ ಮೇಘಸ್ಪೋಟ-ವೈಷ್ಣೋದೇವಿಯಲ್ಲಿ ಪ್ರವಾಹ: ತತ್ತರಿಸಿದ ‘ಉತ್ತರಾಖಂಡ’
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.